ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಿಂದ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯ ಪಕ್ಕದಲ್ಲಿದ್ದ ಆಹಾರವನ್ನು ಆಸ್ಪತ್ರೆಯ ಒಳಗೆ ನುಗ್ಗಿ ಬೀದಿ ನಾಯಿಯೊಂದು ತಿನ್ನುತ್ತಿರುವುದು ಕಂಡು ಬಂದಿದ್ದು, ಇದು ಬಿಜೆಪಿ ಮಾಡೆಲ್ ಎಂದು ಬಿಂಬಿಸುತ್ತಿದ್ದ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರಪ್ರದೇಶದ ಸರಕಾರಿ ಆಸ್ಪತ್ರೆಯ ದುಸ್ಥಿತಿಯನ್ನು ಬಹಿರಂಗಪಡಿಸುತ್ತದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವೀಡಿಯೊದಲ್ಲಿ ರೋಗಿಯು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾರೆ. ನಾಯಿ ಬಂದು ರೋಗಿಯ ಬೆಡ್ ಪಕ್ಕದಲ್ಲಿ ಇಟ್ಟಿದ್ದ ನೀರನ್ನು ಕುಡಿಯುವುದು, ರೋಗಿಗೆ ತಂದಿಟ್ಟಿದ್ದ ಆಹಾರ ತಿನ್ನುವುದು ಕಂಡು ಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ.
ಮೊರಾದಾಬಾದ್‌ನ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕುಲದೀಪ್ ಸಿಂಗ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ನಾಯಿಗಳನ್ನು ಆಸ್ಪತ್ರೆಯ ಒಳಗೆ ಪ್ರವೇಶಿಸದಂತೆ ತಡೆಯಲು ಕ್ರಮವನ್ನು ಕೂಡ ಕೈಗೊಳ್ಳುವುದಾಗಿ ಹೇಳಿದ್ದಾರೆ.
ನಾನು ವೀಡಿಯೊವನ್ನು ವೀಕ್ಷಿಸಿದ್ದು, ಈ ವಿಷಯದ ಬಗ್ಗೆ ತನಿಖೆ ನಡೆಸಲು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರಿಗೆ ಆದೇಶಿಸಿದ್ದೇನೆ. ಇದಲ್ಲದೆ ಯಾವುದೇ ಪ್ರಾಣಿ ಆಸ್ಪತ್ರೆಯ ಒಳಗೆ ಪ್ರವೇಶಿಸದಂತೆ ತಡೆಯಲು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಕುಲದೀಪ್ ಸಿಂಗ್ ಹೇಳಿದ್ದಾರೆ.
ये दुर्लभ तस्वीर उत्तर प्रदेश के मुरादाबाद ज़िला अस्पताल की है। मरीज़ बेड पर लेटा है और बग़ल में रखा उसका खाना आवारा कुत्ता खा रहा। pic.twitter.com/EhfBu5ztYT
— Bhadohi Wallah (@Mithileshdhar) October 10, 2023
ಇದನ್ನು ಓದಿ: ಮೋದಿ ಆಡಳಿತದಲ್ಲಿ ಆರ್‌ಟಿಐ ವೇಗವಾಗಿ ದುರ್ಬಲಗೊಳ್ಳುತ್ತಿದೆ: ಕಾಂಗ್ರೆಸ್


