Homeಮುಖಪುಟ‘ನ್ಯೂಸ್ ಕ್ಲಿಕ್’ ಪ್ರಧಾನ ಸಂಪಾದಕರಿಗೆ ಹೈಕೋರ್ಟ್ ನೊಟೀಸ್

‘ನ್ಯೂಸ್ ಕ್ಲಿಕ್’ ಪ್ರಧಾನ ಸಂಪಾದಕರಿಗೆ ಹೈಕೋರ್ಟ್ ನೊಟೀಸ್

- Advertisement -
- Advertisement -

ದೆಹಲಿ ಪೊಲೀಸರ ಆರ್ಥಿಕ  ಅಪರಾಧಗಳ ವಿಭಾಗ ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ‘ನ್ಯೂಸ್ ಕ್ಲಿಕ್’ ಪೋರ್ಟಲ್‌ನ ಪ್ರಧಾನ ಸಂಪಾದಕರಾದ ಪ್ರಬೀರ್ ಪುರಕಾಯಸ್ಥ ಅವರಿಗೆ ದೆಹಲಿ ಹೈಕೋರ್ಟ್ ಉತ್ತರಿಸುವಂತೆ ನೊಟೀಸ್ ಜಾರಿಗೊಳಿಸಿದೆ.

2021 ಜುಲೈ 7ರಂದು ಪ್ರಬೀರ್ ಪುರಕಾಯಸ್ಥ ಅವರನ್ನು ಬಂಧಿಸದಂತೆ ಹೈಕೋರ್ಟ್ ತಡೆ ನೀಡಿತ್ತು ಮತ್ತು ತನಿಖೆಗೆ ಸಹಕರಿಸುವಂತೆ ಸೂಚಿಸಿತ್ತು.

ಆ ಬಳಿಕ ಮಧ್ಯಂತರ ಆದೇಶವನ್ನು ಹಿಂಪಡೆಯುವಂತೆ ಕೋರಿ ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ದಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಸೌರಬ್ ಬ್ಯಾನರ್ಜಿ ನ್ಯೂಸ್ ಕ್ಲಿಕ್‌ನ ಪ್ರಧಾನ ಸಂಪಾದಕರಾದ ಪ್ರಬೀರ್ ಪುರಕಾಯಸ್ಥ ಅವರಿಗೆ ನೊಟೀಸ್ ನೀಡಿದೆ.

ಪುರಕಾಯಸ್ಥ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 406, 420 ಹಾಗೂ 120ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಆರಂಭಿಸಲಾಗಿದೆ. ತನಿಖೆಯ ಸಂದರ್ಭ ಪುರಕಾಯಸ್ಥ ಅವರು ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿರುವ ಪುರಾವೆಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ದಿಲ್ಲಿ ಪೊಲೀಸ್ ಆರ್ಥಿಕ ಅಪರಾಧಗಳ ದಳ ಕೋರ್ಟ್  ಗಮನಕ್ಕೆ ತಂದಿದ್ದಾರೆ.

ದೆಹಲಿ ಪೊಲೀಸರ ಆರ್ಥಿಕ  ಅಪರಾಧಗಳ ವಿಭಾಗ ‘ನ್ಯೂಸ್ ಕ್ಲಿಕ್’ ಸಂಪಾದಕರ ಮೇಲೆ ಕಾನೂನುಬಾಹಿರ ವಿದೇಶಿ ಧನಸಹಾಯ ಪಡೆದ ಆರೋಪ ಹೊರಿಸಿದೆ.

2018-19 ರ ಆರ್ಥಿಕ ವರ್ಷದಲ್ಲಿ M/s. ವರ್ಲ್ಡ್‌ವೈಡ್ ಮೀಡಿಯಾ ಹೋಲ್ಡಿಂಗ್ಸ್ LLC, USA ನಿಂದ 9.59 ಕೋಟಿ ರೂಪಾಯಿಗಳ ವಿದೇಶಿ ನೇರ ಹೂಡಿಕೆಯನ್ನು  ಪಿಪಿಕೆ ನ್ಯೂಸ್ ಕ್ಲಿಕ್ ಸ್ಟೂಡಿಯೋ ಪಿವಿಟಿ ಲಿಮಿಟೆಡ್ ಪಡೆದಿದೆ ಎಂದು ಆರೋಪಿಸಲಾಗಿದೆ.

ವೇತನ, ಸಮಾಲೋಚನೆ, ಬಾಡಿಗೆ ಮತ್ತು ಇತರ ವೆಚ್ಚಗಳ ಪಾವತಿಗಾಗಿ ಹೂಡಿಕೆಯ ಶೇಕಡ 45 ರಷ್ಟು ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ. ಈ ಪಾವತಿಗಳನ್ನು ಗೌಪ್ಯ ಉದ್ದೇಶಕ್ಕಾಗಿ  ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಜುಲೈ  2021ರ ಆದೇಶದ ದಾಖಲೆಗಳಲ್ಲಿ ಕಂಪನಿಯು  ಎಫ್‌ಡಿಐ ಮತ್ತು ದೇಶದ ಇತರ ಕಾನೂನುಗಳನ್ನು ಉಲ್ಲಂಘಿಸಿದೆ ಮತ್ತು ಬೊಕ್ಕಸಕ್ಕೆ ನಷ್ಟವನ್ನು ಉಂಟುಮಾಡಿದೆ ಎಂದು EOW ಆರೋಪಿಸಿದೆ.

ಇದನ್ನು ಓದಿ: ಮಧ್ಯಪ್ರದೇಶ: ಜಾತಿ ಗಣತಿ ಸೇರಿ 6 ಭರವಸೆ ಘೋಷಿಸಿದ ಮಲ್ಲಿಕಾರ್ಜುನ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...