5 ವರ್ಷದ ಬಾಲಕನನ್ನು ವೃದ್ಧನೊಬ್ಬ ನೆಲಕ್ಕೆ ಬಡಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿ ಪದೇ ಪದೇ ಮಗುವನ್ನು ನೆಲಕ್ಕೆ ಎಸೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ದಾಳಿಕೋರನನ್ನು 52 ವರ್ಷದ ಓಂಪ್ರಕಾಶ್ ಎಂದು ಪೊಲೀಸರು ಗುರುತಿಸಿದ್ದಾರೆ.
ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.ಬಾಲಕನಿಗೆ ಈ ರೀತಿ ನೆಲಕ್ಕೆ ಎಸೆದು ಯಾಕೆ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿಲ್ಲ.
ಸ್ಥಳೀಯರ ಪ್ರಕಾರ ಆರೋಪಿ ಸಪ್ತಕೋಸಿ ಯಾತ್ರೆ ನಡೆಸುತ್ತಿದ್ದ. ಮಗುವಿನ ತಂದೆ ಅದೇ ಮಾರ್ಗದಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದರು.
ಕ್ಷುಲ್ಲಕ ಕಾರಣಕ್ಕೆ ಓಂಪ್ರಕಾಶ್ ಅಪ್ರಾಪ್ತನನ್ನು ಎತ್ತಿಕೊಂಡು ಹಲವು ಬಾರಿ ನೆಲದ ಮೇಲೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ವೇಳೆ ಸಾರ್ವಜನಿಕರ ಥಳಿತದಿಂದ ಯಾತ್ರಿಕ ಗಾಯಗೊಂಡಿದ್ದಾನೆ. ಆತನಿಗೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧೀಕ್ಷಕ (ಗ್ರಾಮೀಣ) ತ್ರಿಗುನ್ ಬಿಸೆನ್, ಆರೋಪಿಯ ಆರೋಗ್ಯ ಚೇತರಿಕೆ ಬಳಿಕ ವಿಚಾರಣೆ ನಡೆಸಲಾಗುವುದು. ವಿಚಾರಣೆ ಬಳಿಕವೇ ಕೃತ್ಯಕ್ಕೆ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: 1200 ಕಾರುಗಳ ಜೊತೆ ಮೆರವಣಿಗೆಯಲ್ಲಿ ತೆರಳಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಬಿಜೆಪಿ ಶಾಸಕ


