Homeಮುಖಪುಟಶುಭಕರನ್ ಸಿಂಗ್ ಪ್ರಕರಣ: ಮರಣೋತ್ತರ ಪರೀಕ್ಷೆ ವರದಿಯಲ್ಲಿ ಯುವ ರೈತನ ಸಾವಿಗೆ ಕಾರಣ ಬಯಲು

ಶುಭಕರನ್ ಸಿಂಗ್ ಪ್ರಕರಣ: ಮರಣೋತ್ತರ ಪರೀಕ್ಷೆ ವರದಿಯಲ್ಲಿ ಯುವ ರೈತನ ಸಾವಿಗೆ ಕಾರಣ ಬಯಲು

- Advertisement -
- Advertisement -

ದೆಹಲಿ ಚಲೋ ಪ್ರತಿಭಟನೆಯ ವೇಳೆ ಖಾನುರಿ ಗಡಿಯಲ್ಲಿ ರೈತರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ 22 ವರ್ಷದ ಯುವ ರೈತ ಶುಭಕರನ್ ಸಿಂಗ್ ಮೃತಪಟ್ಟಿದ್ದ. ಯುವ ರೈತನ ಸಾವಿಗೆ ಪೊಲೀಸ್‌ ಫೈರಿಂಗ್‌ ಕಾರಣ ಎಂದು ರೈತರು ಆರೋಪಿಸಿದ್ದರು. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ಇದೀಗ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅಸಲಿಯತ್ತು ಬಯಲಾಗಿದೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶುಭಕರನ್ ಸಿಂಗ್ ತಲೆಯ ಹಿಂಭಾಗಕ್ಕೆ ಉಂಟಾದ ಬಂದೂಕಿನ ಗಾಯದಿಂದ ಮೃತಪಟ್ಟಿದ್ದಾರೆ ಎಂಬುವುದನ್ನು ಬಹಿರಂಗಪಡಿಸಿದೆ.

ಪಟಿಯಾಲ ಆಸ್ಪತ್ರೆ ನೀಡಿದ ವೈದ್ಯಕೀಯ ವರದಿಗಳ ಆಯ್ದ ಭಾಗಗಳನ್ನು ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿದ್ದು, ಶುಭಕರನ್ ಸಿಂಗ್ ಅವರ ತಲೆಬುರುಡೆಯಲ್ಲಿ ಕಂಡುಬಂದ ಇದೇ ರೀತಿಯ ಲೋಹದ ಗುಂಡುಗಳು ಘರ್ಷಣೆಯ ಸಮಯದಲ್ಲಿ ಗಾಯಗೊಂಡ ಇತರ ಪ್ರತಿಭಟನಾಕಾರರ ದೇಹದಲ್ಲಿಯೂ ಕಂಡು ಬಂದಿದೆ. ಶುಭಕರನ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಮೊದಲು CT ಸ್ಕ್ಯಾನ್ ನಡೆಸಲಾಯಿತು, ಲೋಹದ ಗುಂಡುಗಳು ಅವನ ತಲೆಬುರುಡೆಯ ಹಿಂಭಾಗಕ್ಕೆ ಚುಚ್ಚಲ್ಪಟ್ಟಿದೆ ಎಂದು ಹೇಳಿದೆ.

ಸಿಟಿ ಸ್ಕ್ಯಾನ್ ಮತ್ತು ಶವಪರೀಕ್ಷೆ ನಡೆಸಿದ ವೈದ್ಯರು, ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ಆದರೆ ವರದಿಗಳನ್ನು ಪಟಿಯಾಲಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಲೋಹದ ಗುಂಡುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಮತ್ತು ಯಾವ ಬಂದೂಕನ್ನು ಬಳಸಲಾಗಿದೆ ಎಂಬುವುದನ್ನು ಪರಿಶೀಲಿಸಲು ಬ್ಯಾಲಿಸ್ಟಿಕ್ ತಜ್ಞರಿಗೆ ಅದನ್ನು ಕಳುಹಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಆದರೆ ಪೊಲೀಸರು ಈ ಬಗೆಗಿನ ವರದಿಯನ್ನು ನಿರಾಕರಿಸಿದ್ದಾರೆ. ಹರಿಯಾಣದ ಗರ್ಹಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುರೇಶ್ ಕುಮಾರ್ ‘ನಮಗೆ ಯಾವುದೇ ಮರಣೋತ್ತರ ಪರೀಕ್ಷೆಯ ವರದಿ ಬಂದಿಲ್ಲ’ ಎಂದು ಹೇಳಿ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ನಾವು ಬೆಳವಣಿಗೆಯ ಬಗ್ಗೆ ತಿಳಿದಿದ್ದೇವೆ ಆದರೆ ಔಪಚಾರಿಕ ವರದಿಯನ್ನು ಸ್ವೀಕರಿಸಿಲ್ಲ. ನಾವು ವಿಷಯವನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಹರ್ಯಾಣದ ಇನ್ನೊಬ್ಬ ಪೋಲೀಸ್ ಅಧಿಕಾರಿ ಹೇಳಿದ್ದಾರೆ.

ಪಟಿಯಾಲದ ಪತ್ರಾನ್ ಪೊಲೀಸ್ ಠಾಣೆಯು ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಶುಭಕರನ್ ಸಿಂಗ್ ಅವರ ಕುಟುಂಬವು ಫೆಬ್ರವರಿ 28ರ ಬುಧವಾರದಂದು ಅವರ ಮೃತದೇಹದ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಿದೆ. ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಶುಭಕರನ್ ಸಿಂಗ್ ಅವರ ಮೃತದೇಹವನ್ನು ಫೆಬ್ರವರಿ 21ರಂದು ರಾಜೀಂದ್ರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದರು. ಗುರುವಾರ ಶುಭಕರನ್ ತಂದೆಯ ದೂರಿನ ಮೇರೆಗೆ ಪಂಜಾಬ್ ಪೊಲೀಸರು ದಾಖಲಿಸಿದ ಎಫ್‌ಐಆರ್‌ನ ಪ್ರಕಾರ, ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿಯ ಸೆಕ್ಷನ್ 302 (ಕೊಲೆ) ಮತ್ತು 114ರಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶುಭಕರನ್ ಸಿಂಗ್ ಸಾವಿನ ಬೆನಲ್ಲಿ ಮುಖ್ಯಮಂತ್ರಿಗಳು ಅವರ ಕುಟುಂಬಕ್ಕೆ 1 ಕೋಟಿ ಪರಿಹಾರ ಮತ್ತು ಕುಟುಂಬದ ಬೇಡಿಕೆಯಂತೆ ಅವರ ಸಹೋದರಿಗೆ ಪೊಲೀಸ್ ಕಾನ್ಸ್‌ಟೇಬಲ್ ಉದ್ಯೋಗವನ್ನು ಘೋಷಿಸಿದ್ದಾರೆ. ನಾವು ಅವರ ಕುಟುಂಬಕ್ಕೆ ಬೆಂಬಲ ನೀಡುತ್ತೇವೆ ಮತ್ತು ಅವರಿಗೆ ಬೇಕಿದ್ದ ಎಲ್ಲಾ ಸಹಕಾರವನ್ನು ನೀಡುತ್ತೇವೆ ಎಂದು ಇನ್ಸ್‌ಪೆಕ್ಟರ್ ಜನರಲ್ ಸುಖಚೈನ್ ಸಿಂಗ್ ಗಿಲ್ ಗುರುವಾರ ಹೇಳಿದ್ದಾರೆ.

ಇದನ್ನು ಓದಿ: ಹಿಮಾಚಲ ಪ್ರದೇಶ ರಾಜಕೀಯ ಬಿಕ್ಕಟ್ಟು: ಅನರ್ಹತೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಕಾಂಗ್ರೆಸ್ ಬಂಡಾಯ ಶಾಸಕರು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?

0
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯಾ? ಹೌದು ಈಗೊಂದು ಆರೋಪವನ್ನು ಸ್ಪರ್ಧೆಯ ಆಕಾಂಕ್ಷಿಗಳಾಗಿದ್ದ ಹಲವು ಅಭ್ಯರ್ಥಿಗಳು ಮಾಡಿದ್ದಾರೆ. ವಾರಾಣಾಸಿಯಲ್ಲಿ ಚುನಾವಣಾಧಿಕಾರಿಗಳು ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿದ್ದ...