ಬಿಜೆಪಿಯಿಂದ ವ್ಯಾಪಕ ಟೀಕೆಗಳಿಗೆ ಒಳಗಾದ ಬಳಿಕ ಸನಾತನ ಧರ್ಮ ಕುರಿತು ತನ್ನ ಹೇಳಿಕೆಗೆ ಇನ್ನಷ್ಟು ಬಲವಾಗಿ ಅಂಟಿಕೊಂಡಿರುವಡಿಎಂಕೆ ಯುವ ಘಟಕದ ನಾಯಕ ಮತ್ತು ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು,” ಮೂಢನಂಬಿಕೆಗಳನ್ನು ಪ್ರಶ್ನಿಸಬೇಕಾದ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುವ ಅಗತ್ಯವಿದೆ” ಎಂದು ಹೇಳಿದ್ದಾರೆ.
ರವಿವಾರ ಕುಡಲೂರು ಶಾಸಕ ಸಬಾ ರಾಜೇಂದ್ರನ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಮಾತನಾಡಿದ ಸ್ಟಾಲಿನ್, ”ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ರಾಜಕೀಯ ಲಾಭಗಳಿಕೆಗಾಗಿ ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಹಾಗೂ ವದಂತಿಗಳು ಮತ್ತು ದ್ವೇಷವನ್ನು ಹರಡಿದ್ದಾರೆ. ನಾವು ಅಂಧಶ್ರದ್ಧೆಗಳು, ಕುರುಡು ನಂಬಿಕೆಗಳನ್ನು ಪ್ರಶ್ನಿಸುವ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರಬೇಕಾದ ಅಗತ್ಯವಿದೆ. 2021ರಲ್ಲಿ ತಮಿಳುನಾಡಿನಲ್ಲಿ ನಾವು ಕಂಡಿದ್ದ ಬದಲಾವಣೆಯಂತೆ 2024ರಲ್ಲಿ ದಿಲ್ಲಿಯಲ್ಲಿ ಅಧಿಕಾರ ಬದಲಾವಣೆಯನ್ನು ನಾವು ಕಾಣಬೇಕಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು.
2024ರ ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಠಿಣ ಪರಿಶ್ರಮ ಮುಂದಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.
”ಸೆ.2ರಂದು ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಂದರ್ಭ ಅವರು, ”ಸನಾತನ ಧರ್ಮದ ನಿರ್ಮೂಲನೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಬೇಕು” ಎಂದು ಹೇಳಿದ್ದರು. ಅವರ ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ವಿವಾದವನ್ನು ಸೃಷ್ಟಿಸಿದೆ.
”ನಾವು ನಿರ್ಮೂಲನೆ ಮಾಡಬೇಕಾದ ಕೆಲವು ವಿಷಯಗಳಿವೆ ಮತ್ತು ನಾವು ಕೇವಲ ವಿರೋಧಿಸಲು ಸಾಧ್ಯವಿಲ್ಲ. ಸೊಳ್ಳೆಗಳು, ಡೆಂಗ್ಯೂ, ಕರೋನಾ ಮತ್ತು ಮಲೇರಿಯಾಗಳನ್ನು ನಾವು ವಿರೋಧಿಸಲು ಸಾಧ್ಯವಿಲ್ಲ, ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಸನಾತನ ಕೂಡ ಹೀಗೆಯೇ. ಸನಾತನವನ್ನು ನಿರ್ಮೂಲನೆ ಮಾಡುವುದು ಮತ್ತು ವಿರೋಧಿಸದಿರುವುದು ನಮ್ಮ ಮೊದಲ ಕಾರ್ಯವಾಗಬೇಕು” ಎಂದು ಅವರು ಮುಂದುವರಿಸಿದರು.
ಉದಯನಿಧಿಯವರ ಈ ಹೇಳಿಕೆಯನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು, ”80% ಭಾರತದ ಜನಸಂಖ್ಯೆಯನ್ನು ಹೊಂದಿರು ”ಸನಾತನಿಯರ ನರಮೇಧದ ಕರೆ” ಎಂದು ವ್ಯಾಖ್ಯಾನಿಸಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ತಮಿಳುನಾಡು ಸಚಿವರಿಗೆ ಸಚಿವರು ”ಸರಿಯಾದ ಪ್ರತಿಕ್ರಿಯೆಯನ್ನು ನೀಡಬೇಕು” ಎಂದು ಹೇಳಿದ್ದರು.
ಇದನ್ನೂ ಓದಿ: ಸನಾತನ ವಿವಾದ: ಪುತ್ರನ ಹೇಳಿಕೆ ಸಮರ್ಥಿಸಿಕೊಂಡ ಸ್ಟಾಲಿನ್, ಪ್ರಧಾನಿ ಪ್ರತಿಕ್ರಿಯೆಗೆ ಆಕ್ಷೇಪ


