Homeಮುಖಪುಟಪೋಸ್ಟರ್ ವಾರ್: ರಾಹುಲ್‌ಗೆ ರಾವಣ ಎಂದ ಬಿಜೆಪಿ; 'ಮೋದಿ ಸುಳ್ಳುಗಾರ'- ಕಾಂಗ್ರೆಸ್ ತಿರುಗೇಟು

ಪೋಸ್ಟರ್ ವಾರ್: ರಾಹುಲ್‌ಗೆ ರಾವಣ ಎಂದ ಬಿಜೆಪಿ; ‘ಮೋದಿ ಸುಳ್ಳುಗಾರ’- ಕಾಂಗ್ರೆಸ್ ತಿರುಗೇಟು

- Advertisement -
- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಪೋಸ್ಟರ್​ ವಾರ್ ಶುರುವಾಗಿದ್ದು, ಆಡಳಿತಾರೂಢ ಬಿಜೆಪಿಯು ಟ್ವಿಟ್ಟರ್​ನಲ್ಲಿ ಪೋಸ್ಟರ್​ವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ರಾಹುಲ್ ಗಾಂಧಿಯನ್ನು ನವ ಯುಗದ ರಾವಣ ಎಂದು ಕರೆದಿದೆ. ಇದಕ್ಕೆ ತಿರುಗೇಟು ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಹಾಕಿ ‘ಸುಳ್ಳುಗಾರ’ ಎಂದು ಕಾಂಗ್ರೆಸ್ ಪೋಸ್ಟರ್ ಹರಿಬಿಟ್ಟಿದೆ.

”ಜಾರ್ಜ್ ಸೊರೊಸ್ ನಿರ್ದೇಶನದ – ಇಂಡಿಯಾ ಇನ್ ಡೇಂಜರ್ – ಕಾಂಗ್ರೆಸ್ ಪಾರ್ಟಿ ಪ್ರೊಡಕ್ಷನ್” ಎಂಬ ಶೀರ್ಷಿಕೆಯ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿಯ ಬಹು-ತಲೆಯ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಗಿದೆ. ‘ಹೊಸ ಯುಗದ ರಾವಣ’ ಎಂದು ಬಿಜೆಪಿ ಪೋಸ್ಟರ್ ಹಂಚಿಕೊಂಡಿದೆ.

ಟ್ವೀಟ್‌ನಲ್ಲಿ ಬಿಜೆಪಿ ಹಂಗೇರಿ-ಅಮೆರಿಕನ್ ಉದ್ಯಮಿ ಜಾರ್ಜ್ ಸೊರಸ್ ಅವರನ್ನೂ ಗುರಿಯಾಗಿಸಿದೆ. ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿ ರಾವಣನ ರೂಪದಲ್ಲಿರುವ ಚಿತ್ರವನ್ನು ಶೇರ್ ಮಾಡುವ ಭರದಲ್ಲಿ ಬಿಜೆಪಿ ಹೊಸ ಯುಗದ ರಾವಣ ಎಂದು ಬರೆದುಕೊಂಡಿದೆ. ”ಅವರು ದುಷ್ಟ, ಧರ್ಮ ವಿರೋಧಿ ಮತ್ತು ರಾಮ ವಿರೋಧಿ. ಭಾರತವನ್ನು ನಾಶ ಮಾಡುವುದು ಇವರ ಗುರಿಯಾಗಿದೆ”ಎಂದು ಬರೆದಿದೆ.

ಈ ಬಗ್ಗೆ ಕಾಂಗ್ರೆಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿದಾಳಿ ನಡೆಸಿದ್ದಾರೆ. ”ಹಿಂಸಾಚಾರವನ್ನು ಉತ್ತೇಜಿಸುವುದು ಬಿಜೆಪಿಯ ಪ್ರಯತ್ನವಾಗಿದೆ. ಪ್ರಧಾನಿ ಅವರು ಪ್ರತಿದಿನ ಹೇಳುವುದೆಲ್ಲಾ ಸುಳ್ಳು ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ” ಎಂದು ಹೇಳಿದ್ದಾರೆ.

ನೀವು ರಾಜಕೀಯ ಮತ್ತು ಚರ್ಚೆಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತೀರಿ? ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಟ್ವೀಟ್‌ಗಳನ್ನು ನೀವು ಒಪ್ಪುತ್ತೀರಾ? ನಿಮ್ಮ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಪಿ ನಡ್ಡಾ ಅವರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಮನೀಶ್ ಸಿಸೋಡಿಯಾ ವಿರುದ್ಧ ಪುರಾವೆ ಎಲ್ಲಿದೆ? ಸಿಬಿಐ, ಇಡಿಗೆ ಪ್ರಶ್ನಿಸಿದ ಸುಪ್ರೀಂಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...