Homeಮುಖಪುಟದ್ವೇಷದ ಚಂಡಮಾರುತಕ್ಕೆ ತತ್ತರಿಸಿದ್ದೇವೆ, ಮುಸ್ಲಿಮರ ಮನದ ಮಾತು ಕೇಳಿ: ಮೋದಿಗೆ ಜಾಮಾ ಮಸೀದಿ ಶಾಹಿ ಇಮಾಮ್...

ದ್ವೇಷದ ಚಂಡಮಾರುತಕ್ಕೆ ತತ್ತರಿಸಿದ್ದೇವೆ, ಮುಸ್ಲಿಮರ ಮನದ ಮಾತು ಕೇಳಿ: ಮೋದಿಗೆ ಜಾಮಾ ಮಸೀದಿ ಶಾಹಿ ಇಮಾಮ್ ಮನವಿ

- Advertisement -
- Advertisement -

ಜಾಮಾ ಮಸೀದಿಯ ಮುಖಂಡ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಅವರು ಭಾರತದಲ್ಲಿನ “ದ್ವೇಷದ ಚಂಡಮಾರುತ”ದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಮುಸ್ಲಿಮರ ‘ಮನ್ ಕಿ ಬಾತ್’ ಆಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಐತಿಹಾಸಿಕ ಜಾಮಾ ಮಸೀದಿಯಲ್ಲಿ ಶುಕ್ರವಾರದ (ಆಗಸ್ಟ್ 11) ಧರ್ಮೋಪದೇಶದಲ್ಲಿ ಮಾತನಾಡಿದ ಅಹ್ಮದ್ ಬುಖಾರಿ ಅವರು, ನೂಹ್ ಗಲಭೆ, ರೈಲಿನಲ್ಲಿ ಪೊಲೀಸ್ ಅಧಿಕಾರಿಯಿಂದ ನಾಲ್ವರ ಹತ್ಯೆಯಂತಹ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸುವಂತೆ ಸಲಹೆ ನೀಡಿದರು.

”ದೇಶದಲ್ಲಿ ಪ್ರಸ್ತುತ ಸನ್ನಿವೇಶ ನೋಡಿ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ. ಭಾರತದ ಪರಿಸ್ಥಿತಿ ಚಿಂತಾಜನಕವಾಗಿದೆ. ದೇಶದಲ್ಲಿ ಬೀಸುತ್ತಿರುವ ದ್ವೇಷದ ಚಂಡಮಾರುತವು ಶಾಂತಿಗೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ದ್ವೇಷದ ಚಂಡಮಾರುತಕ್ಕೆ ತತ್ತರಿಸಿದ್ದೇವೆ” ಎಂದು ಬುಖಾರಿ ಹೇಳಿದರು.

”ನೀವು ನಿಮ್ಮ ‘ಮನ್ ಕಿ ಬಾತ್’ ಎಂದು ಹೇಳುತ್ತೀರಿ ಆದರೆ ನೀವು ಮುಸ್ಲಿಮರ ‘ಮನ್ ಕಿ ಬಾತ್’ ಅನ್ನು ಸಹ ಕೇಳಬೇಕು. ಸದ್ಯ ಉಂಟಾಗಿರುವ ಪರಿಸ್ಥಿತಿಗಳಿಂದ ಮುಸ್ಲಿಮರು ತೊಂದರೆಗೀಡಾಗಿದ್ದಾರೆ. ಅವರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ” ಎಂದು ಪ್ರಧಾನಿ ಮೋದಿಯ ಮಾಸಿಕ ರೇಡಿಯೊ ಕಾರ್ಯಕ್ರಮವನ್ನು ಉಲ್ಲೇಖಿಸಿ ಬುಖಾರಿ ಹೇಳಿದರು.

”ದ್ವೇಷ ಮತ್ತು ಕೋಮು ಹಿಂಸಾಚಾರವನ್ನು ಎದುರಿಸುವಲ್ಲಿ ಕಾನೂನು ದುರ್ಬಲವಾಗಿದೆ ಎನ್ನುವುದು ಸಾಬೀತಾಗುತ್ತಿದೆ. ಒಂದು ಧರ್ಮದ ಜನರಿಗೆ ಬಹಿರಂಗವಾಗಿ ಬೆದರಿಕೆ ಹಾಕಲಾಗುತ್ತಿದೆ. ಮುಸ್ಲಿಮರಿಗೆ ಬಹಿಷ್ಕಾರದ ಕರೆಗಳು ಮತ್ತು ಅವರೊಂದಿಗೆ ವ್ಯಾಪಾರ ಮತ್ತು ವ್ಯವಹಾರವನ್ನು ಕೊನೆಗೊಳಿಸುವಂತೆ ಘೋಷಿಸಲಾದ ಪಂಚಾಯತ್‌ಗಳನ್ನು ನಡೆಸಲಾಗುತ್ತಿದೆ. ಜಗತ್ತಿನಲ್ಲಿ 57 ಇಸ್ಲಾಮಿಕ್ ದೇಶಗಳಿವೆ, ಅಲ್ಲಿ ಮುಸ್ಲಿಮೇತರರು ವಾಸಿಸುತ್ತಿದ್ದಾರೆ ಆದರೆ ಅವರು ಯಾವುದೇ ಬೆದರಿಕೆಯನ್ನು ಎದುರಿಸುತ್ತಿಲ್ಲ. ಅವರ ಜೀವನ ಅಥವಾ ಜೀವನೋಪಾಯಕ್ಕೆ ಅಲ್ಲಿ ಯಾವುದೇ ತೊಂದರೆಯಿಲ್ಲ” ಎಂದು ಬುಖಾರಿ ಹೇಳಿದರು.

”ಭಾರತದಲ್ಲಿ ಯಾಕೆ ಈ ದ್ವೇಷ? ಹಿಂದೂ-ಮುಸ್ಲಿಂ ನಡುವಿನ ಸಂಬಂಧ ಅಪಾಯದಂಚಿನಲ್ಲಿದೆ. ನಮ್ಮ ಪೂರ್ವಜರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಇಂತಹ ದಿನಕ್ಕಾಗಿಯೇ? ಪರಿಸ್ಥಿತಿಯನ್ನು ನಿಯಂತ್ರಿಸುವುದು ಸರ್ಕಾರದ ಕೈಯಲ್ಲಿದೆ. ಮುಸ್ಲಿಂ ಬುದ್ಧಿಜೀವಿಗಳೊಂದಿಗೆ ಮಾತನಾಡಲು ನಾನು ಪ್ರಧಾನಿ ಮತ್ತು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ದೇಶದ ಮುಸ್ಲಿಮರ ಪರವಾಗಿ ಮಾತನಾಡಲು ಬಯಸುತ್ತೇನೆ. ದ್ವೇಷದ ಚಂಡಮಾರುತದಿಂದ ದೇಶವನ್ನು ಉಳಿಸಲು ಮುಸ್ಲಿಂ ಸಮುದಾಯದ ಸದಸ್ಯರೊಂದಿಗೆ ಕೇಂದ್ರವು ಸಭೆ ನಡೆಸಬಹುದು” ಎಂದು ಬುಖಾರಿ ಸಲಹೆ ನೀಡಿದರು.

ಇದನ್ನೂ ಓದಿ: ಅವಿಶ್ವಾಸ ನಿರ್ಣಯದ ವೇಳೆ ಬೆತ್ತಲಾದ ಕುಂಭಕರ್ಣ: ಮೋದಿ ವಿರುದ್ಧ ಮತ್ತೆ ಗುಡುಗಿದ ನಟ ಕಿಶೋರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...