Homeಮುಖಪುಟಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

- Advertisement -
- Advertisement -

ಕೋವಿಡ್ -19 ವಿರುದ್ಧದ ‘ಕೋವಿಶೀಲ್ಡ್‌’ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ ಥ್ರಂಬೋಸಿಸ್ ಜೊತೆಗೆ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಮತ್ತು ರಕ್ತದಲ್ಲಿ ಪ್ಲೇಟ್ಲೆಟ್‌ ಅಂಶಗಳು ಕಡಿಮೆಯಾಗಲು ಕಾರಣವಾಗುತ್ತದೆ ಎನ್ನುವುದು ಇದೀಗ ಬಹಿರಂಗವಾಗಿದೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್‌ ಲಸಿಕೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿದೆ ಮತ್ತು ದೇಶದಲ್ಲಿ ವ್ಯಾಪಕವಾಗಿ ಈ ಲಸಿಕೆಯನ್ನು ನೀಡಲಾಗಿದೆ.

‘ಅಸ್ಟ್ರಾಜೆನೆಕಾ’ ಕಂಪನಿಯು ಈ ಕುರಿತ 51 ಮೊಕದ್ದಮೆಗಳನ್ನು ಎದುರಿಸುತ್ತಿದೆ, ಕೋವಿಶೀಲ್ಡ್‌ ಲಸಿಕೆಯು ಡಜನ್‌ಗಟ್ಟಲೆ ಪ್ರಕರಣಗಳಲ್ಲಿ ಸಾವು ಮತ್ತು ಗಂಭೀರವಾದ ಗಾಯವನ್ನು ಉಂಟುಮಾಡಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ಪರಿಹಾರವನ್ನು ಬಯಸುತ್ತಿದ್ದಾರೆ. ಈ ಸುದ್ದಿಯು ಭಾರತದ ಜನರನ್ನು ಒಳಗೊಂಡಂತೆ ವಿಶ್ವದಾದ್ಯಂತ ಕೋಟ್ಯಾಂತರ ಜನರ ಮೇಲೆ ಪರಿಣಾಮ ಬೀರಿದೆ.

ನೀವು ಚಿಂತೆ ಮಾಡಬೇಕೇ?

ಕೋವಿಶೀಲ್ಡ್‌ ಲಸಿಕೆ ಬಗ್ಗೆ ಉಂಟಾಗುವ ಅಪರೂಪದ ಈ ಅಡ್ಡ ಪರಿಣಾಮದ ಬಗ್ಗೆ ವೈದ್ಯರನ್ನು ಮಾತನಾಡಿಸಿದಾಗ ಅವರು ಈ ಕುರಿತ ದೀರ್ಘ ಕಾಲದ ಪರಿಣಾಮ ಬೀರುವುದನ್ನು ನಿರಾಕರಿಸಿದ್ದಾರೆ. ಲಸಿಕೆಗೆ ಸಂಬಂಧಿಸಿದ ಪ್ರತಿಕೂಲ ಪರಿಣಾಮಗಳು ಸಾಮಾನ್ಯವಾಗಿ ಲಸಿಕೆ ನೀಡಿದ ನಂತರ ಕೆಲವು ವಾರಗಳಲ್ಲಿ (1-6 ವಾರಗಳಲ್ಲಿ) ಸಂಭವಿಸುತ್ತವೆ. ಆದ್ದರಿಂದ 2 ವರ್ಷಗಳ ಹಿಂದೆ ಲಸಿಕೆ ತೆಗೆದುಕೊಂಡ ಭಾರತದ ಜನರು ಈ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ಹೇಳಿದ್ದಾರೆ.

ಭಾರತದಲ್ಲಿ ಲಸಿಕೆ ಪಡೆದ ನಂತರ ಜನರಲ್ಲಿ ಟಿಟಿಎಸ್ ಸಂಭವಿಸುವಿಕೆ ಕಂಡು ಬಂದಿಲ್ಲ ಎಂದು ಡಾ.ಕುಮಾರ್ ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ ಸಹ-ಅಧ್ಯಕ್ಷರಾದ ಡಾ.ರಾಜೀವ್ ಜಯದೇವನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ನಿರ್ದಿಷ್ಟ ಅಡ್ಡಪರಿಣಾಮವು ಮೊದಲ ಡೋಸ್ ಪಡೆದ ಮೊದಲ ತಿಂಗಳಲ್ಲಿ ಮಾತ್ರ ಕಂಡು ಬರುತ್ತದೆ, ನಂತರ ಕಂಡು ಬರುವುದಿಲ್ಲ ಎಂದು ಹೇಳಿದ್ದಾರೆ.

ಕೆಲ ಪ್ರತ್ಯೇಕ ಪ್ರಕರಣಗಳಲ್ಲಿ ಈ ರೀತಿ ವರದಿಯಾಗಿದೆ. ಆದ್ದರಿಂದ, ಕೋವಿಡ್ ವ್ಯಾಕ್ಸಿನೇಷನ್ ನಂತರ ಟಿಟಿಪಿ ಅತ್ಯಂತ ಅಪರೂಪವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್-19 ವ್ಯಾಕ್ಸಿನೇಷನ್‌ ಪಡೆದ ನಂತರ ರಕ್ತ ಹೆಪ್ಪುಗಟ್ಟುವಿಕೆ ಕುರಿತ ಪ್ರಕರಣ ವಿಶ್ವದ ವಿವಿಧ ಭಾಗಗಳಿಂದ 2021ರಿಂದ ವರದಿಯಾಗಿದೆ ಎಂದು ಹೇಳಿದ್ದಾರೆ.

TTS ಕಳೆದ 100 ವರ್ಷಗಳಿಂದ ಗುರುತಿಸಲ್ಪಟ್ಟಿರುವ ರೋಗವಾಗಿದೆ, ಮೊದಲ ಪ್ರಕರಣವನ್ನು 1924ರಲ್ಲಿ 16 ವರ್ಷದ ಬಾಲಕಿಯಲ್ಲಿ ಪತ್ತೆ ಹಚ್ಚಲಾಗಿದೆ. ಇದು ಕಳೆದ ನಾಲ್ಕು ದಶಗಳಿಂದ ವೈದ್ಯರ ನಿಗಾದಲ್ಲಿ ಇದೆ ಎಂದು ಡಾ.ಕುಮಾರ್‌ ಹೇಳಿದ್ದಾರೆ.

ಕೋವಿಡ್ ಲಸಿಕೆಗಳು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತವೆ, ಆದರೆ ಅಪಾಯವು ತುಂಬಾ ಚಿಕ್ಕದಾಗಿದೆ. ಭಾರತ ಮತ್ತು ಇತರ ದೇಶಗಳಿಂದ ಪ್ರಕಟವಾದ ಅನೇಕ ವೈಜ್ಞಾನಿಕ ಅಧ್ಯಯನಗಳಲ್ಲಿ ಇದು ಸಾಬೀತಾಗಿದೆ. ಕೋವಿಡ್-19 ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಗೆ ಒಂದು ಸ್ಥಾಪಿತ ಕಾರಣವಾಗಿದೆ ಮತ್ತು ಲಸಿಕೆಯನ್ನು ಪಡೆದವರು ಈ ಬಗ್ಗೆ ಕಡಿಮೆ ಅಪಾಯವನ್ನು ಹೊಂದಿರುತ್ತಾರೆ ಎಂದು ಡಾ ಜಯದೇವನ್ ಹೇಳಿದ್ದಾರೆ.

COVISHIELDಗಿಂತ COVAXIN ಉತ್ತಮವಾಗಿದೆಯೇ?

ಪ್ರತಿಕೂಲ ಪರಿಣಾಮಗಳ ಅಪಾಯದ ಆಧಾರದ ಮೇಲೆ ಒಂದು ಕೋವಿಡ್ ಲಸಿಕೆಯನ್ನು ಇನ್ನೊಂದಕ್ಕಿಂತ ಉತ್ತಮ ಎಂದು ಆಯ್ಕೆ ಮಾಡಲು ಸಾಕಷ್ಟು ದಾಖಲೆಗಳು ಇಲ್ಲ. ಎಲ್ಲಾ ಲಸಿಕೆಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳು ಅಡ್ಡ ಪರಿಣಾಮಗಳನ್ನು ಹೊಂದಿವೆ. ಭಾರತದಲ್ಲಿ ಈ ಲಸಿಕೆಗಳನ್ನು ತೆಗೆದುಕೊಂಡ ಕೋಟಿಗಟ್ಟಲೆ ಜನರು ಈಗ ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ ಎಂದು ಡಾ.ಕುಮಾರ್ ಹೇಳಿದ್ದಾರೆ.

ಇದನ್ನು ಓದಿ: ಮೋದಿಯನ್ನು ಟೀಕಿಸಿದ್ದಕ್ಕೆ ಸ್ವಪಕ್ಷದ ನಾಯಕನ ಬಂಧನ: ಮೌನಕ್ಕೆ ಶರಣಾದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...