ಕೊನೆಯ ಎರಡು ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗಳನ್ನು ಗೆದ್ದಿಲ್ಲ ಎಂಬ ಟೀಕೆಗೆ ಗುರಿಯಾದ ನಂತರ ತಾನು “ಕೋಪ ಮತ್ತು ದುಃಖ” ಎರೆನ್ನು ಅನುಭವಿಸಿದ್ದೆ ಎಂದಿರುವ ಪಿ.ವಿ ಸಿಂಧು 2019ರ ಆವೃತ್ತಿಯಲ್ಲಿ ಭಾನುವಾರ ನಾನು ಗೆದ್ದ ಚಿನ್ನದ ಪದಕವು “ನನ್ನನ್ನು ಪದೇ ಪದೇ ಪ್ರಶ್ನೆಗಳನ್ನು ಕೇಳಿದ ಜನರಿಗೆ” ಎಲ್ಲರಿಗೂ ನನ್ನ ಉತ್ತರವಾಗಿದೆ ಎಂದು ತಿಳಿಸಿದ್ದಾರೆ.
ಹೈದರಾಬಾದ್‌ನ 24 ವರ್ಷದ ಪಿ.ವಿ ಸಿಂಧು ಜಪಾನ್‌ನ ಪ್ರತಿಸ್ಪರ್ಧಿ ನೊಜೋಮಿ ಒಕುಹರಾ ಅವರನ್ನು 21-7, 21-7 ಸೆಟ್‌ಗಳಿಂದ ಸೋಲಿಸಿ ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಂತರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ ಈ ವಿಷಯ ತಿಳಿಸಿದ್ದಾರೆ.
2017 ಮತ್ತು 2018 ರ ಫೈನಲ್‌ನಲ್ಲಿ ಕ್ರಮವಾಗಿ ಒಕುಹರಾ ಮತ್ತು ಸ್ಪೇನ್‌ನ ಒಲಿಂಪಿಕ್ ಚಾಂಪಿಯನ್ ಕೆರೊಲಿನಾ ಮರಿನ್ ವಿರುದ್ಧ ಸೋತಿದ್ದ ಸಿಂಧು 2019ರ ನಿನ್ನೆಯ ಪಂದ್ಯದಲ್ಲಿ ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ.
ಸಿಂಧು ಅವರು 2016 ರ ರಿಯೊ ಒಲಿಂಪಿಕ್ಸ್‌ನಿಂದೀಚೆಗೆ ಉತ್ತಮ ಪ್ರದರ್ಶನ ನೀಡಿಲ್ಲ ಎಂಬ ಟೀಕೆಗೆ ಗುರಿಯಾಗಿದ್ದರು. ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲದೆ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಕ್ರೀಡಾಕೂಟ, ಜಕಾರ್ತಾ ಏಷ್ಯನ್ ಕ್ರೀಡಾಕೂಟದ ಫೈನಲ್‌ಗಳನ್ನು ಸಹ ಕಳೆದುಕೊಂಡಿದ್ದರು. ಅವರು ಕಳೆದ ವರ್ಷ ಥೈಲ್ಯಾಂಡ್ ಓಪನ್ ಮತ್ತು ಇಂಡಿಯಾ ಓಪನ್ ಪಂದ್ಯಾವಳಿಯಲ್ಲಿಯೂ ಕೇವಲ ರನ್ನರ್ಸ್ ಅಪ್ ಸ್ಥಾನ ಪಡೆದಿದ್ದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧುಗೆ ಇದು ಐದನೇ ಪದಕವಾಗಿದೆ. ಅವರು 2013 ಮತ್ತು 2014 ಆವೃತ್ತಿಗಳಲ್ಲಿ ತಲಾ ಕಂಚು ಗೆದ್ದರು.
ಸಿಂಧು ಈಗ ವಿಶ್ವ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಜಂಟಿ ಅತ್ಯಧಿಕ ಪದಕ ವಿಜೇತರಾಗಿದ್ದಾರೆ. ಮಾಜಿ ಒಲಿಂಪಿಕ್ ಚಾಂಪಿಯನ್ ಚೀನಾದ ಜಾಂಗ್ ನಿಂಗ್ ಸಹ 2001 ಮತ್ತು 2007 ರ ನಡುವೆ 1 ಚಿನ್ನ, 2 ಬೆಳ್ಳಿ ಮತ್ತು 2 ಕಂಚು ಗೆದ್ದಿದ್ದಾರೆ.
“ಎಲ್ಲರೂ ನನ್ನಿಂದ ಈ ಗೆಲುವನ್ನು ಬಯಸುತ್ತಿದ್ದರು. ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕದ ನಂತರ, ನನ್ನ ಮೇಲೆ ನಿರೀಕ್ಷೆಗಳು ನಿಜವಾಗಿಯೂ ಹೆಚ್ಚಾಗಿದ್ದವು. ನಾನು ಟೂರ್ನಮೆಂಟ್‌ಗೆ ಹೋದಾಗಲೆಲ್ಲಾ ಎಲ್ಲರೂ ಚಿನ್ನ ಗೆಲ್ಲುತ್ತಾರೆ ಎಂದು ಎಲ್ಲರೂ ನಿರೀಕ್ಷಿಸುತ್ತಾರೆ” ಎಂದು ಸಿಂಧು ಹೇಳಿದ್ದಾರೆ.
“ಒಂದು ವರ್ಷದ ನಂತರ, ನಾನು ಅದಕ್ಕಾಗಿ ಏನು ಮಾಡಬೇಕೆಂದು ಯೋಚಿಸಿದೆ. ಇತರರ ಬಗ್ಗೆ ಯೋಚಿಸುವ ಬದಲು, ನಾನು ನನಗಾಗಿ ಆಡಬೇಕು ಮತ್ತು ನನ್ನ 100 ಪ್ರತಿಶತವ ಸಾಮರ್ಥ್ಯವನ್ನು ಪಣಕೊಡ್ಡಬೇಕು ಆಗ ಮತ್ತು ಸಹಜವಾಗಿ ನಾನು ಗೆಲ್ಲುತ್ತೇನೆ ಏಕೆಂದರೆ ಇತರರ ಬಗ್ಗೆ ಯೋಚಿಸುವುದರಿಂದ ನನ್ನ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ” ಎಂದು ತಿಳಿಸಿದ್ದಾರೆ.
ಜನರು ಈಗಾಗಲೇ ಟೋಕಿಯೊದಲ್ಲಿ 2020ರಲ್ಲಿ ನಡೆಯುವ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಬಗ್ಗೆ ಮಾತಾಡುತ್ತಿದ್ದಾರೆ. ಒಲಪಿಂಕ್ಸ್ ನಲ್ಲಿ ನಾನು ಪದಕ ಗಳಿಸಿಲ್ಲ. ಹಾಗಾಗಿ ಈ ಬಾರಿ ನಾನು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಅನಿಸುತ್ತಿದೆ. ಆದರೆ ಈಗ ನಾನು ಬೇರೆ ಏನನ್ನೂ ಯೋಚಿಸಲು ಬಯಸುವುದಿಲ್ಲ ಬದಲಿಗೆ ಸಿಕ್ಕಿರುವ ಪ್ರಶಸ್ತಿಯನ್ನು ಆನಂದಿಸಲು ಬಯಸುತ್ತೇನೆ ಎಂದಿದ್ದಾರೆ.


