Homeಮುಖಪುಟಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಬೃಹತ್ ಹಗರಣ: ಸಿಎಜಿ ವರದಿಯಲ್ಲಿ ಬಹಿರಂಗ

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಬೃಹತ್ ಹಗರಣ: ಸಿಎಜಿ ವರದಿಯಲ್ಲಿ ಬಹಿರಂಗ

- Advertisement -
- Advertisement -

ಮೋದಿ ಸರ್ಕಾರವು ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಒಂದಾದ, “ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ” (AB-PMJAY)ಯಡಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಭಾರತದ ಕಂಟ್ರೋಲರ್ –  ಆಡಿಟರ್ ಜನರಲ್ (ಸಿಎಜಿ)   ಆಯುಷ್ಮಾನ್ ಭಾರತ್  – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಬಹುದೊಡ್ಡ ಅವ್ಯವಹರಾದ ಬಗ್ಗೆ ಉಲ್ಲೇಖಿಸಿದ್ದು, 7.5 ಲಕ್ಷ ಫಲಾನುಭವಿಗಳು ಎಂದು ಹೇಳಲಾದ ವ್ಯಕ್ತಿಗಳು “ಒಂದೇ ಮೊಬೈಲ್” ಸಂಖ್ಯೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಇದಲ್ಲದೆ ದಾಖಲೆ ಪ್ರಕಾರ ಈ ಮೊದಲೇ  ಮೃತಪಟ್ಟಿದ್ದಾರೆಂದು ಘೋಷಿಸಿಲಾಗಿದ್ದ 3,446 ರೋಗಿಗಳ ಚಿಕಿತ್ಸೆಗಾಗಿ 6.97 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತಿಳಿಸಿದೆ.

ಈ ಯೋಜನೆಯಡಿ ಜನರಿಗೆ  ನಗದು ರಹಿತ ಸೇವೆ ನೀಡಬೇಕಾಗಿತ್ತು. ಆದರೆ  ಫಲಾನುಭವಿಗಳು ಚಿಕಿತ್ಸೆಗಾಗಿ ಹಣವನ್ನು ಪಾವತಿಸಿದ್ದಾರೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಅವರ ವರದಿ ಹೇಳಿದೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾದ PMJAY ಕುರಿತಾದ ಲೆಕ್ಕಪರಿಶೋಧನಾ ವರದಿಯಲ್ಲಿ, CAG, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ, ಎಲ್ಲಾ ಪರೀಕ್ಷೆಗಳು, ಔಷಧಿಗಳ  ವೆಚ್ಚವನ್ನು ಆಸ್ಪತ್ರೆಯು ಭರಿಸಬೇಕಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಪ್ಯಾಕೇಜ್ ಮೊತ್ತದಲ್ಲಿ ಸೇರಿಸಲಾಗಿದೆ.

2018 ರಲ್ಲಿ ಹೊರತಂದ, AB-PMJAY ಯೋಜನೆಯಡಿ ಕುಟುಂಬಕ್ಕೆ ವಾರ್ಷಿಕ   5 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಸರ್ಕಾರದ ಮಾಹಿತಿ ಪ್ರಕಾರ ಆರೋಗ್ಯ ರಕ್ಷಣೆ ಯೋಜನೆಯು 50 ಕೋಟಿ ಜನರನ್ನು ಒಳಗೊಂಡಿದೆ.

ಈ ಯೋಜನೆಯಡಿ  ಫಲಾನುಭವಿಗಳಿಗೆ ಸೇವೆಗಳಿಗೆ ನಗದು ರಹಿತ ಮತ್ತು ಕಾಗದ ರಹಿತ ಸೇವೆಯನ್ನು ಒದಗಿಸಬೇಕಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ AB-PMJAY ಕುರಿತ CAGಯ ಆಡಿಟ್ ವರದಿಯು,   “SHA (ರಾಜ್ಯ ಆರೋಗ್ಯ ಸಂಸ್ಥೆ) ಮತ್ತು ಖಾಸಗಿ EHCPS (ಎಂಪಾನೆಲ್ಡ್ ಹೆಲ್ತ್ ಕೇರ್ ಪ್ರೊವೈಡರ್ಸ್) ಸಹಿ ಮಾಡಿದ ಒಪ್ಪಂದದ ಪ್ರಕಾರ PMJAY ಫಲಾನುಭವಿಗಳಿಗೆ ಸಂಪೂರ್ಣ ನಗದು ರಹಿತ ರೀತಿಯಲ್ಲಿ ಆರೋಗ್ಯ ಸೌಲಭ್ಯ ನೀಡಬೇಕಿದೆ.

ಹಿಮಾಚಲ ಪ್ರದೇಶದಲ್ಲಿ, ಐದು EHCP ಗಳ 50 ಫಲಾನುಭವಿಗಳು ತಮ್ಮ ವೈದ್ಯಕೀಯ ಪರೀಕ್ಷೆಗಳನ್ನು ಇತರ ಆಸ್ಪತ್ರೆ ಅಥವಾ ವೈದ್ಯಕೀಯ ಪರೀಕ್ಷಾ ಕೇಂದ್ರದಲ್ಲಿ ಮಾಡಿಸಿದ್ದರು. ಈ  ಪರೀಕ್ಷೆಗಳ ವೆಚ್ಚವನ್ನು ಫಲಾನುಭವಿಗಳೇ ಭರಿಸಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ, 459 ರೋಗಿಗಳು ತಮ್ಮ ಸ್ವಂತ ಜೇಬಿನಿಂದ ಆರಂಭದಲ್ಲಿ 43.27 ಲಕ್ಷ ರೂ.ಗಳನ್ನು ಪಾವತಿಸಿದರು, ಬಿಲ್‌ಗಳನ್ನು ಪರಿಶೀಲಿಸಿದ ನಂತರ ರೋಗಿಗಳಿಗೆ ಮರುಪಾವತಿ ಮಾಡಲಾಯಿತು.75 ರೋಗಿಗಳಿಗೆ ಇನ್ನೂ 6.70 ಲಕ್ಷ ರೂಪಾಯಿ ಮರುಪಾವತಿ ಮಾಡಬೇಕಾಗಿದೆ ಎಂದು ಆಡಿಟ್ ಸಮಯದಲ್ಲಿ ಸಿಎಜಿ ಕಂಡುಹಿಡಿದಿದೆ.

ಜಾರ್ಖಂಡ್‌ನಲ್ಲಿ ಲೈಫ್ ಕೇರ್ ಆಸ್ಪತ್ರೆಯ 36 ರೋಗಿಗಳು  ಔಷಧಿಗಳು, ಚುಚ್ಚುಮದ್ದು, ರಕ್ತ ಇತ್ಯಾದಿಗಳನ್ನು ಖರೀದಿಸಲು ವಿವಿಧ ಮೊತ್ತವನ್ನು ಪಾವತಿಸಿರುವುದನ್ನು ವಿಮಾ ಕಂಪನಿ ಗಮನಿಸಿದೆ. ಈ ವೆಚ್ಚದ ವಿವರಗಳು SHA ಬಳಿ ಲಭ್ಯವಿರಲಿಲ್ಲ. ವಿಮಾ ಕಂಪನಿಯ ಅವಲೋಕನದ ಆಧಾರದ ಮೇಲೆ, SHA (ಆಗಸ್ಟ್ 28, 2020 ರಂದು) ಐದು ದಿನಗಳಲ್ಲಿ ತನ್ನ ವಿವರಣೆಯನ್ನು ಸಲ್ಲಿಸುವಂತೆ ಆಸ್ಪತ್ರೆಯನ್ನು ಕೇಳಿದೆ.

ಮೇಘಾಲಯದಲ್ಲಿ, ಫೆಬ್ರವರಿ 2019 ರಿಂದ ಮಾರ್ಚ್ 2021 ರವರೆಗೆ ಐದು ಖಾಸಗಿ EHCP ಗಳಲ್ಲಿ ಚಿಕಿತ್ಸೆ ಪಡೆದ 19,459 ಫಲಾನುಭವಿಗಳಲ್ಲಿ, 13,418 (ಶೇ. 69) ಜನರು ಡಿಸ್ಚಾರ್ಜ್ ಸಮಯದಲ್ಲಿ 12.34 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗಿತ್ತು.

ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಮೋದಿ ಸರ್ಕಾರವು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವನ್ನು (NHA) ಸ್ಥಾಪಿಸಿದೆ. PMJAY ಅನ್ನು ಜಾರಿಗೆ ತರಲು 33 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು.ಇದೀಗ ಯೋಜನೆಯಡಿ ಹಗರಣ ನಡೆದಿರುವುದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನು ಓದಿ: ಜಾತಿ ನಿಂದನೆ ಪ್ರಕರಣ: ನಟ ಉಪೇಂದ್ರ ವಿರುದ್ಧದ 2ನೇ FIRಗೆ ಹೈಕೋರ್ಟ್ ಮಧ್ಯಂತರ ತಡೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...