HomeUncategorizedನ್ಯಾಯ ಪಂಚಾಯಿತಿ ಹೆಸರಿನಲ್ಲಿ ಬಾಲಕಿಗೆ ಅಮಾನುಷ ಥಳಿತ: ಆಂಧ್ರದಲ್ಲಿ ನಡೆದ ದುರ್ಘಟನೆ

ನ್ಯಾಯ ಪಂಚಾಯಿತಿ ಹೆಸರಿನಲ್ಲಿ ಬಾಲಕಿಗೆ ಅಮಾನುಷ ಥಳಿತ: ಆಂಧ್ರದಲ್ಲಿ ನಡೆದ ದುರ್ಘಟನೆ

- Advertisement -
- Advertisement -

ಆಂಧ್ರಪ್ರದೇಶದ ಅನಂತ್‌ಪುರ ಜಿಲ್ಲೆಯ ಕೆ.ಪಿ ದೊಡ್ಡಿ ಎಂಬ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಯುವತಿಯನ್ನು ನ್ಯಾಯ ಪಂಚಾಯಿತಿಯೆದರು ಅಮಾನುಷವಾಗಿ ಥಳಿಸಿರುವ ದುರ್ಘಟನೆ ಜರುಗಿದೆ. ಯುವತಿಯೊಬ್ಬಳನ್ನು ಹಳ್ಳಿಯ ಹಿರಿಯರೊಬ್ಬರು ಥಳಿಸುತ್ತಿರುವ ವಿಡಿಯೋ ಒಂದು  ವೈರಲ್ ಆಗಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿ, 20 ವರ್ಷ ವಯಸ್ಸಿನ ಸೋದರಸಂಬಂಧಿಯನ್ನು ಮದುವೆಯಾಗಿ ಆತನೊಂದಿಗೆ ಓಡಿಹೋಗಿದ್ದಾಳೆ ಎಂಬ ಆರೋಪದ ಮೇಲೆ, ದಂಪತಿಯನ್ನು ಮರಳಿ ಕರೆತಂದು ಗ್ರಾಮದ ಹಿರಿಯರ ಮುಂದೆ ಈ ಘಟನೆ ನಡೆದಿರುವುದು ಉಲ್ಲೇಖವಾಗಿದೆ.

ವಿಡಿಯೋ:

ವೀಡಿಯೊದಲ್ಲಿ, 20 ವರ್ಷ ವಯಸ್ಸಿನ ಹುಡುಗ ತಲೆ ಬಗ್ಗಿಸಿ ನೆಲದ ಮೇಲೆ ಕುಳಿತಿದ್ದಾನೆ. ಹಳ್ಳಿಯ ಹಿರಿಯ ಎಂದು ಕರೆಯಲ್ಪಡುವವನು ಅವನ ಮುಂದೆ ಆ ಹುಡುಗಿಯನ್ನು ಪ್ರಶ್ನಿಸುತ್ತಿದ್ದಾನೆ. ಅವಳು ನೀಡುವ ಉತ್ತರವು ಅವನನ್ನು ಅಸಮಾಧಾನಗೊಳಿಸುತ್ತದೆ ಮತ್ತು ಅವನು ಅವಳನ್ನು ಅನೇಕ ಬಾರಿ, ಪದೇ ಪದೇ ತನ್ನ ಕೈಗಳಿಂದ ಮತ್ತು ನಂತರ ಕೋಲಿನಿಂದ ಹೊಡೆಯಲು ಪ್ರಾರಂಭಿಸುತ್ತಾನೆ.

ಅನಂತ್‌ಪುರ ಜಿಲ್ಲಾ ಪೊಲೀಸ್ ಮುಖ್ಯಸ್ಥ ಬಿ ಯೆಸುಬಾಬು ಘಟನೆ ಕುರಿತು ಮಾತನಾಡಿದ್ದು ‘ಗ್ರಾಮದ ಹಿರಿಯರ ವಿರುದ್ಧ ದೂರು ನೀಡಲು ಯಾರೂ ಮುಂದೆ ಬರುತ್ತಿಲ್ಲ, ಆಕೆಯ ಪೋಷಕರೂ ಸಹ.’ ಹಿರಿಯರು ತಮ್ಮ ಪರವಾಗಿ ಮಧ್ಯಪ್ರವೇಶಿಸಿಸಿದ್ದರಿಂದ ಅವರು ದೂರು ನೀಡಲು ಸಿದ್ಧರಿಲ್ಲ ಎಂದಿದ್ದಾರೆ.

ಬಾಲಕಿ ದೂರು ನೀಡುತ್ತಾರೆಯೇ ಎಂದು ಪರಿಶೀಲಿಸಲು ಪೊಲೀಸರು ಮಹಿಳಾ ಕಾನ್‌ಸ್ಟೆಬಲ್‌ರನ್ನು ಅಲ್ಲಿಗೆ ಕಳುಹಿಸಿದ್ದರು. ಆ ಹುಡುಗಿಯು ಹುಡುಗನೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದಾಳೆಂದು ಉಲ್ಲೇಖಿಸಿದರೆ, ಪೋಕ್ಸೊ ಕಾಯ್ದೆಯನ್ವಯ ಕೇಸು ದಾಖಲಿಸಬಹುದೆಂಬ ಭಯದಿಂದ ಆಕೆಯೂ ದುರು ದಾಖಲಿಸಿಲ್ಲ.

ಯಾವುದೇ ಔಪಚಾರಿಕ ದೂರು ದಾಖಲಿಸದಿದ್ದರೆ, ಪೊಲೀಸರು ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಅರಿವಿನ ಕೊರತೆಯಿಂದ ಆ ಮಕ್ಕಳು ಹಾಗೆ ಮಾಡಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ಅವರು ಯುವಜನರಿಗೆ ಸಲಹೆ ನೀಡಬೇಕು, ನೈತಿಕ ಪೊಲೀಸರಂತೆ ವರ್ತಿಸಬಾರದು. ಆಘಾತಕಾರಿ ಸಂಗತಿಯೆಂದರೆ, ಆ ಹುಡುಗಿಯನ್ನು ಕೆಟ್ಟದಾಗಿ ಥಳಿಸಿದಾಗ ಅನೇಕ ಗ್ರಾಮಸ್ಥರು ಮೂಕ ಸಾಕ್ಷಿಯಾಗಿದ್ದರು ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...