Homeಮುಖಪುಟದಲಿತ ಸರಪಂಚ್‌ಗೆ ಶಾಲೆಯಲ್ಲಿ ಧ್ವಜಾರೋಹಣ ಮಾಡಲು ಸವರ್ಣಿಯ ಶಿಕ್ಷಕಿಯಿಂದ ವಿರೋಧ

ದಲಿತ ಸರಪಂಚ್‌ಗೆ ಶಾಲೆಯಲ್ಲಿ ಧ್ವಜಾರೋಹಣ ಮಾಡಲು ಸವರ್ಣಿಯ ಶಿಕ್ಷಕಿಯಿಂದ ವಿರೋಧ

- Advertisement -
- Advertisement -

77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ  ಶಾಲೆಯಲ್ಲಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ದಲಿತ ಸರಪಂಚ್‌ಗೆ ಧ್ವಜಾರೋಹಣ ಮಾಡುವುದನ್ನು  ಸವರ್ಣಿಯ ಶಿಕ್ಷಕಿಯೋರ್ವರು ತಡೆದ ಘಟನೆ ಮಧ್ಯಪ್ರದೇಶದ ಭೊಪಾಲ್ ನಲ್ಲಿ ನಡೆದಿದೆ.

ದಲಿತ ಸಮುದಾಯದ ಸರಪಂಚ್ (ಗ್ರಾಮ ಮುಖ್ಯಸ್ಥ) ಅವರು ಹೇಳುವ ಪ್ರಕಾರ, ದಲಿತ ಎಂಬ ಕಾರಣಕ್ಕೆ ಸವರ್ಣಿಯ ಶಿಕ್ಷಕಿ ಶಾಲೆಯ ಕಾರ್ಯಕ್ರಮದ ವೇಳೆ ರಾಷ್ಟ್ರಧ್ವಜವನ್ನು ಹಾರಿಸಲು ನಿರಾಕರಿಸಿದ್ದಾರೆ.

ಸರಪಂಚರ ವೀಡಿಯೋವನ್ನು ದಲಿತ್ ವಾಯ್ಸ್ ಟ್ವಿಟರ್‌ನಲ್ಲಿ (ಎಕ್ಸ್) ಪೋಸ್ಟ್ ಮಾಡಲಾಗಿದೆ.  ವೀಡಿಯೊದಲ್ಲಿ, ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದರೆ, ಸರಪಂಚ್ ಗೇಟ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು.

ಕೆಲವರು,  ಪರಿಶಿಷ್ಟ ಜಾತಿಯ ಬರೇಲಾಲ್ ಅಹಿರ್ವಾರ್ ಅವರು ತನ್ನ ಜಾತಿಯ ಕಾರಣಕ್ಕೆ ಈ ಚಿತ್ರಹಿಂಸೆ ಅನುಭವಿಸಬೇಕಾಯಿತು ಎಂದು ಬರೆದಿದ್ದಾರೆ.

ದಲಿತರೆಂಬ ಕಾರಣಕ್ಕೆ ಭಗವಂತಪುರ ಗ್ರಾಮದ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಸವರ್ಣಿಯ ಶಿಕ್ಷಕಿಯೊಬ್ಬರು ರಾಷ್ಟ್ರೀಯ ಧ್ವಜವನ್ನು ಹಾರಿಸಲು ಸರಪಂಚ ಬರೆಲಾಲ್ ಅಹಿರ್ವರ್ ಗೆ ಅವಕಾಶ ನೀಡಲು ನಿರಾಕರಿಸಿದ್ದಾರೆ ಎಂದು  ಸರಪಂಚ್ ತಿಳಿಸಿದ್ದಾರೆ.

ಅವರು ನೀವು ದಲಿತರು, ನಿಮಗೆ ಏನು ಗೊತ್ತು ಎಂದು ಕೇಳುತ್ತಾರೆ. ಇಂದು, ಸ್ವಾತಂತ್ರ್ಯ ದಿನದಂದು, ನನ್ನನ್ನು ಶಾಲೆಗೆ ಆಹ್ವಾನಿಸಿಲ್ಲ.  ಪಂಚಾಯತಿ ರಾಜ್ ಕಾಯ್ದೆಯ ನಿಬಂಧನೆಗಳ ಹೊರತಾಗಿಯೂ, ಧ್ವಜವನ್ನು ಹಾರಿಸಲು ಬೇರೊಬ್ಬರಿಗೆ ಅವಕಾಶ ನೀಡಲಾಯಿತು ಎಂದು ಸರಪಂಚ ಅಹಿರ್ವರ್ ಹೇಳಿದ್ದಾರೆ.

ಇದನ್ನು ಓದಿ: ಜಾತಿ ನಿಂದನೆ ಪ್ರಕರಣ: ನಟ ಉಪೇಂದ್ರ ವಿರುದ್ಧದ 2ನೇ FIRಗೆ ಹೈಕೋರ್ಟ್ ಮಧ್ಯಂತರ ತಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...