ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮತ್ತು ಮೇಘಸ್ಫೋಟಗಳು ಪ್ರಾಣಿಗಳ ಮೇಲಿನ ಕ್ರೌರ್ಯದಿಂದಾಗಿ ಸಂಭವಿಸುತ್ತಿವೆ ಎಂದು ಹಿಮಾಚಲ ಪ್ರದೇಶದ ಮಂಡಿ ಐಐಟಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಅವರು ಹೇಳಿದ್ದು, ಮಾಂಸ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ ವಿವಾದಕ್ಕೆ ಕಾರಣರಾಗಿದ್ದಾರೆ.
ಪ್ರಾಣಿಗಳ ವಧೆಯನ್ನು ನಿಲ್ಲಿಸದಿದ್ದರೆ ಹಿಮಾಚಲ ಪ್ರದೇಶವು ಅವನತಿ ಹೊಂದುತ್ತದೆ. ಮುಗ್ಧ ಪ್ರಾಣಿಗಳಿಗೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಆದರೂ ಜನರು ತಮ್ಮ ಕೌರ್ಯವನ್ನು ನಿಲ್ಲಿಸುತ್ತಿಲ್ಲ. ಮಾಂಸ ತಿನ್ನುತ್ತಿದ್ದಾರೆ. ಇದೇ ಕಾರಣಕ್ಕೆ ಹಿಮಾಚಲ ಪ್ರದೇಶದಲ್ಲಿ ಮತ್ತೆ ಮತ್ತೆ ಭೂಕುಸಿತಗಳು ಸಂಭವಿಸುತ್ತಿವೆ ಎಂದು ಬೆಹರಾ ಹೇಳಿದ್ದಾರೆ.
ಒಳ್ಳೆಯ ಮನುಷ್ಯರಾಗಲು ನೀವು ಏನು ಮಾಡಬೇಕು? ಎಂದು ಪ್ರಶ್ನಿಸಿದ ಬೆಹೆರಾ, ಮಾಂಸ ತಿನ್ನುವುದು ಬೇಡ ಎಂದು ಹೇಳಿದ್ದಾರೆ. ಅದಲ್ಲದೆ ತನ್ನ ಮಾತನ್ನು ಮುಂದುವರಿಸುತ್ತಾ, ಮಾಂಸವನ್ನು ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡಲು ವಿದ್ಯಾರ್ಥಿಗಳಿಗೆ ಆಗ್ರಹಿಸಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಮಂಡಿ ಐಐಟಿ ನಿರ್ದೇಶಕ ಲಕ್ಷೀಧರ್ ಬೆಹ್ರಾ ಅವರು ಸಂಪರ್ಕಕ್ಕೆ ಮಾದ್ಯಮಗಳಿಗೆ ಸಿಕ್ಕಿಲ್ಲ.
ಬಯೋಫಿಸಿಕ್ ಪ್ರಾಧ್ಯಾಪಕ ಗೌತಮ್ ಮೆನನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಐಐಟಿ ಮಂಡಿಯ ನಿರ್ದೇಶಕರ ದೃಷ್ಟಿಕೋನದ ಬಗ್ಗೆ ಬೇಸರವಿದೆ. ಬೆಹ್ರಾ ಅವರು ಈ ರೀತಿಯ ವಿವಾದಿತ ಹೇಳಿಕೆ ನೀಡುವುದು ಇದು ಮೊದಲಲ್ಲ. ಕಳೆದ ವರ್ಷ ತನ್ನ ಸ್ನೇಹಿತನ ಅಪಾರ್ಟ್‌ಮೆಂಟ್‌ನಲ್ಲಿ ದುಷ್ಠ ಶಕ್ತಿಗಳನ್ನು ಬೆನ್ನಟ್ಟಲು ಮಂತ್ರಗಳನ್ನು ಪಠಿಸಿದ್ದೆ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದರು ಎಂದು ಹೇಳಿದ್ದಾರೆ.
ಇದನ್ನು ಓದಿ: ಉದಯನಿಧಿ, ರಾಜಾ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸುವಂತೆ ಸುಪ್ರೀಂಗೆ ಅರ್ಜಿ



Foolish politician. They don’t know what they say. God alone have to save this country.