Homeಚಳವಳಿಇವಿಯಂ ವಿರೋಧಿಸಿ ರಾಷ್ಟ್ರ ಸುತ್ತುವ ವಿಭಿನ್ನ ಮತ್ತು ಏಕಾಂಗಿ ಹೋರಾಟವೊಂದು ಇಲ್ಲಿದೆ ನೋಡಿ

ಇವಿಯಂ ವಿರೋಧಿಸಿ ರಾಷ್ಟ್ರ ಸುತ್ತುವ ವಿಭಿನ್ನ ಮತ್ತು ಏಕಾಂಗಿ ಹೋರಾಟವೊಂದು ಇಲ್ಲಿದೆ ನೋಡಿ

- Advertisement -
- Advertisement -

ಇವಿಎಂ ಬ್ಯಾನ್ ಮಾಡಬೇಕು ಮತ್ತು ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಬೇಕೆಂದು ಹಲವು ಹೋರಾಟಗಳು ದೇಶಾದ್ಯಂತ ನಡೆಯುತ್ತಿವೆ. ಅವುಗಳ ಸಾಲಿಗೆ ಇಲ್ಲೊಂದು ವಿಭಿನ್ನ ಪ್ರಯತ್ನವೂ ಸೇರ್ಪಡೆಯಾಗಿ ದೇಶದ ಗಮನ ಸೆಳೆಯುತ್ತಿದೆ. ಅದು ಕೂಡ ಏಕಾಂಗಿ ಹೋರಾಟ.

ಉತ್ತರಖಂಡದ ರುದ್ರಪುರ್ ದ ನಿವಾಸಿಯೊಬ್ಬರು ಇವಿಎಂ ಬ್ಯಾನ್ ಮಾಡಬೇಕು ಮತ್ತು ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಬೇಕೆಂಬ ಘೋಷಣೆಯ ಬ್ಯಾನರ್ ಅನ್ನು ಚಿಕ್ಕ ಬಂಡಿಗೆ ಅಂಟಿಸಿ ಬೆನ್ನಿಗೆ ಕಟ್ಟಿಕೊಂಡು ದೇಶ ತಿರುಗಲು ಹೊರಟಿದ್ದಾರೆ. ಆ ಬಂಡಿಗೆ ಎರಡು ಭಾರತದ ತ್ರಿವರ್ಣ ಧ್ವಜವನ್ನು ಕಟ್ಟಿ ಹಾರಿಸುವುದು ವಿಶೇಷವಾಗಿದೆ.

ನಾನು ರುದ್ರಪುರದಿಂದ ಬರುತ್ತಿದ್ದೇನೆ. ಇಲ್ಲಿಂದ ಜೈಪುರ-ಮುಂಬೈ-ಚನ್ನೈ-ಕಲ್ಕತ್ತಾ ಮುಗಿಸಿ ದೆಹಲಿಗೆ ತಲುಪುತ್ತೇನೆ. ಇವಿಎಂ ಬ್ಯಾನ್ ಮಾಡಬೇಕು ಮತ್ತು ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಬೇಕೆಂದು ನನ್ನ ಹಕ್ಕೊತ್ತಾಯ. ಇವಿಯಂನಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ. ಹಾಗಾಗಿ ಪ್ರಜಾಪ್ರಭುತ್ವ ರಕ್ಷಿಸಲು ನಾನು ಈ ಯಾತ್ರಾ ಹೋರಾಟ ಕೈಗೊಂಡಿದ್ದೇನೆ ಎನ್ನುತ್ತಾರೆ.

ಇದು ಅದಾನಿ ಮತ್ತು ಅಂಬಾನಿಯವರ ಗುಲಾಮಿ ಸರ್ಕಾರವಾಗಿದೆ. ಅವರಿಗಾಗಿ ಕೆಲಸ ಮಾಡುತ್ತಾರೆ. ಮೋದಿಯವರು ಜನರ ಓಟಿನಿಂದ ಗೆದ್ದಿಲ್ಲ. ಹಾಗಾಗಿ ಅವರು ಜನರಿಗಾಗಿ ಕೆಲಸ ಮಾಡುತ್ತಿಲ್ಲ. ಹಿಟ್ಲರ್ ಶಾಹಿ ಆಡಳಿತ ನಡೆಸುತ್ತಿದ್ದಾರೆ. ಇದರಿಂದ ದೇಶ ಹಾಳಾಗುತ್ತಿದೆ ಎಂದಿದ್ದಾರೆ.

ಯುವಜನರು ಮೋದಿಗೆ ಓಟು ಹಾಕಿದ್ದಾರೆ. ಇನ್ನು ಅವರು ಪಕೋಡಾ ಮಾರಬೇಕಷ್ಟೆ ಎಂದು ಚಟಾಕಿ ಹಾರಿಸಿದ್ದಾರೆ. ಅವರ ವಿಡಿಯೋ ನೋಡಿ.

ಉತ್ತರಖಂಡದಿಂದ ಹೊರಟು ಜೈಪುರ, ಮುಂಬೈ ಮಾರ್ಗವಾಗಿ ಚನ್ನೈಗೆ ಬಂದು ಇಲ್ಲಿಂದ ಕಲ್ಕತ್ತ ಮಾರ್ಗವಾಗಿ ದೆಹಲಿ ತಲುಪುವುದು ಸುಲಭದ ಮಾತಲ್ಲ. ಆದರೂ ಅವರಲ್ಲಿ ಆ ಜೋಶ್ ಮತ್ತು ಉತ್ಸಾಹ ಕಾಣುತ್ತಿದೆ. ನೋಡೋಣ ಮುಂದೆ ಏನಾಗುತ್ತದೆ ಎಂದು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...