Homeಮುಖಪುಟಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಮೇಲಿನ ನಿಷೇಧ ತೆರವು

ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಮೇಲಿನ ನಿಷೇಧ ತೆರವು

- Advertisement -
- Advertisement -

ಮಲಯಾಳಂ ಚಾನೆಲ್‌ಗಳಾದ ಏಷ್ಯಾನೆಟ್ ಮತ್ತು ಮೀಡಿಯಾ ಒನ್ ಚಾನೆಲ್‌ಗಳು ದೆಹಲಿ ಹಿಂಸಾಚಾರದ ಬಗ್ಗೆ ಕೋಮುವಾದಿ ನೆಲೆಯಲ್ಲಿ ವರದಿ ಪ್ರಸಾರ ಮಾಡಿದ ಆರೋಪದ ಮೇಲೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿನ್ನೆಯಿಂದ 48 ಗಂಟೆಗಳ ಕಾಲ ನಿಷೇಧಿಸಿತ್ತು. ಆದರೆ ಈಗ ಆ ನಿಷೇಧವನ್ನು ತೆಗೆದು ಹಾಕಲಾಗಿದೆ ಎಂದು ANI ಮತ್ತು PTI ವರದಿ ಮಾಡಿದೆ.

ನಿಷೇಧಗೊಂಡ ಕೆಲವೇ ಗಂಟೆಗಳಲ್ಲಿ, ಮಲಯಾಳಂ ಚಾನೆಲ್‌ಗಳಾದ ಏಷ್ಯನೆಟ್ ನ್ಯೂಸ್, ಮೀಡಿಯಾ ಒನ್ ಟಿವಿಯನ್ನು ಮತ್ತೆ ಪ್ರಸಾರ ಮಾಡಲು ಸರ್ಕಾರ ಅನುಮತಿಸಿದೆ. ಐ.ಬಿ ಸಚಿವಾಲಯವು ಈ ಚಾನೆಲ್ ಗಳು ಕೇಬಲ್ ಟಿವಿ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು.

ಎರಡು ಸುದ್ದಿ ವಾಹಿನಿಗಳನ್ನು ನಿನ್ನೆ ಸಂಜೆ 7: 30 ಕ್ಕೆ ಪ್ರಸಾರವನ್ನು ತಡೆಹಿಡಿಯಲಾಗಿತ್ತು. ಏಷ್ಯನೆಟ್ ನ್ಯೂಸ್ ಅನ್ನು ಸನ್ ಡೈರೆಕ್ಟ್ ಮತ್ತು ಇತರ ಕೆಲವು ಪ್ಲಾಟ್‌ಫಾರ್ಮ್‌ಗಳಲ್ಲಿ ರಾತ್ರಿ 1.30 ರ ಸುಮಾರಿಗೆ ಪುನಃ ಪ್ರಸಾರ ಮಾಡಲಾಯಿತು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಟಾಟಾ ಸ್ಕೈನಂತಹ ಇತರ ಪ್ರಮುಖ ಡಿಟಿಎಚ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮತ್ತೆ ಪ್ರಸಾರವಾಯಿತು. ಮೀಡಿಯಾ ಒನ್ ಟಿವಿಯ ಮೇಲಿನ ನಿಷೇಧವನ್ನು ಇಂದು ಬೆಳಿಗ್ಗೆ 9.30 ಕ್ಕೆ ತೆಗೆದುಹಾಕಲಾಯಿತು ಎಂದು ತಿಳಿದು ಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...