ದೆಹಲಿಯ ಜಾಮಾ ಮಸೀದಿ ಸೇರಿದಂತೆ ವಕ್ಫ್ ಮಂಡಳಿಯ 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಬುಧವಾರ ನೋಟಿಸ್ ನೀಡಿದೆ.
ಈ ಕುರಿತು ನೇಮಕವಾದ ಇಬ್ಬರು ಸದಸ್ಯರ ಸಮಿತಿಯ ವರದಿಯ ಆಧಾರದ ಮೇಲೆ ಮಸೀದಿಗಳು, ದರ್ಗಾಗಳು ಮತ್ತು ಸ್ಮಶಾನಗಳು ಸೇರಿದಂತೆ 123 ವಕ್ಫ್ ಬೋರ್ಡ್ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಚಿವಾಲಯವು ಫೆಬ್ರವರಿಯಲ್ಲೇ ನಿರ್ಧರಿಸಿತ್ತು.
ಫೆಬ್ರವರಿ 8ರ ಪತ್ರದಲ್ಲಿ ಜಮೀನು ಮತ್ತು ಅಭಿವೃದ್ಧಿ ಅಧಿಕಾರಿಯೋರ್ವರು 123 ವಕ್ಫ್ ಆಸ್ತಿಗಳಿಗೆ ಸಂಬಂಧಿಸಿ ಎಲ್ಲಾ ವಿಷಯಗಳಿಂದ ವಕ್ಪ್‌ನಿಂದ ಅದನ್ನು “ಮುಕ್ತಗೊಳಿಸುವ” ನಿರ್ಧಾರದ ಬಗ್ಗೆ ಮಂಡಳಿಗೆ ಪತ್ರ ಬರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಈ ಕುರಿತು ನಿವೃತ್ತ ನ್ಯಾಯಮೂರ್ತಿ ಎಸ್‌ಪಿ ಗರ್ಗ್ ಅವರ ನೇತೃತ್ವದ ಸಮಿತಿಯೊಂದರ ಶಿಫಾರಸಿನ ಬಗ್ಗೆ ದಿಲ್ಲಿ ವಕ್ಫ್ ಮಂಡಳಿಯಿಂದ ಯಾವುದೇ ಮನವಿ ಅಥವಾ ಆಕ್ಷೇಪ ವ್ಯಕ್ತವಾಗಿಲ್ಲ ಎಂದು ಕೇಂದ್ರ ಸಚಿವಾಲಯದ ಜಮೀನು ಮತ್ತು ಅಭಿವೃದ್ಧಿ ಕಚೇರಿಯು ತಿಳಿಸಿದೆ.
ದಿಲ್ಲಿಯ ಜಾಮಾ ಮಸ್ಜಿದ್ ಸೇರಿದಂತೆ 123 ಆಸ್ತಿಗಳನ್ನು ವಕ್ಫ್ ಮಂಡಳಿಯಿಂದ ತನ್ನ ಸ್ವಾಧೀನಕ್ಕೆ ಪಡೆಯಲು ಕೇಂದ್ರ ಸರ್ಕಾರ ಆಗಸ್ಟ್ 22ರಂದು ನೋಟಿಸ್ ಹೊರಡಿಸಿದೆ ಎಂದು ವರದಿಯಾಗಿದೆ.
ಪಟ್ಟಿ ಮಾಡಲಾದ 123 ಆಸ್ತಿಗಳಲ್ಲಿ ದೆಹಲಿ ವಕ್ಫ್ ಬೋರ್ಡ್ ಯಾವುದೇ ಪಾಲನ್ನು ಹೊಂದಿಲ್ಲ. ಅಥವಾ ಅವರು ವರದಿ ಕುರಿತು ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ. ಆದ್ದರಿಂದ 123 ವಕ್ಫ್ ಆಸ್ತಿಗಳನ್ನು ದೆಹಲಿ ವಕ್ಫ್ ಮಂಡಳಿಯಿಂದ ವಶಕ್ಕೆ ಪಡೆಯಲಾಗುವುದು ಎಂದು ಜಮೀನು ಮತ್ತು ಅಭಿವೃದ್ಧಿ ಕಚೇರಿ ಪತ್ರದಲ್ಲಿ ತಿಳಿಸಿದೆ.
ನೊಟೀಸ್ ನೀಡಿರುವ ಕುರಿತು ಆಮ್ ಆದ್ಮಿ ಪಕ್ಷದ ಶಾಸಕ ಮತ್ತು ವಕ್ಪ್ ಮಂಡಳಿಯ ಅಧ್ಯಕ್ಷ ಅಮಾನತುಲ್ಲಾ ಖಾನ್ ವಿರೋಧವನ್ನು ವ್ಯಕ್ತಪಡಿಸಿದ್ದು, ಈ ನಿರ್ಧಾರವು ಮುಸ್ಲಿಂ ಸಮುದಾಯದಲ್ಲಿ ವ್ಯಾಪಕವಾದ ಆತಂಕ, ಭಯ ಮತ್ತು ಅಸಮಾಧಾನವನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ.
ವಕ್ಫ್ ಆಸ್ತಿ ವಿಚಾರದಲ್ಲಿ ಕೆಲವರನ್ನು ಸುಳ್ಳನ್ನು ಹರಡುತ್ತಿದ್ದಾರೆ. ನಾವು ವಕ್ಪ್ ಆಸ್ತಿಯನ್ನು ಯಾರಿಗೂ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಅಮಾನತುಲ್ಲಾ ಖಾನ್ ಹೇಳಿದ್ದಾರೆ.
ಇದನ್ನು ಓದಿ: ಭಾರತ ಹಿಂದೂ ರಾಷ್ಟ್ರವಲ್ಲ: ಮೋಹನ್ ಭಾಗವತ್‌ಗೆ ತಿರುಗೇಟು ಕೊಟ್ಟ ಸ್ವಾಮಿ ಪ್ರಸಾದ್ ಮೌರ್ಯ


