Homeಮುಖಪುಟಮುಂಬೈ: ಗೋರೆಗಾಂವ್​ನ ಕಟ್ಟಡದಲ್ಲಿ ಅಗ್ನಿ ದುರಂತ; 7 ಮಂದಿ ಸಜೀವ ದಹನ

ಮುಂಬೈ: ಗೋರೆಗಾಂವ್​ನ ಕಟ್ಟಡದಲ್ಲಿ ಅಗ್ನಿ ದುರಂತ; 7 ಮಂದಿ ಸಜೀವ ದಹನ

- Advertisement -
- Advertisement -

ಮುಂಬೈನ ಗೋರೆಗಾಂವ್‌ನ ಕಟ್ಟಡವೊಂದರಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆ.

ಬೆಳಗಿನ ಜಾವ ಸುಮಾರು 3 ಗಂಟೆಗೆ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಹಲವಾರು ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದು, ಕಟ್ಟಡದಲ್ಲಿ ಅಗ್ನಿಶಾಮಕ ಕಾರ್ಯಾಚರಣೆ ನಡೆಯುತ್ತಿದೆ.

ಏಳು ಅಂತಸ್ತಿನ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೆಲಮಹಡಿಯಲ್ಲಿನ ಅಂಗಡಿಗಳು, ಸ್ಕ್ರ್ಯಾಪ್ ಸಾಮಗ್ರಿಗಳು ಮತ್ತು ಸುತ್ತಮುತ್ತಲಿನ ಹಲವಾರು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ ಕೂಡಲೇ ಅಗ್ನಿಶಾಮಕ ಕಾರ್ಯಾಚರಣೆ ಆರಂಭಿಸಲಾಗಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನಂತರ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ತಂಪಾಗಿಸುವ ಪ್ರಯತ್ನಗಳು ನಡೆಯುತ್ತಿವೆ.

ಇಬ್ಬರು ಅಪ್ರಾಪ್ತರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ಘೋಷಿಸಿದರು. ಚಿಕಿತ್ಸೆ ವೇಳೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಇಬ್ಬರ ಸ್ಥಿತಿ ಗಂಭೀರವಾಗಿದೆ – 25 ಜನರನ್ನು ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ವೈದ್ಯಕೀಯ ಕಾಲೇಜು (ಎಚ್‌ಬಿಟಿ) ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮುಂಬೈ ಅಗ್ನಿಶಾಮಕದಳ ಎಂಟು ಅಗ್ನಿಶಾಮಕ ಇಂಜಿನ್‌ಗಳು, ಐದು ಜಂಬೋ ಟ್ಯಾಂಕರ್‌ಗಳು, ನೀರಿನ ಟ್ಯಾಂಕ್, ಟರ್ನ್‌ಟೇಬಲ್ ಲ್ಯಾಡರ್ ಸ್ಥಳಕ್ಕೆ ಆಗಮಿಸಿತ್ತು.

ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಬಿಹಾರ: ಪೊಲೀಸ್‌ ದಾಳಿ ವೇಳೆ ಬಾಲಕ ಸಾವು; ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ ಆಕ್ರೋಶಿತ ಗುಂಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೋಪಾಲ್‌| ಪುರಸಭೆಯ ಕಸಾಯಿಖಾನೆಯಲ್ಲಿ ಗೋಮಾಂಸ ಪತ್ತೆ; ಕಾಂಗ್ರೆಸ್‌-ಬಿಜೆಪಿ ಪ್ರತಿಭಟನೆ

ಪುರಸಭೆಯ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆದಿದೆ ಎಂಬುದನ್ನು ಅಧಿಕಾರಿಗಳು ಮತ್ತೆಹಚ್ಚಿದ ನಂತರ ದೊಡ್ಡ ವಿವಾದ ಭುಗಿಲೆದ್ದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಹಿಂದೂ ಬಲಪಂಥೀಯ ಸಂಘಟನೆಗಳು ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಕಾರ್ಯಕರ್ತರಿಂದ...

ಇರಾನ್‌ ದಂಗೆ | ಹತ್ಯೆಗಳು ನಿಂತಿವೆ ಎಂದ ಟ್ರಂಪ್ : ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವ ವರದಿ ತಳ್ಳಿಹಾಕಿದ ವಿದೇಶಾಂಗ ಸಚಿವ

ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನಾಕಾರರ 'ಹತ್ಯೆಗಳು ನಿಂತಿವೆ' ಎಂದು ಬುಧವಾರ (ಜ.14) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ಪ್ರತಿಭಟನಾಕಾರರನ್ನು...

ಮುಂಬೈ ಬಿಎಂಸಿ ಚುನಾವಣೆ 2026: ಚುನಾವಣಾ ಆಯೋಗದ ವೆಬ್‌ಸೈಟ್ ಸ್ಥಗಿತ! ಮತದಾನ ಮಾಡಲು ಸಾಧ್ಯವಾಗದೆ ಪರದಾಡಿದ ನಾಗರಿಕರು

ಮುಂಬೈ: ಬಹು ಕುತೂಹಲಕಾರಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗೆ ಜನವರಿ 15, 2026 ರ ಗುರುವಾರ ಬೆಳಿಗ್ಗೆ 7:30 ಕ್ಕೆ ಮತದಾನ ಪ್ರಾರಂಭವಾಯಿತು, ಮುಂಬೈನಲ್ಲಿ ಚುನಾಯಿತ ನಾಗರಿಕ ಸಂಸ್ಥೆ ಇಲ್ಲದೆ ಸುಮಾರು...

ಮೀರತ್| ದಲಿತ ಮಹಿಳೆ ಕೊಲೆ-ಮಗಳ ಅಪಹರಣ; ಸಂತ್ರಸ್ತ ಕುಟುಂಬವನ್ನು ಸಾರ್ವಜನಿಕ ಸಂಪರ್ಕದಿಂದ ದೂರವಿಟ್ಟ ಪೊಲೀಸರು

ಮೀರತ್‌ನಲ್ಲಿ ಪ್ರಬಲ ಜಾತಿ ಪುರುಷರ ಗುಂಪೊಂದು ದಲಿತ ಮಹಿಳೆಯನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, "ಪೊಲೀಸರು ಮತ್ತು ಬಿಜೆಪಿ ಮುಖಂಡರು ತಮ್ಮನ್ನು ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತಗೊಳಿಸಲು ಪ್ರಯತ್ನಿಸುತ್ತಿದೆ, ಪ್ರಮುಖ...

ಮಸೀದಿ, ದರ್ಗಾಗಳನ್ನು ಗುರಿಯಾಗಿಸಿಕೊಂಡು ಪದೇ ಪದೇ ಪಿಐಎಲ್‌ : ಎನ್‌ಜಿಒಗೆ ಹೈಕೋರ್ಟ್ ತರಾಟೆ

ರಾಷ್ಟ್ರ ರಾಜಧಾನಿಯಲ್ಲಿ ಮಸೀದಿ ಮತ್ತು ದರ್ಗಾಗಳು ಅತಿಕ್ರಮಣ ಮಾಡುತ್ತಿವೆ ಎಂದು ಆರೋಪಿಸಿ ಪದೇ ಪದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಕ್ಕಾಗಿ ಸೇವ್ ಇಂಡಿಯಾ ಫೌಂಡೇಶನ್ ಎಂಬ ಸಂಸ್ಥೆಯನ್ನು ದೆಹಲಿ ಹೈಕೋರ್ಟ್ ಬುಧವಾರ...

ಕಾಂಗ್ರೆಸ್‌ಗೆ ಮರಳಲು ಮುಂದಾದ ಬಿಜೆಪಿ ನಾಯಕನ ಮನೆ ಮೇಲೆ ಎಸಿಬಿ ದಾಳಿ

ಕಾಂಗ್ರೆಸ್‌ಗೆ ಮರಳುವ ಇಂಗಿತ ವ್ಯಕ್ತಪಡಿಸಿದ ಎರಡು ದಿನಗಳ ಬಳಿಕ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಮಹೇಂದ್ರಜೀತ್ ಸಿಂಗ್ ಮಾಳವೀಯ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದೆ...

ಬೀದರ್: ಗಾಳಿಪಟದ ದಾರ ಕುತ್ತಿಗೆ ಸೀಳಿ ಸ್ಥಳದಲ್ಲಿ ಪ್ರಾಣ ಬಿಟ್ಟ 48 ವರ್ಷದ ಬೈಕ್ ಸವಾರ

ಬೀದರ್ ಜಿಲ್ಲೆಯ ತಲಮಡಗಿ ಸೇತುವೆ ಬಳಿಯ ರಸ್ತೆಯಲ್ಲಿ ಮಗಳನ್ನು ಕರೆತರಲು ಬೈಕ್ ನಲ್ಲಿ ತೆರಳುತ್ತಿದ್ದ 48 ವರ್ಷದ ವ್ಯಕ್ತಿ ಕೊರಳಿಗೆ ಗಾಳಿ ಪಟದ ದಾರ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.  ಮೃತ...

ಐ-ಪ್ಯಾಕ್ ಮೇಲಿನ ದಾಳಿ: ಟಿಎಂಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಐ-ಪಿಎಸಿಗೆ ಸಂಬಂಧಿಸಿದ ಇತ್ತೀಚಿನ ದಾಳಿಗಳ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪಕ್ಷದ ಫೈಲ್‌ಗಳು ಮತ್ತು ಚುನಾವಣಾ ಸಂಬಂಧಿತ ಡೇಟಾವನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್...

ತೆಲಂಗಾಣ| ಪಂಚಾಯತ್ ಚುನಾವಣೆಯ ನಂತರ 500 ಬೀದಿ ನಾಯಿಗಳ ಸಾಮೂಹಿಕ ಕೊಲೆ; ‘ನಾಯಿ ಮುಕ್ತ ಗ್ರಾಮ’ದ ಭರವಸೆ ನೀಡಿದ್ದ ಅಭ್ಯರ್ಥಿಗಳು

ತೆಲಂಗಾಣದ ಹನಮಕೊಂಡ ಮತ್ತು ಕಾಮರೆಡ್ಡಿ ಜಿಲ್ಲೆಗಳಿಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಜನವರಿಯ ಮೊದಲ ಎರಡು ವಾರಗಳಲ್ಲಿ ಸುಮಾರು 500 ನಾಯಿಗಳನ್ನು ವಿಷ ಹಾಕಿ ಕೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ....

ಕಾನ್ಪುರ ದೇಹತ್‌ನಲ್ಲಿ ನೆರೆಯವರ ಹಲ್ಲೆಯಿಂದ ದಲಿತ ರೈತ ಸಾವು; ಆರು ಮಂದಿ ಬಂಧನ

ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಲ್ಲಿ 50 ವರ್ಷದ ದಲಿತ ರೈತನೊಬ್ಬ ತನ್ನ ನೆರೆಹೊರೆಯವರು ಮತ್ತು ಅವರ ಸಂಬಂಧಿಕರಿಂದ ಥಳಿತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮತ್ತು ಆತನ...