ಇದು ಮುಸ್ಲಿಮರು ಒಗ್ಗಟ್ಟಾಗುವ ಮತ್ತು ತಮ್ಮ ಮೀಸಲಾತಿ ಕೇಳುವ, ತಮಗಾಗಿ ಮಾತನಾಡುವ ಸಮಯ ಎಂದು ಮೌಲಾನಾ ಆಜಾದ್ ವಿಚಾರ ಮಂಚ್ ಅಧ್ಯಕ್ಷ, ಮಾಜಿ ಕಾಂಗ್ರೆಸ್ ಸಂಸದ ಹುಸೇನ್ ದಳವಾಯಿ ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಮರಾಠ, ಒಬಿಸಿ ಪ್ರತಿಭಟನೆಗಳು ನಡೆಯುತ್ತಿರುವಾಗ ಮುಸ್ಲಿಮರಿಗೆ ಮೀಸಲಾತಿಯ ಆಗ್ರವು ಮತ್ತೆ ಭುಗಿಲೆದ್ದಿದೆ. ಶುಭಾಂಗಿ ಖಪ್ರೆ ಅವರೊಂದಿಗಿನ ಸಂದರ್ಶನದಲ್ಲಿ ಮೌಲಾನಾ ಆಜಾದ್ ವಿಚಾರ ಮಂಚ್ ಅಧ್ಯಕ್ಷ, ಮಾಜಿ ಕಾಂಗ್ರೆಸ್ ಸಂಸದ ಹುಸೇನ್ ದಳವಾಯಿ ಅವರು ಮುಸ್ಲಿಂ ಮೀಸಲಾತಿಯ ಬೇಡಿಕೆಯನ್ನು ಇಟ್ಟಿದ್ದಾರೆ.
ಮುಸ್ಲಿಂ ಮೀಸಲಾತಿ ಹೊಸ ವಿಚಾರವಲ್ಲ. ಈ ಹಿಂದೆಯೂ ಮುಸ್ಲಿಂ ಮೀಸಲಾತಿಯ ಆಗ್ರಹ ಕೇಳಿಬಂದಿತ್ತು. ಮೀಸಲಾತಿಯ ಬೇಡಿಕೆಯಲ್ಲಿ ಯಾವುದೇ ಸಮುದಾಯವು ಸಮರ್ಥನೆಯನ್ನು ಹೊಂದಿದ್ದರೆ ಅದು ಮುಸ್ಲಿಮರು ಎಂದು ನಾನು ಹೇಳುತ್ತೇನೆ. ನಾನು ವೈಯಕ್ತಿಕವಾಗಿ ಮರಾಠರ ಮೀಸಲಾತಿ ಬೇಡಿಕೆಯನ್ನು ಬೆಂಬಲಿಸುತ್ತೇನೆ. ಅದೇ ರೀತಿ ಮುಸ್ಲಿಮರಿಗೂ ಕೂಡ ಮೀಸಲಾತಿ ಪಡೆಯುವ ಹಕ್ಕಿದೆ ಎಂದು ಹೇಳಿದ್ದಾರೆ.
ಧರ್ಮದ ಆಧಾರದ ಮೇಲೆ ಮೀಸಲಾತಿ ಅಸಂವಿಧಾನಿಕ ಎಂದು ಬಲಪಂಥೀಯರು ಸಾಮಾನ್ಯವಾಗಿ ಹೇಳುವ ವಾದವಾಗಿದೆ. ಆದರೆ ಇಲ್ಲಿ ವಿಷಯವೆಂದರೆ ನಾವು ಧಾರ್ಮಿಕ ಮಾನದಂಡಗಳ ಆಧಾರದ ಮೇಲೆ ಮುಸ್ಲಿಂ ಮೀಸಲಾತಿಯನ್ನು ಬಯಸುತ್ತಿಲ್ಲ. ನಾವು ಪ್ರತಿಪಾದಿಸಲು ಬಯಸುವುದು ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯಾಗಿದೆ. ಮೀಸಲಾತಿಯ ಮೂಲ ಮಾನದಂಡವೆಂದರೆ ಸಾಮಾಜಿಕ ಹಿಂದುಳಿದಿರುವಿಕೆ, ಇದು ಮುಸ್ಲಿಂ ಸಮುದಾಯಕ್ಕೆ ಅನ್ವಯಿಸುತ್ತದೆ. ಸಾಚಾರ್ ಸಮಿತಿ ವರದಿ, ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗದ ವರದಿ ಮುಸ್ಲಿಮರ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಹಿಂದುಳಿದಿರುವಿಕೆಯನ್ನು ಎತ್ತಿ ತೋರಿಸಿವೆ ಎಂದು ಹೇಳಿದ್ದಾರೆ.
2014ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಮರಾಠರಿಗೆ ಶೇ.16ರಷ್ಟು ಮೀಸಲಾತಿ ನೀಡಿತ್ತು. ಮುಸ್ಲಿಮರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ. 5ರಷ್ಟು ಮೀಸಲಾತಿಯನ್ನು ನೀಡಿದೆ. ಬಾಂಬೆ ಹೈಕೋರ್ಟ್ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಅನುಮೋದಿಸಲಿಲ್ಲ ಆದರೆ ಶಿಕ್ಷಣದಲ್ಲಿ ಮುಸ್ಲಿಮರ ಕೋಟಾವನ್ನು ಎತ್ತಿಹಿಡಿಯಿತು. ದುರದೃಷ್ಟವಶಾತ್ ಸರ್ಕಾರವು ಅದನ್ನು ಜಾರಿಗೆ ವಿಫಲವಾಗಿದೆ ಎಂದು ಹೇಳಿದ್ದಾರೆ.
ಮೌಲಾನಾ ಆಜಾದ್ ವಿಚಾರ ಮಂಚ್ ವತಿಯಿಂದ ನಾವು ಮಹಾರಾಷ್ಟ್ರದಲ್ಲಿ ಪ್ರವಾಸ ಮಾಡುತ್ತೇವೆ ಮತ್ತು ಮುಸ್ಲಿಮರಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಒಟ್ಟಾಗುಂತೆ ಮತ್ತು ಸಂಘಟಿತರಾಗುವಂತೆ ಮನವಿ ಮಾಡುತ್ತೇವೆ. ನಾವು ಯಾವುದೇ ಹಿಂಸಾಚಾರ ಅಥವಾ ಪ್ರತಿಭಟನೆಗಳನ್ನು ಬಯಸುವುದಿಲ್ಲ. ಆದರೆ ಇದು ಮುಸ್ಲಿಮರು ಒಗ್ಗೂಡುವ ಮತ್ತು ತಮಗಾಗಿ ಮಾತನಾಡುವ ಸಮಯ ಇದು ಎಂದು ಅವರು ಹೇಳಿದ್ದಾರೆ.
ಶಿಕ್ಷಣ, ಉದ್ಯೋಗ, ಜೀವನ ಮಟ್ಟ ಎಲ್ಲದರಲ್ಲೂ ಮುಸ್ಲಿಮರು ಹಿಂದುಳಿದಿದ್ದಾರೆ. ಮುಸ್ಲಿಮರಲ್ಲಿ ಶಾಲೆ ಬಿಟ್ಟವರ ಪ್ರಮಾಣ ಶೇ.75ರಷ್ಟಿದೆ. 2 ರಿಂದ 2.5 ರಷ್ಟು ಮುಸ್ಲಿಂ ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣವನ್ನು ಪಡೆಯತ್ತಾರೆ. ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ಶೇಕಡಾ 2ಕ್ಕಿಂತ ಕಡಿಮೆಯಿದೆ. ಖಾಸಗಿ ಉದ್ಯೋಗಗಳಲ್ಲಿ ಇದು ಶೇ. 3ರಷ್ಟು ಮಾತ್ರ ಇದೆ ಎಂದು ಅವರು ಹೇಳಿದ್ದಾರೆ.
ಕೊಳೆಗೇರಿಗಳಲ್ಲಿ ಹೆಚ್ಚಿನ ಮುಸ್ಲಿಂ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಸ್ವಾತಂತ್ರ್ಯದ ನಂತರ ಶಿಕ್ಷಣ, ಉದ್ಯೋಗ ಮತ್ತು ಜೀವನೋಪಾಯ ಸೂಚ್ಯಂಕದಲ್ಲಿ ಮುಸ್ಲಿಮರು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗಿಂತ ಕೆಳಗಿರುವುದು ಸತ್ಯ. ದಲಿತರು ಮತ್ತು ಬುಡಕಟ್ಟು ಜನರ ಜೀವನ ಚೆನ್ನಾಗಿದೆ ಎಂದು ನಾನು ಹೇಳುತ್ತಿಲ್ಲ. ನಾನು ಹೇಳಲು ಪ್ರಯತ್ನಿಸುತ್ತಿರುವ ಅಂಶವೆಂದರೆ ದಲಿತರು ಅಥವಾ ಬುಡಕಟ್ಟು ಜನಾಂಗದವರ ಪ್ರಗತಿಗೆ ಹೋಲಿಸಿದರೆ ಮುಸ್ಲಿಮರು ತುಂಬಾ ಕೆಳಮಟ್ಟದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ತಮಿಳುನಾಡು: ಅಂಗಾಂಗ ದಾನ ಮಾಡುವವರಿಗೆ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ


