Homeಮುಖಪುಟಸಿರಿಯಾದ ಸೇನಾ ಅಕಾಡೆಮಿ ಮೇಲೆ ಡ್ರೋನ್ ದಾಳಿ: 100ಕ್ಕೂ ಹೆಚ್ಚು ಜನರ ಸಾವು

ಸಿರಿಯಾದ ಸೇನಾ ಅಕಾಡೆಮಿ ಮೇಲೆ ಡ್ರೋನ್ ದಾಳಿ: 100ಕ್ಕೂ ಹೆಚ್ಚು ಜನರ ಸಾವು

- Advertisement -
- Advertisement -

ಸಿರಿಯಾದ ಸೇನಾ ಅಕಾಡೆಮಿ ಮೇಲೆ ಗುರುವಾರ ನಡೆದ ಭೀಕರ ಡ್ರೋಣ್ ದಾಳಿಯಲ್ಲಿ 100 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಯುದ್ಧದ ಮಾನಿಟರ್ ಹೇಳಿದೆ. ಸರ್ಕಾರಿ ಸ್ವಾಮ್ಯದ ಮನೆಗಳ ಮೇಲೆ ನಡೆದ ಈ ಭೀಕರ ದಾಳಿಯ ಹಿಂದೆ ‘ಭಯೋತ್ಪಾದಕ ಸಂಘಟನೆಗಳ’ ಕೈವಾಡ ಇದೆ ಎಂದು ಸರ್ಕಾರಿ ಮಾಧ್ಯಮಗಳು ದೂಷಿಸಿವೆ.

ಟರ್ಕಿ ಯುದ್ಧಪೀಡಿದ ದೇಶದ ಖುರ್ದಿಶ್ ವಶದಲ್ಲಿರುವ ಈಶಾನ್ಯ ಭಾಗದಲ್ಲಿ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ. ಬಾಂಬ್ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸುವುದಾಗಿ ಅಂಕಾರಾ ಈ ಮುನ್ನ ಎಚ್ಚರಿಕೆ ನೀಡಿತ್ತು.

ಸೆಂಟ್ರಲ್ ಸಿರಿಯಾದ ಹೋಮ್ಸ್ ನಗರದಲ್ಲಿ, ಸಶಸ್ತ್ರ ಭಯೋತ್ಪಾದಕ ಸಂಘಟನೆಗಳು ಮಿಲಿಟರಿ ಅಕಾಡೆಮಿಯ ಅಧಿಕಾರಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು” ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಅಧಿಕೃತ ಸುದ್ದಿ ಸಂಸ್ಥೆ SANA ತಿಳಿಸಿದೆ.

ಬ್ರಿಟನ್ ಮೂಲದ ನಿಗಾ ಸಂಸ್ಥೆಯಾದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಪ್ರಕಾರ, 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಈ ಪೈಕಿ ಅರ್ಧದಷ್ಟು ಜನ ಮಿಲಿಟರಿ ಪದವಿ ಪಡೆದವರು. 14 ನಾಗರಿಕರೂ ದಾಳಿಯಲ್ಲಿ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ ಕನಿಷ್ಠ 125 ಜನರು ಗಾಯಗೊಂಡಿದ್ದಾರೆ ಎಂದು ಸಂಘಟನೆ ವಿವರ ನೀಡಿದೆ.

ಪ್ರಾಥಮಿಕ ಮಾಹಿತಿಯಂತೆ ಆರು ಮಂದಿ ಮಹಿಳೆಯರು ಮತ್ತು ಆರು ಮಕ್ಕಳು ಸೇರಿದಂತೆ 80 ಜನರು ಮೃತಪಟ್ಟಿದ್ದಾರೆ. 240 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿ ಹಸನ್ ಅಲ್ ಘೋಬಶ್ ಹೇಳಿದ್ದಾರೆ.

ಯಾವುದೇ ಸಂಘಟನೆ ಈ ಘಟನೆಯ ಹೊಣೆ ಹೊತ್ತಿಲ್ಲ. ಡ್ರೋಣ್ಗಳ ಮೂಲಕ ಸ್ಫೋಟಕಗಳನ್ನು ತಂದು ದಾಳಿ ನಡೆಸಲಾಗಿದೆ. ಇದಕ್ಕೆ ಸಂಪೂರ್ಣ ಬಲದೊಂದಿಗೆ ಪ್ರತಿಕ್ರಿಯಿಸಲಾಗುತ್ತಿದೆ ಎಂದು ಸೇನೆ ಹೇಳಿಕೆ ನೀಡಿದೆ.

ಇದನ್ನೂ ಓದಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಮೊದಲ ದಲಿತ ಮಹಿಳೆ ಬೀನಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...