ಮಣಿಪುರದಲ್ಲಿ ಅಸ್ಸಾಂ ರೈಪಲ್ಸ್ ಘಟಕದ ವಿರುದ್ಧ ಸ್ಥಳೀಯ ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಡಿದ್ದಾರೆ.
ಮಣಿಪುರ ಪೊಲೀಸರು, ಅಸ್ಸಾಂ ರೈಫಲ್ಸ್ ಘಟಕದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಆಗಸ್ಟ್ 5 ರಂದು ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ಪೊಲೀಸ್ ತಂಡವನ್ನು ಅಡ್ಡಿ ಮಾಡಿದ್ದಾರೆ ಮತ್ತು ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾದಲ್ಲಿ ಕುಕಿ ದಂಗೆಕೋರರು ಮೂವರು ಮೈತೈ ಜನರನ್ನು ಕೊಲೆ ಮಾಡಿ ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಷ್ಣುಪುರ್ ಜಿಲ್ಲೆಯ ಫೌಗಕ್ಚಾವೊ ಪೊಲೀಸ್ ಠಾಣೆಯಲ್ಲಿ ಈ ಕುರಿತು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಲಾಗಿದೆ. ಆಗಸ್ಟ್ 5 ರ ಬೆಳ್ಳಂಬೆಳಗ್ಗೆ ಮೂವರ ಹತ್ಯೆಯಾದಾಗಿನಿಂದ ಗುಂಡಿನ ಚಕಮಕಿಯ ಘಟನೆಗಳು ವರದಿಯಾಗಿವೆ.
ಮಣಿಪುರ ಪೊಲೀಸರು ಅಸ್ಸಾಂ ರೈಫಲ್ಸ್ ಗಳ ಬದಲಿಗೆ ಸಿಆರ್‌ಪಿಎಫ್ ಮತ್ತು ಮಣಿಪುರ ಪೊಲೀಸ್ ಸಿಬ್ಬಂದಿಯನ್ನು ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್-ಕಾಂಗ್‌ವೈ ರಸ್ತೆಯ ಚೆಕ್ ಪೋಸ್ಟ್‌ನಲ್ಲಿ ನಿಯೋಜಿಸಲು ನಿರ್ಧರಿಸಿದ್ದಾರೆ.
ಮೈತೈ ಪ್ರಭಾವಿ ಮಹಿಳಾ ಜಾಗೃತ ವಿಭಾಗ “ಮೀರಾ ಪೈಬಿಸ್” ಅಸ್ಸಾಂ ರೈಫಲ್ಸ್ ನ್ನು ಸಂಘರ್ಷ ಪೀಡಿತ ರಾಜ್ಯದಿಂದ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಅಸ್ಸಾಂ ರೈಫಲ್ಸ್ ಪಕ್ಷಪಾತ ಮಾಡಿದೆ ಎಂದು ಆರೋಪಿಸಲಾಗಿದೆ.
ಇನ್ನೊಂದು ಕಡೆ ಅಸ್ಸಾಂ ರೈಫಲ್ಸ್ ಘಟಕ ಮತ್ತು ಭಾರತೀಯ ಸೇನೆ ಮೈತೈ ಮಹಿಳಾ ಗುಂಪುಗಳು ತಮ್ಮ ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಫೌಗಕ್‌ಚಾವೊ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ, ಆಗಸ್ಟ್ 5 ರಂದು ಬೆಳಿಗ್ಗೆ 6.30 ರ ಸುಮಾರಿಗೆ 9 ಅಸ್ಸಾಂ ರೈಫಲ್ಸ್‌ಗಳು ತಮ್ಮ ವಾಹನಗಳನ್ನು ಬಳಸಿ ಕ್ವಾಕ್ಟಾ ಮತ್ತು ಫೋಲ್ಜಾಂಗ್ ರಸ್ತೆಯಲ್ಲಿ ಪೊಲೀಸ್ ತಂಡವನ್ನು ತಡೆದಿದ್ದಾರೆ ಎಂದು ಪ್ರಭಾರಿ ಅಧಿಕಾರಿ ಎನ್. ದೇವದಾಸ್ ಸಿಂಗ್ ಆರೋಪಿಸಿದ್ದಾರೆ.
ಕ್ವಾಕ್ಟಾ ಮತ್ತು ಫೋಲ್ಜಾಂಗ್ ರಸ್ತೆಯ ನಡುವಿನ ಕ್ವಾಕ್ಟಾದ ವಾರ್ಡ್ ಸಂಖ್ಯೆ 8 ರಲ್ಲಿ ಕುಕಿ ದಂಗೆಕೋರರು ಆಶ್ರಯ ಪಡೆದಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಪೊಲೀಸ್ ತಂಡ ಅಲ್ಲಿಗೆ ತೆರಳಿದೆ. ಫೋಲ್ಜಾಂಗ್ ನೆರೆಯ ಚುರಾಚಂದಪುರ ಜಿಲ್ಲೆಯಲ್ಲಿದೆ.ಮೂವರು ಮೈತೈ ಸಮುದಾಯದ ಹತ್ಯೆಯಲ್ಲಿ ಕುಕಿ ದಂಗೆಕೋರರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.ಆರೋಪಿಗಳಿಗೆ ಸುಲಭವಾಗಿ ತಪ್ಪಿಸಿಕೊಳ್ಳಲು ಅಸ್ಸಾಂ ರೈಫಲ್ಸ್ ಘಟಕ ಅನುವು ಮಾಡಿಕೊಟ್ಟಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೇ 3 ರಿಂದ ಮಣಿಪುರದಲ್ಲಿ ಮೈತೈ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರದಿಂದಾಗಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 60,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಭದ್ರತಾ ತಂಡಗಳ ನಿಯೋಜನೆಯ ಹೊರತಾಗಿಯೂ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ಮಹಾತ್ಮ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಬಂಧನ


