Homeಮುಖಪುಟಮನೀಶ್ ಸಿಸೋಡಿಯಾ ವಿರುದ್ಧ ಪುರಾವೆ ಎಲ್ಲಿದೆ? ಸಿಬಿಐ, ಇಡಿಗೆ ಪ್ರಶ್ನಿಸಿದ ಸುಪ್ರೀಂಕೋರ್ಟ್

ಮನೀಶ್ ಸಿಸೋಡಿಯಾ ವಿರುದ್ಧ ಪುರಾವೆ ಎಲ್ಲಿದೆ? ಸಿಬಿಐ, ಇಡಿಗೆ ಪ್ರಶ್ನಿಸಿದ ಸುಪ್ರೀಂಕೋರ್ಟ್

- Advertisement -
- Advertisement -

ಮದ್ಯ ನೀತಿ ಪ್ರಕರಣದಲ್ಲಿ ಬಂಧಿತ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ಕೆಲವು ಅವಲೋಕನಗಳನ್ನು ಮಾಡಿದ ಸುಪ್ರೀಂ ಕೋರ್ಟ್, ಸಾಕ್ಷ್ಯಗಳನ್ನು ಸಂಪೂರ್ಣವಾಗಿ ನೀಡಲಾಗಿಲ್ಲ, ಸಿಸೋಡಿಯಾ ವಿರುದ್ಧ ಪುರಾವೆ ಎಲ್ಲಿದೆ ಎಂದು ಕೇಳಿದೆ.

ಪ್ರಕರಣದಲ್ಲಿ ಸ್ವತಃ ಆರೋಪಿಯಾಗಿರುವ ಉದ್ಯಮಿ ದಿನೇಶ್ ಅರೋರಾ ಅವರ ಹೇಳಿಕೆಯನ್ನು ಹೊರತುಪಡಿಸಿ, ಸಿಸೋಡಿಯಾ ವಿರುದ್ಧ ಪುರಾವೆ ಎಲ್ಲಿದೆ ಎಂದು ಕೋರ್ಟ್‌ ಕೇಳಿದೆ. ಅರೋರಾ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ಮತ್ತು ಇತ್ತೀಚೆಗೆ ಜಾಮೀನು ಪಡೆದಿದ್ದಾರೆ.

ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠ, ಮನೀಷ್ ಸಿಸೋಡಿಯಾ ಅವರು ಹಣ ಪಡೆದಿದ್ದಾರೆ ಮತ್ತು ಅದು ಮದ್ಯದ ಗುಂಪಿನಿಂದ ಅವರಿಗೆ ಹೇಗೆ ತಲುಪಿತು ಎಂದು ಏಜೆನ್ಸಿಗಳ ಕೇಸ್ ಆಗಿದೆ ಎಂದು ಗಮನಿಸಿದ್ದಾರೆ.

100 ಕೋಟಿ ಮತ್ತು 30 ಕೋಟಿ ಎಂಬ ಎರಡು ಅಂಕಿಗಳನ್ನು ತೆಗೆದುಕೊಂಡಿದ್ದೀರಿ. ಅವರಿಗೆ ಇದನ್ನು ಪಾವತಿಸಿದವರು ಯಾರು? ಹಣವನ್ನು ಪಾವತಿಸಿದವರಲ್ಲಿ ಅನೇಕ ಜನರು ಇರಬಹುದು ಅದರಲ್ಲಿ ಮದ್ಯದ ನೀತಿಗೆ ಸಂಪರ್ಕ ಹೊಂದಿಲ್ಲದವರು ಇರಬಹುದು. ಪುರಾವೆ ಎಲ್ಲಿದೆ? ದಿನೇಶ್ ಅರೋರಾ ಅವರೇ ಸ್ವೀಕರಿಸಿದ್ದಾರೆ. ಹಾಗಾದ್ರೆ ಸಾಕ್ಷಿ ಎಲ್ಲಿದೆ? ದಿನೇಶ್ ಅರೋರಾ ಅವರ ಹೇಳಿಕೆಯನ್ನು ಹೊರತುಪಡಿಸಿ, ಬೇರೆ ಯಾವುದೇ ಪುರಾವೆಗಳಿವೆಯೇ ಎಂದು ನ್ಯಾಯಮೂರ್ತಿ ಖನ್ನಾ ಪ್ರಶ್ನಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಸಲ್ಲಿಸಿದ ಎಎಪಿ ನಾಯಕನ ವಿರುದ್ಧದ ಆರೋಪಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ ನ್ಯಾಯಮೂರ್ತಿ ಖನ್ನಾ, ಮನೀಶ್ ಸಿಸೋಡಿಯಾ ಈ ಪ್ರಕರಣದಲ್ಲಿ ಭಾಗಿಯಾಗಿರುವಂತೆ ಕಂಡು ಬರುತ್ತಿಲ್ಲ. ಇವರನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಹೇಗೆ ತಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇನ್ನು ಈ ಕುರಿತು ಅರ್ಜಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ಇದನ್ನು ಓದಿ: ಬಿಜೆಪಿ-ಜೆಡಿಎಸ್‌ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...