Homeಮುಖಪುಟಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಕಿತ್ತುಹಾಕುತ್ತದೆ: ರಾಹುಲ್ ಗಾಂಧಿ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಕಿತ್ತುಹಾಕುತ್ತದೆ: ರಾಹುಲ್ ಗಾಂಧಿ

- Advertisement -
- Advertisement -

“ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಬಡವರು, ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳಿಗೆ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಒಡೆದು, ಎಸೆದುಬಿಡುತ್ತದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಮಾತನಾಡಿದ ಅವರು, “ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆ ಸಾಮಾನ್ಯ ಚುನಾವಣೆಯಲ್ಲ, ಆದರೆ ಎರಡು ಸಿದ್ಧಾಂತಗಳ ನಡುವಿನ ಹೋರಾಟ” ಎಂದು ಹೇಳಿದರು.

“ಬಡವರು, ಆದಿವಾಸಿಗಳು, ಒಬಿಸಿಗಳಿಗೆ ಸಂವಿಧಾನದ ಕಾರಣದಿಂದಾಗಿ ಹಲವಾರು ಹಕ್ಕುಗಳು ದೊರೆತಿವೆ. ಜನರಿಗೆ ಮನರೇಗಾ, ಭೂಮಿಯ ಹಕ್ಕು, ಮೀಸಲಾತಿ ಮತ್ತು ಇತರ ವಿಷಯಗಳನ್ನು ನೀಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ಅದು ಈ ಸಂವಿಧಾನವನ್ನು ಕಿತ್ತುಹಾಕುತ್ತದೆ ಮತ್ತು ಹರಿದು ಹಾಕುತ್ತದೆ” ಎಂದು ಜನರಿಗೆ ಎಚ್ಚರಿಕೆ ನೀಡಿದರು.

“ಪ್ರಧಾನಿ, ಅಮಿತ್ ಶಾ (ಕೇಂದ್ರ ಗೃಹ ಸಚಿವ) ಮತ್ತು ಅವರ ಸಂಸದರು ತಾವು ಆಯ್ಕೆಯಾದರೆ, ಈ (ಸಂವಿಧಾನ) ಪುಸ್ತಕವನ್ನು ಹರಿದು ಎಸೆಯುತ್ತೇವೆ ಎಂದು ಮನಸ್ಸು ಮಾಡಿದ್ದಾರೆ. ಬಿಜೆಪಿಯು ಈ ಪುಸ್ತಕವನ್ನು ಎಸೆಯಲು ಬಯಸುತ್ತದೆ ಮತ್ತು 20- 25 ಶತಕೋಟ್ಯಾಧಿಪತಿಗಳು ದೇಶವನ್ನು ನಡೆಸುತ್ತಾರೆ” ಎಂದು ವಯನಾಡ್ ಸಂಸದರು ಪ್ರತಿಪಾದಿಸಿದ್ದಾರೆ.

ಆಡಳಿತವು ಮೀಸಲಾತಿಗೆ ವಿರುದ್ಧವಾಗಿಲ್ಲದಿದ್ದರೆ, ಅದು ಪಿಎಸ್‌ಯುಗಳು, ರೈಲ್ವೆ ಮತ್ತು ಇತರ ಕ್ಷೇತ್ರಗಳನ್ನು ಏಕೆ ಖಾಸಗೀಕರಣಗೊಳಿಸುತ್ತಿದೆ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯ ಮೂಲಕ ಕೋಟಿಗಟ್ಟಲೆ ಮಹಿಳೆಯರನ್ನು ‘ಲಖ್ಪತಿ’ಯನ್ನಾಗಿ ಮಾಡಲಾಗುವುದು. ಈ ಯೋಜನೆಯಡಿಯಲ್ಲಿ ಸರ್ಕಾರವು ಮಹಿಳೆಯರ ಖಾತೆಗಳಿಗೆ 1 ಲಕ್ಷ ರೂಪಾಯಿ (ತಿಂಗಳಿಗೆ 8,500 ರೂಪಾಯಿ) ವರ್ಗಾಯಿಸಿ, ಅವರನ್ನು ‘ಲಖ್ಪತಿ’ಯನ್ನಾಗಿ ಮಾಡುತ್ತದೆ” ಎಂದು ಅವರು ಹೇಳಿದರು.

“ಪ್ರಧಾನಿ ನರೇಂದ್ರ ಮೋದಿ ಅವರು 22-25 ಕೈಗಾರಿಕೋದ್ಯಮಿಗಳನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಲು ಸಾಧ್ಯವಾದರೆ, ಕಾಂಗ್ರೆಸ್ ಕೋಟಿಗಟ್ಟಲೆ ಮಹಿಳೆಯರನ್ನು ಲಕ್ಷಪತಿಗಳನ್ನಾಗಿ ಮಾಡುತ್ತದೆ” ಎಂದರು.

ಬಿಜೆಪಿಯ ಹಾಲಿ ಸಂಸದೆ ಸಂಧ್ಯಾ ರೈ ವಿರುದ್ಧ ಭಿಂಡ್ ಲೋಕಸಭೆ (ಎಸ್‌ಸಿ-ಮೀಸಲು) ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರಯ್ಯ ಅವರನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ; ಪತಂಜಲಿ ಫುಡ್ಸ್‌ನಿಂದ ಜಿಎಸ್‌ಟಿ ಬಾಕಿ; ₹27.46 ಕೋಟಿ ವಸೂಲಿಗೆ ಶೋಕಾಸ್ ನೋಟಿಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...