ನಿರ್ಮಾಣ ಹಂತದ ರೈಲ್ವೇ ಬ್ರಿಡ್ಜ್ ಕುಸಿದು ಬಿದ್ದು 17 ಮಂದಿ ಮೃತಪಟ್ಟ ಘಟನೆ ಮಿಜೋರಾಂನ ಸೈರಾಂಗ್‌ನಲ್ಲಿ ಐಜ್ವಾಲ್ ಬಳಿಯಲ್ಲಿ ನಡೆದಿದೆ.
ಘಟನೆಯ ಕುರಿತ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರು ಮಾಹಿತಿ ನೀಡಿದ್ದು, ಈ ಕುರಿತು ಚಿತ್ರ ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಾಯಿರಾಂಗ್‌ನಲ್ಲಿ ನಿರ್ಮಾಣ ಸೇತುವೆ ಕುಸಿದು ಸುಮಾರು 17 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸೇತುವೆಯ ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೇತುವೆ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆ ಬಗ್ಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಮೃತರಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕಾರ್ಮಿಕರು ಸೇರಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈ ಕುರಿತು ಪ್ರತಿಕ್ರಿಯಿಸಿ, ಮಿಜೋರಾಂನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆಯ ಕುಸಿತದ ಬಗ್ಗೆ ತಿಳಿದು ಆಘಾತಕ್ಕೊಳಗಾದೆ. ಘಟನೆಯಲ್ಲಿ ನಮ್ಮ ಮಾಲ್ಡಾ ಜಿಲ್ಲೆಯ ಕೆಲ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಳಿಗಾಗಿ ಮಿಜೋರಾಂ ಆಡಳಿತದೊಂದಿಗೆ ಮಾತುಕತೆ ನಡೆಸಲು ನನ್ನ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ. ಮಾಲ್ಡಾ ಜಿಲ್ಲಾಡಳಿಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲು ದುಃಖಿತ ಕುಟುಂಬಗಳನ್ನು ಭೇಟಿಗೆ ಸೂಚಿಸಲಾಗಿದೆ. ನಾವು ಸಂತ್ರಸ್ತರ ಕುಟುಂಬಕ್ಕೆ ಸಾಧ್ಯವಾದಷ್ಟು ಬೇಗ ಪರಿಹಾರವನ್ನು ನೀಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನು ಓದಿ: ಸವರ್ಣಿಯ ಶಾಸಕನಿಂದ ಹಲ್ಲೆಗೊಳಗಾಗಿ 17 ತಿಂಗಳು ಆಸ್ಪತ್ರೆ ಪಾಲಾದ ದಲಿತ ಎಂಜಿನಿಯರ್


