Homeಮುಖಪುಟಸವರ್ಣಿಯ ಶಾಸಕನಿಂದ ಹಲ್ಲೆಗೊಳಗಾಗಿ 17 ತಿಂಗಳು ಆಸ್ಪತ್ರೆ ಪಾಲಾದ ದಲಿತ ಎಂಜಿನಿಯರ್

ಸವರ್ಣಿಯ ಶಾಸಕನಿಂದ ಹಲ್ಲೆಗೊಳಗಾಗಿ 17 ತಿಂಗಳು ಆಸ್ಪತ್ರೆ ಪಾಲಾದ ದಲಿತ ಎಂಜಿನಿಯರ್

- Advertisement -
- Advertisement -

ರಾಜಸ್ಥಾನದ ಧೋಲ್‌ಪುರದಲ್ಲಿ ಇಂಜಿನಿಯರ್ ಆಗಿದ್ದ ದಲಿತ ಸಮುದಾಯದ ಹರ್ಷಾಧಿಪತಿ ಅವರ ಮೇಲೆ  ಕಾಂಗ್ರೆಸ್ ಶಾಸಕ ಗಿರರಾಜ್ ಸಿಂಗ್ ಮಾಲಿಂಗ ಮತ್ತು ತಂಡ  ಹಲ್ಲೆ ನಡೆಸಿದ್ದರು. ಕಳೆದ ವರ್ಷ ಮಾರ್ಚ್ 28 ರಂದು ಘಟನೆ ನಡೆದಿದ್ದು ಆರೋಪಪಟ್ಟಿ ಇನ್ನು ಕೂಡ ಸಲ್ಲಿಕೆಯಾಗಿಲ್ಲ ಎನ್ನಲಾಗಿದೆ.

ಹರ್ಷಾಧಿಪತಿ ಸರಕಾರದ ವಿದ್ಯುತ್ ಬಿಲ್ ವಸೂಲಾತಿಗಾಗಿ ಗ್ರಾಮಗಳಿಗೆ ತೆರಳಿದ್ದರು. ಹಲವು ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟದವರಲ್ಲಿ ಬಿಲ್ ಕಟ್ಟುವಂತೆ ಆಗ್ರಹಿಸಿದ್ದರು. ಈ ವೇಳೆ ಜನರು  ನನ್ನ ಜಾತಿಯನ್ನು ಕೇಳಿದರು ಮತ್ತು ನನ್ನನ್ನು ಸುತ್ತುವರೆದರು. ನಾನು ಠಾಕೂರ್ ಗ್ರಾಮವನ್ನು ಪ್ರವೇಶಿಸಲು ಹೇಗೆ ಧೈರ್ಯ ಮಾಡಿದ್ದೇನೆ ಎಂದು ಕೇಳಿದರು. ವ್ಯಕ್ತಿಯೊಬ್ಬರು ನನ್ನನ್ನು ಶಾಸಕ ಮಾಲಿಂಗ ಎಂದು ಹೇಳಿದ ವ್ಯಕ್ತಿಯೊಂದಿಗೆ ಫೋನ್‌ನಲ್ಲಿ ಮಾತನಾಡುವಂತೆ ಹೇಳಿದರು. ಅವರು ನನ್ನನ್ನು ನಿಂದಿಸಿದರು ಮತ್ತು ಬೆದರಿಕೆ ಹಾಕಿದರು ಎಂದು ಹರ್ಷಾಧಿಪತಿ ಆರೋಪಿಸಿದ್ದಾರೆ.

ಮಾರ್ಚ್ 28 ರಂದು ರಜಪೂತ ಸಮುದಾಯದ, ಮೂರು ಬಾರಿ ಶಾಸಕರಾಗಿದ್ದ ಮಾಲಿಂಗ ಅವರು ತಮ್ಮ ಸಹಚರರೊಂದಿಗೆ ತಮ್ಮ ಕಚೇರಿಗೆ ನುಗ್ಗಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹರ್ಷಾಧಿಪತಿ ಆರೋಪಿಸಿದ್ದಾರೆ. ಅವರನ್ನು ಮೊದಲು ಆಗ್ರಾದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಹೇಳಿದ್ದಾರೆ.

ಆ ವೇಳೆ ಮಾಲಿಂಗ ಅವರು ಆರೋಪಗಳನ್ನು ಸುಳ್ಳು ಮತ್ತು ಆಧಾರರಹಿತ ಎಂದು ಕರೆದಿದ್ದರು ಮತ್ತು ಕೆಲವು ಬಿಜೆಪಿ ನಾಯಕರ ಆಜ್ಞೆಯ ಮೇರೆಗೆ ಎಫ್‌ಐಆರ್‌ನಲ್ಲಿ ತನ್ನ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಿದ್ದರು.

ಮಾಲಿಂಗ ಸೇರಿ ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ನಂತರ, ರಾಜಸ್ಥಾನ ಪೊಲೀಸರು ಇತರ ಆರೋಪಿಗಳನ್ನು ಬಂಧಿಸಿದ್ದು, ಶಾಸಕ ಮಾಲಿಂಗ ಅವರನ್ನು ಬಂಧಿಸಿಲ್ಲ.

ಮೇ 11, 2022 ರಂದು ಅವರು ಗೆಹ್ಲೋಟ್ ಅವರನ್ನು ಭೇಟಿಯಾದ ನಂತರ ಅವರು ಪೊಲಿಸರಿಗೆ ಶರಣಾದರು. ಧೋಲ್‌ಪುರದ ಸ್ಥಳೀಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಇದರ ಮರುದಿನ ಕೋವಿಡ್‌ ಇದೆ ಎಂದು  ಆಸ್ಪತ್ರೆಗೆ ಸೇರಿದ್ದರು. ಒಂದು ವಾರದಲ್ಲಿ ಮಾಲಿಂಗ ಅವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು.

28 ವರ್ಷ ವಯಸ್ಸಿನ ಹರ್ಷಾಧಿಪತಿ ಘಟನೆ ಬಳಿಕ ಆಸ್ಪತ್ರೆಯ ಕೊಠಡಿಯಲ್ಲಿ ನಡೆದಾಡಲು 17 ತಿಂಗಳುಗಳು ಬೇಕಾಗಿದೆ. ಹರ್ಷಾಧಿಪತಿ ದಿನವಿಡಿ ಹಾಸಿಗೆಯ ಮೇಲೆ ಮಲಗಿರುತ್ತಿದ್ದರು. ಹರ್ಷಾಧಿಪತಿ ಅವರಿಗೆ ಮೂಳೆ ಮುರಿತ ಸೇರಿದಂತೆ ಅನೇಕ ಭಾಗಗಳಲ್ಲಿ ಮುರಿತ ಉಂಟಾಗಿತ್ತು  ಎಂದು ಸರ್ಕಾರಿ ವೈದ್ಯರೊಬ್ಬರು ತಿಳಿಸಿದ್ದಾರೆ.

ನನ್ನ ದೈಹಿಕ ಗಾಯಗಳು  ಗುಣವಾಗಿದ್ದರೂ, ನಾನು ಪ್ರತಿದಿನ ಅನ್ಯಾಯದ ಭಾವನೆ ಅನುಭವಿಸುತ್ತಿದ್ದೇನೆ. ಶಾಸಕ ಗಿರರಾಜ್ ಸಿಂಗ್ ಮಾಲಿಂಗ ಅವರು ನನ್ನ ಮೇಲೆ ಕುರ್ಚಿ ಎಸೆದು, ಜಾತಿ ನಿಂದನೆಗಳನ್ನು ಮಾಡಿದರು. ಒಂದೂವರೆ ವರ್ಷ ಕಳೆದರೂ ನ್ಯಾಯಕ್ಕಾಗಿ ಕಾಯುತ್ತಿದ್ದೇನೆ. ಆರೋಪಿಯನ್ನು ರಕ್ಷಿಸಲಾಗುತ್ತಿದೆ ಎಂದು ಸಂತ್ರಸ್ತ ಹರ್ಷಾಧಿಪತಿ ಹೇಳಿದ್ದಾರೆ.

ಇದನ್ನು ಓದಿ: ಆದಿವಾಸಿ ಯುವಕನ ಎನ್‌ಕೌಂಟರ್: ಮರುತನಿಖೆಗೆ ಆದೇಶಿಸಿದ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read