Homeಮುಖಪುಟಅರುಣ್ ಜೈಟ್ಲಿ ಕೆಲ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದರೆ? ಇಲ್ಲಿದೆ ಹೊಸ ವಿವಾದ

ಅರುಣ್ ಜೈಟ್ಲಿ ಕೆಲ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದರೆ? ಇಲ್ಲಿದೆ ಹೊಸ ವಿವಾದ

- Advertisement -
- Advertisement -

ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಆರ್ಥಿಕ ಸಚಿವ ಅರುಣ್ ಜೈಟ್ಲಿ ನಿಧನರಾಗಿದ್ದಾರೆ. ಇದಕ್ಕೆ ದೇಶಾದ್ಯಂತ ಸಂತಾಪ ವ್ಯಕ್ತವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಅವರು ತೀರಿಹೋದ ನಂತರ ಅವರನ್ನು ಹೊಗಳುವ ಬರದಲ್ಲಿ ‘ಟೈಮ್ಸ್ ನೌನ ವ್ಯವಸ್ಥಾಪಕ ಸಂಪಾದಕರಾದ ನವಿಕಾ ಕುಮಾರ್’ ಮಾಡಿದ ಟ್ವೀಟ್ ಒಂದು ಭಾರೀ ವಿವಾದ ಉಂಟು ಮಾಡಿದೆ. ಇದರಿಂದಾಗಿ ಅರುಣ್ ಜೈಟ್ಲಿ ಕೆಲ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದರೆ ಎಂಬ ಪ್ರಶ್ನೆ ಎದ್ದಿದೆ.

ಟೈಮ್ಸ್ ನೌನ ಬ್ಯೂರೋ ಚೀಫ್ ನವಿಕಾ ಕುಮಾರ್, “ನನ್ನ ಮೆಂಟರ್, ಮಾರ್ಗದರ್ಶನ ಬೆಳಕನ್ನು ಕಳೆದುಕೊಂಡಿದ್ದೇನೆ. ಅರುಣ್ ಸರ್, ಈಗ ನಾನು ಮಾರ್ಗದರ್ಶನಕ್ಕಾಗಿ ಪ್ರತಿದಿನ ಬೆಳಿಗ್ಗೆ ಯಾರನ್ನು ಕೇಳಲಿ? ಯಾರಿಗೆ ಕರೆ ಮಾಡಲಿ? ನಿಮ್ಮ ಬುದ್ಧಿ, ನಿಮ್ಮ ಹಾಸ್ಯ, ನಿಮ್ಮ ಉಪಾಖ್ಯಾನಗಳು, ನಿಮ್ಮ ಇತಿಹಾಸದ ಜ್ಞಾನಕ್ಕೆ ಸಾಟಿಯಿಲ್ಲ. ಆಕಾಶದಲ್ಲಿ ಪ್ರಕಾಶಮಾನವಾದ ನಕ್ಷತ್ರವು ನೀವು ನಮ್ಮನ್ನು ವೀಕ್ಷಿಸುತ್ತಿದ್ದೀರಿ ಮತ್ತು ಮಾರ್ಗದರ್ಶನ ಮಾಡುತ್ತಿದ್ದೀರಿ ಎಂದು ನನಗೆ ನೆನಪಿಸುತ್ತದೆ” ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ “ಅರುಣ್ ಜೇಟ್ಲಿಯನ್ನು “ಬ್ಯೂರೋ ಮುಖ್ಯಸ್ಥ” ಎಂದು ಅನೇಕ ಮಾಧ್ಯಮದವರು ತಿಳಿದಿದ್ದರು. ಅವರು ದಿನದ ಪತ್ರಿಕಾ ಕಾರ್ಯಸೂಚಿಯನ್ನು ನಿಗದಿಪಡಿಸುತ್ತಿದ್ದರು, ನವದೆಹಲಿಯ ಪತ್ರಕರ್ತರನ್ನು ಮೆಚ್ಚಿಸುತ್ತಿದ್ದರು ಮತ್ತು ಬೆಳೆಸಿದರು. ಹೆಚ್ಚಿನ ದಿನಗಳಲ್ಲಿ ಅವರು ಜೇಟ್ಲಿಯೊಂದಿಗೆ ಭೇಟಿಯಾದರು, ಆದೇಶಗಳನ್ನು ತೆಗೆದುಕೊಂಡರು. ಈ ತಪ್ಪೊಪ್ಪಿಗೆಯೂ ಭಾರತದ ಉನ್ನತ ಟಿವಿಯ ವ್ಯವಸ್ಥಾಪಕ ಸಂಪಾದಕರಿಂದ ಬಂದಿದೆ ಎಂದು” ಎಂದು ಟ್ವೀಟ್ ಮಾಡುವ ಮೂಲಕ ಗಂಭೀರ ಆರೋಪ ಮಾಡಿದ್ದರು.

“ದಿವಂಗತ ಅರುಣ್ ಜೇಟ್ಲಿಯವರಿಗೆ ಶ್ರದ್ಧಾಂಜಲಿ. ಇವರು ಮೋದಿ ಸಂಪುಟದ ಮಾಜಿ ಸಚಿವ ಮತ್ತು ಟೈಮ್ಸ್ ನೌ ಬ್ಯೂರೋ ಮುಖ್ಯಸ್ಥರಾಗಿದ್ದರು. ಟೈಮ್ಸ್ ನೌ ವ್ಯವಸ್ಥಾಪಕ ಸಂಪಾದಕರಾದ ನವಿಕಾ ಕುಮಾರ್ ಅವರು ಪ್ರತಿದಿನ ಬೆಳಿಗ್ಗೆ ಜೈಟ್ಲಿಯವರೊಂದಿಗೆ ಕರೆ ಮಾಡಿ ದಿನದ ಪ್ರೊಪಗಂಡಕ್ಕಾಗಿ ಮಾರ್ಗದರ್ಶನ ಮತ್ತು ನಿರ್ದೇಶನ ಪಡೆಯುತ್ತಿದ್ದರು. ಇತರ ಎಷ್ಟು ಚಾನೆಲ್‌ಗಳು ಸಹ ಇದೇ ರೀತಿ ಮಾಡಿವೆ?” ಎಂದು ಹೋರಾಟಗಾರ್ತಿ ಕವಿತಾ ಕೃಷ್ಣನ್ ರವರು ಟ್ವೀಟ್ ಮಾಡುವ ಮೂಲಕ ಆರೋಪವನ್ನು ಸಮರ್ಥಿಸಿದ್ದಾರೆ.

ಭಾರತದ ಬಹುತೇಕ ಮಾಧ್ಯಮಗಳು ಬಿಜೆಪಿಯ ಪರವಾಗಿ ವರ್ತಿಸುತ್ತಿವೆ ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನವಿಕಾ ಕುಮಾರ್ ರವರು ಮಾಡಿರುವ ಟ್ವೀಟ್ ಮತ್ತು ಅದಕ್ಕೆ ಬಂದಿರುವ ಆರೋಪಗಳು ಇದಕ್ಕೆ ಪುಷ್ಟಿ ನೀಡುತ್ತಿವೆ..

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...