Homeಮುಖಪುಟಲೋಕಸಭೆ ಚುನಾವಣೆ : 1 ಮತ್ತು 2ನೇ ಹಂತದ ಮತದಾನದ ಅಂತಿಮ ಅಂಕಿ ಅಂಶ ಇನ್ನೂ...

ಲೋಕಸಭೆ ಚುನಾವಣೆ : 1 ಮತ್ತು 2ನೇ ಹಂತದ ಮತದಾನದ ಅಂತಿಮ ಅಂಕಿ ಅಂಶ ಇನ್ನೂ ಪ್ರಕಟಿಸದ ಚು. ಆಯೋಗ

- Advertisement -
- Advertisement -

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ಮತ್ತು ಎರಡನೇ ಹಂತದ ಮತದಾನ ಏಪ್ರಿಲ್ 26 ರಂದು ನಡೆದಿದೆ. ಆದರೆ, ಭಾರತೀಯ ಚುನಾವಣಾ ಆಯೋಗ (ಇಸಿಐ) ಎರಡೂ ಹಂತದ ಮತದಾನದ ಅಂತಿಮ ಅಂಕಿ ಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಎರಡೂ ಬಾರಿಯೂ ಸಂಜೆ 7 ಗಂಟೆಯ ಹೊತ್ತಿಗೆ ಮತದಾನದ ಅಂದಾಜು ಟ್ರೆಂಡ್ ಬಗ್ಗೆ ಮಾತ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಏಪ್ರಿಲ್ 19 ರಂದು ಅಂದಾಜು 60 ಶೇ. ಮತ್ತು ಏಪ್ರಿಲ್ 26 ರಂದು 60.96 ಶೇ. ಮತದಾನವಾಗಿದೆ ಎಂದಿದೆ.

thehindubusinessline.com ಪ್ರಕಟಿಸಿದ ವರದಿಯಲ್ಲಿ ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು ಮೊದಲ ಹಂತದಲ್ಲಿ ಅಂದಾಜು ಶೇ. 66.14 ಮತ್ತು ಎರಡನೇ ಹಂತದಲ್ಲಿ ಶೇ. 66.7 ರಷ್ಟು ಅಂತಿಮ ಮತದಾನವಾಗಿದೆ ಎಂದು ತಿಳಿಸಿದ್ದಾರೆ. ಅಂತಿಮ ಅಂಕಿ ಅಂಶಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ ಎಂದಿದ್ದಾರೆ. ಆದರೆ, ಇದುವರೆಗೆ ಅಂತಿಮ ಅಂಕಿ ಅಂಶ ಬಿಡುಗಡೆ ಮಾಡಿಲ್ಲ ಎಂದಿದೆ.

ಮತದಾನದ ಅಂಕಿ ಅಂಶಗಳ ಕುರಿತಾಗಿ ಮಾತ್ರ ನಾವು ಹೇಳುತ್ತಿಲ್ಲ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ನೋಂದಾಯಿತ ಮತದಾರರ ಸಂಖ್ಯೆಯೂ ಕಾಣೆಯಾಗಿದೆ ಎಂದು thehindubusinessline.com ವರದಿಯಲ್ಲಿ ತಿಳಿಸಿದೆ.

ವಿವಿಧ ಕ್ಷೇತ್ರಗಳ ಮತದಾರರ ಸಂಖ್ಯೆಯನ್ನು ತಿಳಿದುಕೊಳ್ಳಲು ಮುಂದಾದಾಗ, ಉತ್ತರ ಪ್ರದೇಶದಂತಹ ಕೆಲ ಆಯ್ದ ರಾಜ್ಯಗಳ ಬೂತ್‌ವಾರು ಮತದಾರರ ಪಟ್ಟಿಗಳು ಮಾತ್ರ ನಮಗೆ ದೊರೆತಿದೆ. ಒಡಿಶಾ, ಬಿಹಾರ, ದೆಹಲಿಯಂತಹ ರಾಜ್ಯಗಳ ದತ್ತಾಂಶಗಳು ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಬಿಹಾರ, ಒಡಿಶಾ ರಾಜ್ಯಗಳ ಮತದಾರರ ಸಂಖ್ಯೆ ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಮಾಹಿತಿ ಒದಗಿಸಬೇಕಾದ ವೆಬ್‌ಸೈಟ್‌ನ ಪುಟದಲ್ಲಿ ದೋಷದ ಸಂದೇಶ ಕಾಣಿಸಿಕೊಂಡಿದೆ ಎಂದು ವರದಿ ಹೇಳಿದೆ.

ಇದುವರೆಗಿನ ಅಂದಾಜು ಮತದಾನದ ಪ್ರಮಾಣವು 2019ರ ಲೋಕಸಭೆ ಚುನಾವಣೆಯಲ್ಲಿ ಕಂಡುಬಂದಕ್ಕಿಂತ ಕಡಿಮೆಯಾಗಿದೆ ಎಂದು ದಿ ವೈರ್ ವರದಿ ತಿಳಿಸಿದೆ.

ಈ ಕುಸಿತವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ ಅವರಂತಹ ಮೋದಿ ಸರ್ಕಾರದ ಟೀಕಾಕಾರರು ಎನ್‌ಡಿಎಯೇತರ ಪಕ್ಷಗಳಿಗಿಂತ ಬಿಜೆಪಿ ನೇತೃತ್ವದ ಎನ್‌ಡಿಎ ತೆಕ್ಕೆಯಲ್ಲಿರುವ ಕ್ಷೇತ್ರಗಳಲ್ಲಿ ಮತದಾನದ ಕುಸಿತವು ಹೆಚ್ಚಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಸುಡುಬಿಸಿಲು ಮತದಾನದ ಪ್ರಮಾಣ ಕುಸಿಯಲು ಕಾರಣವಾಗಿದೆ ಎಂದು ನಂಬಿಕೊಂಡಿರುವ ಬಿಜೆಪಿ ಬೆಂಬಲಿಗರು, ಮೋದಿಯವರ ಪುನರಾಯ್ಕೆ ಪೂರ್ವ ನಿಗದಿತವಾಗಿರುವುದರಿಂದ ಹತಾಶರಾಗಿರುವ ಮೋದಿ ಸರ್ಕಾರದ ವಿರೋಧಿಗಳು ಮತದಾನ ಮಾಡಿರಲಿಕ್ಕಿಲ್ಲ ಎಂದು ಭಾವಿಸಿದ್ದಾರೆ ಎಂದು ವರದಿಯು ಹೇಳಿದೆ.

ಲೋಕಸಭಾ ಚುನಾವಣೆಯನ್ನು ಸಾಮಾನ್ಯ ವಹಿವಾಟು, ಮಾಮೂಲು ವ್ಯವಹಾರದಂತೆ ನಡೆಸಲಾಗುತ್ತಿದೆ. ಖುದ್ದು ಪ್ರಧಾನಿಯವರ ನೇತೃತ್ವದಲ್ಲಿ ಬಿಜೆಪಿ ನಾಯಕರು ನಿರ್ಭೀತಿಯಿಂದ ಅಲ್ಪಸಂಖ್ಯಾತರ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ಮಾಡುತ್ತಿದ್ದಾರೆ ಮತ್ತು ಈ ಬಗ್ಗೆ ಚುನಾವಣಾ ಆಯೋಗವು ನಿರ್ಲಿಪ್ತವಾಗಿದೆ. ಕೆಲವು ಪ್ರಾದೇಶಿಕ ನಾಯಕರನ್ನು ಹೊರತುಪಡಿಸಿ ಪ್ರತಿಪಕ್ಷಗಳು ತಮ್ಮ ಕಾರ್ಯಕರ್ತರನ್ನು ಕ್ರೋಡೀಕರಿಸಲು ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸಲು ಹೆಣಗಾಡುತ್ತಿವೆ. ಇದು ಮೋದಿ ಆಡಳಿತವು ಎಸಗಿರುವ ಅತಿರೇಕಗಳಿಗೆ ವಿಶ್ವಾಸಾರ್ಹವಾದ ಸವಾಲು ಇಲ್ಲ ಎಂಬ ಭಾವನೆಯನ್ನು ಹುಟ್ಟು ಹಾಕಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಸಮಾನ ಸ್ಪರ್ಧಾಕಣದ ಕೊರತೆ ಎದ್ದು ಕಾಣುತ್ತಿದೆ. ಅದು ರಹಸ್ಯವಾಗಿ ಉಳಿದಿಲ್ಲ. 18ನೇ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ವಿಷಯಗಳು ಪ್ರಾಬಲ್ಯ ಪಡೆದಿವೆ ಮತ್ತು ಪುನರಾವರ್ತಿತ ಪ್ರಚಾರದೊಂದಿಗೆ ಹತಾಶೆ ಕಂಡು ಬರುತ್ತಿದೆ. ಇದು ಮೋದಿ ಸರ್ಕಾರದ ಬೆಂಬಲಿಗರು ಮತ್ತು ವಿರೋಧಿಗಳಲ್ಲಿ ಮತದಾನದ ಪ್ರಮಾಣ ಕುಸಿಯಲು ನಿಜವಾದ ಕಾರಣವಾಗಿರಬಹುದು ಎಂದು ದಿ ವೈರ್ ಅಂದಾಜಿಸಿದೆ.

ಇದನ್ನೂ ಓದಿ : ಅರವಿಂದ್ ಕೇಜ್ರಿವಾಲ್‌ನ್ನು ಚುನಾವಣೆಗೆ ಮುನ್ನ ಬಂಧಿಸಿದ್ದು ಏಕೆ? EDಗೆ ಉತ್ತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಾಯುವ ಮುನ್ನ ‘ಹೇ ರಾಮ್’ ಎಂದ ಮಹಾತ್ಮಾ ಗಾಂಧಿಯನ್ನು ಅನುಸರಿಸುತ್ತೇವೆ: ಪ್ರಿಯಾಂಕಾ ಗಾಂಧಿ

0
"ನಮ್ಮ ಪಕ್ಷವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತದೆ; ಅವರು ಸಾಯುವ ಮೊದಲು 'ಹೇ ರಾಮ್' ಎಂದು ಉಚ್ಚರಿಸಿದರು. ಆದರೆ, ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ವಿರೋಧಿ ಎಂದು ಆರೋಪಿಸುವುದು...