Homeಮುಖಪುಟಕೇಂದ್ರದ ಗೃಹ, ರೈಲ್ವೆ, ಬ್ಯಾಂಕ್‌ ಸಿಬ್ಬಂದಿಗಳ ಮೇಲೆ ಹೆಚ್ಚು ಭ್ರಷ್ಟಾಚಾರದ ದೂರು ದಾಖಲು:ಸಿವಿಸಿ ವರದಿ

ಕೇಂದ್ರದ ಗೃಹ, ರೈಲ್ವೆ, ಬ್ಯಾಂಕ್‌ ಸಿಬ್ಬಂದಿಗಳ ಮೇಲೆ ಹೆಚ್ಚು ಭ್ರಷ್ಟಾಚಾರದ ದೂರು ದಾಖಲು:ಸಿವಿಸಿ ವರದಿ

- Advertisement -
- Advertisement -

2022ರಲ್ಲಿ ಅತಿ ಹೆಚ್ಚು ಭ್ರಷ್ಟಾಚಾರದ ದೂರುಗಳು ಕೇಂದ್ರ ಗೃಹ ಸಚಿವಾಲಯದ ಉದ್ಯೋಗಿಗಳ ವಿರುದ್ಧ, ರೈಲ್ವೆ ಮತ್ತು ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವವರ ವಿರುದ್ಧ ದಾಖಲಾಗಿವೆ ಎಂದು ಕೇಂದ್ರ ಜಾಗೃತ ಆಯೋಗ(ಸಿವಿಸಿ)(ಸೆಂಟ್ರಲ್ ವಿಜಿಲೆನ್ಸ್ ಕಮಿಷನ್) ಇತ್ತೀಚಿನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ 2022ರಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿನ ವಿವಿಧ ಗ್ರೇಡ್ ನ ಅಧಿಕಾರಿಗಳ ವಿರುದ್ಧ ಒಟ್ಟು 1,15,203 ದೂರುಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 85,437 ಕೇಸ್ ಗಳ ವಿಲೇವಾರಿ ಮಾಡಲಾಗಿದ್ದು, 29,766 ಬಾಕಿ ಉಳಿದಿವೆ ಎಂದು ವರದಿ ತಿಳಿಸಿದೆ.

ಕೇಂದ್ರ ಜಾಗೃತ ಆಯೋಗ ಈ ಕುರಿತು ಪರಿಶೀಲಿಸಲು ರಾಜ್ಯಗಳ ಮುಖ್ಯ ವಿಜಿಲೆನ್ಸ್ ಅಧಿಕಾರಿಗಳಿಗೆ ಮೂರು ತಿಂಗಳ ಕಾಲಾವಧಿಯನ್ನು ನೀಡಿದೆ ಎಂದು ವರದಿ ತಿಳಿಸಿದೆ.

ಗೃಹ ಸಚಿವಾಲಯದ ಸಿಬ್ಬಂದಿಗಳಿಗೆ ಸಂಬಂಧಿಸಿದ  46,643 ದೂರುಗಳು ಕಳೆದ ವರ್ಷ ಬಂದಿವೆ. ರೈಲ್ವೆಯಲ್ಲಿ  10,580 ಮತ್ತು ಬ್ಯಾಂಕ್‌ಗಳಲ್ಲಿ 8,129 ದೂರುಗಳು ಬಂದಿವೆ ಎಂದು ವರದಿ ತಿಳಿಸಿದೆ.

ಗೃಹ ಸಚಿವಾಲಯದ ಉದ್ಯೋಗಿಗಳ ವಿರುದ್ಧದ ಒಟ್ಟು ದೂರುಗಳಲ್ಲಿ 23,919 ವಿಲೇವಾರಿಯಾಗಿದೆ ಮತ್ತು 22,724 ವಿಲೇವಾರಿಗೆ ಬಾಕಿ ಇದೆ. 19,198 ಮೂರು ತಿಂಗಳಿಗಿಂತ ಹೆಚ್ಚು ಕಾಲಗಳಿಂದ ಬಾಕಿಯಿದೆ ಎಂದು ವರದಿ ಹೇಳಿದೆ.

ರೈಲ್ವೆಯು 9,663 ದೂರುಗಳನ್ನು ವಿಲೇವಾರಿ ಮಾಡಿದ್ದರೆ, 917  ಪ್ರಕರಣಗಳು  ಬಾಕಿ ಉಳಿದಿವೆ. 9 ಪ್ರಕರಣ ಮೂರು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಇದೆ ಎಂದು ಇತ್ತೀಚೆಗೆ ಸಾರ್ವಜನಿಕವಾಗಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.

ಬ್ಯಾಂಕ್‌ಗಳು 7,762 ಭ್ರಷ್ಟಾಚಾರ ದೂರುಗಳನ್ನು ವಿಲೇವಾರಿ ಮಾಡಿದ್ದು, 367 ಬಾಕಿ ಉಳಿದಿವೆ ಎಂದು ವರದಿ ತಿಳಿಸಿದೆ.

CVCಯ ವರದಿಯ ಪ್ರಕಾರ, ಕಲ್ಲಿದ್ದಲು ಸಚಿವಾಲಯದಲ್ಲಿರುವ  ಉದ್ಯೋಗಿಗಳ ವಿರುದ್ಧ 4,304 ದೂರುಗಳು ದಾಖಲಾಗಿದೆ ಅದರಲ್ಲಿ  4,050 ಪ್ರಕರಣ ವಿಲೇವಾರಿ ಮಾಡಲಾಗಿದೆ. 4,236 ಪ್ರಕರಣ ಕಾರ್ಮಿಕ ಸಚಿವಾಲಯದ ವಿರುದ್ಧ ದಾಖಲಾಗಿದ್ದು ಅದರಲ್ಲಿ  4,016 ಪ್ರಕರಣ ವಿಲೇವಾರಿ ಮಾಡಲಾಗಿದೆ.  2,617 ಪ್ರಕರಣಗಳು ಪೆಟ್ರೋಲಿಯಂ ಸಚಿವಾಲಯದ ಉದ್ಯೋಗಿಗಳ ವಿರುದ್ಧ ದಾಖಲಾಗಿದೆ. ಅದರಲ್ಲಿ  2,409 ಪ್ರರಕಣಗಳ ವಿಲೇವಾರಿ ಮಾಡಲಾಗಿದೆ.

ಇದನ್ನು ಓದಿ: ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ ಪುನರ್ ರಚನೆ: ಸಚಿನ್ ಪೈಲಟ್, ಶಶಿ ತರೂರ್ ಗೆ ಸ್ಥಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...