Homeಮುಖಪುಟಹರ್ಯಾಣ: ಅನುಮತಿ ಇಲ್ಲದಿದ್ದರೂ ಜಲಾಭಿಷೇಕ ಯಾತ್ರೆ ನಡೆಸಲು ಮುಂದಾದ ವಿಹೆಚ್‌ಪಿ

ಹರ್ಯಾಣ: ಅನುಮತಿ ಇಲ್ಲದಿದ್ದರೂ ಜಲಾಭಿಷೇಕ ಯಾತ್ರೆ ನಡೆಸಲು ಮುಂದಾದ ವಿಹೆಚ್‌ಪಿ

- Advertisement -
- Advertisement -

ಹಿಂಸಾಚಾರ ಪೀಡಿತ ಹರ್ಯಾಣದ ನುಹ್ ನಲ್ಲಿ ಆಗಸ್ಟ್ 28ಕ್ಕೆ ನಿಗದಿಪಡಿಸಲಾಗಿದ್ದ ವಿಶ್ವಹಿಂದೂಪರಿಷತ್‌ನ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಆದರೆ ಸ್ಥಳೀಯ ವಿಹೆಚ್ ಪಿ ನಾಯಕ ನಮಗೆ ಮೆರವಣಿಗೆ ನಡೆಸಲು ಯಾರ ಅನುಮತಿ ಬೇಕಿಲ್ಲ ಎಂದು ಹೇಳಿದ್ದಾರೆ.

ಯಾತ್ರೆಯ ಆಯೋಜಕರು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನುಹ್ ಜಿಲ್ಲಾಡಳಿತ ತಿರಸ್ಕರಿಸಿದೆ.

ಆಗಸ್ಟ್‌ನಲ್ಲಿ ಪಲ್ವಾಲ್‌ನ ಪೊಂಡ್ರಿ ಗ್ರಾಮದಲ್ಲಿ ಹಿಂದೂ ಸಂಘಟನೆಗಳು ‘ಮಹಾಪಂಚಾಯತ್’ ನಡೆಸಿ ಯಾತ್ರೆಯನ್ನು ಮಾಡಲು ನಿರ್ಧಾರ ತೆಗೆದುಕೊಂಡ ಒಂದು ವಾರದ ನಂತರ ಈ ಬೆಳವಣಿಗೆಯಾಗಿದೆ.

ಯಾತ್ರೆಗೆ ಅನುಮತಿ ಕೋರಿ ವಿಎಚ್‌ಪಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ನೂಹ್‌ ಎಸ್‌ಪಿ ನರೇಂದರ್‌ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿd ಸ್ಥಳೀಯ ವಿಎಚ್‌ಪಿ ನಾಯಕ ದೇವೇಂದರ್‌ ಸಿಂಗ್‌, ಅನುಮತಿ ನಿರಾಕರಣೆ ವಿಚಾರ ತಿಳಿದಿಲ್ಲ. ಯಾತ್ರೆ ನಡೆಸಲು ನಮಗೆ ಯಾವ ಅನುಮತಿಯೂ ಬೇಕಾಗಿಲ್ಲ ಎಂದು ಹೇಳಿದ್ದಾರೆ.

ಮಹಾಪಂಚಾಯತ್‌ನಲ್ಲಿ ಯಾತ್ರೆಯನ್ನು ನೂಹ್‌ನಲ್ಲಿರುವ ನಲ್ವಾರ್ ದೇವಾಲಯದಿಂದ ಆರಂಭಿಸಿ ಫಿರೋಜ್‌ಪುರ ಝಿರ್ಕಾ ಪಟ್ಟಣದ ಝಿರ್ ಮತ್ತು ಶೃಂಗಾರ್ ದೇವಾಲಯದ ಮೂಲಕ ನಡೆಸಲು ತೀರ್ಮಾನಿಸಲಾಗಿದೆ.

ಈ ಮೊದಲು ಜುಲೈ 31ರಂದು ನೂಹ್‌ನಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಹಿಂಸಾಚಾರ ಉಂಟಾಗಿ  ಗುರುಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಕ್ಕೂ ವ್ಯಾಪಿಸಿತ್ತು. ಈ ಗಲಭೆಯಲ್ಲಿ ಗೃಹ ರಕ್ಷಕ ಪಡೆಯ ಇಬ್ಬರು, ಒಬ್ಬ ಮುಸ್ಲಿಂ ಧರ್ಮಗುರು ಸೇರಿದಂತೆ ಒಟ್ಟು ಆರು ಮಂದಿ ಹತ್ಯೆಯಾಗಿದ್ದರು. ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.

ಇದನ್ನು ಓದಿ: ಆದಿವಾಸಿ ಯುವಕನ ಎನ್‌ಕೌಂಟರ್: ಮರುತನಿಖೆಗೆ ಆದೇಶಿಸಿದ ಹೈಕೋರ್ಟ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...