Homeಮುಖಪುಟಮೋದಿ ಆಡಳಿತದಲ್ಲಿ ಆರ್‌ಟಿಐ ವೇಗವಾಗಿ ದುರ್ಬಲಗೊಳ್ಳುತ್ತಿದೆ: ಕಾಂಗ್ರೆಸ್‌

ಮೋದಿ ಆಡಳಿತದಲ್ಲಿ ಆರ್‌ಟಿಐ ವೇಗವಾಗಿ ದುರ್ಬಲಗೊಳ್ಳುತ್ತಿದೆ: ಕಾಂಗ್ರೆಸ್‌

- Advertisement -
- Advertisement -

ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ) ಜಾರಿಗೆ ಬಂದ 18ನೇ ವರ್ಷಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಕೇಂದ್ರ ಸರಕಾರವನ್ನು ಟೀಕಿಸಿದ್ದು, ಮೋದಿ ಸರ್ಕಾರವು ಈ ಕಾನೂನನ್ನು ದುರ್ಬಲಗೊಳಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿದೆ.

ಮಾಹಿತಿ ಹಕ್ಕು ಕಾಯಿದೆಯ ನಿಬಂಧನೆಗಳನ್ನು ದುರ್ಬಲಗೊಳಿಸುವ, ಪ್ರಧಾನಿಗಳ ಆಜ್ಞೆಯನ್ನು ಪಾಲಿಸುವವರನ್ನು ಕಮಿಷನ್‌ಗೆ ನೇಮಿಸುವ, ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ನಿರಂತರವಾಗಿ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.

ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದು, RTI ಕಾಯಿದೆಯು ಕನಿಷ್ಠ 2014ರವರೆಗೆ ಪ್ರಬಲವಾಗಿತ್ತು. ಅದರ ನಂತರ ಮೋದಿ ಸರ್ಕಾರವು ಕಾನೂನನ್ನು ದುರ್ಬಲಗೊಳಿಸಲು, ಅದರ ನಿಬಂಧನೆಗಳನ್ನು ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.

ಆರ್‌ಟಿಐಯಿಂದ ಬಹಿರಂಗವಾಗುತ್ತಿದ್ದ ವಿಚಾರಗಳು ಪ್ರಧಾನಿಯವರಿಗೆ ಅತ್ಯಂತ ಮುಜುಗರವನ್ನುಂಟುಮಾಡಿತ್ತು, ಅದು ತಿದ್ದುಪಡಿಗೆ ಪ್ರಮುಖ ಕಾರಣವಾಗಿದೆ. ಈ ಕೆಲವು ತಿದ್ದುಪಡಿಗಳನ್ನು ನಾನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇನೆ ಮತ್ತು ಆರ್‌ಟಿಐ ವೇಗವಾಗಿ ಆರ್‌ಐಪಿ/ಓಂ ಶಾಂತಿ ಸ್ಥಾನಮಾನಕ್ಕೆ ಸಾಗುತ್ತಿರುವ ಕಾರಣ ಅರ್ಜಿಯನ್ನು ಶೀಘ್ರದಲ್ಲೇ ವಿಚಾರಣೆ ಮಾಡಲಾಗುತ್ತದೆ ಎಂದು ನಾನು ಇನ್ನೂ ಆಶಿಸುತ್ತಿದ್ದೇನೆ ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

2019ರ ಜುಲೈನಲ್ಲಿ ನಡೆದ ಆರ್‌ಟಿಐ ಕಾಯ್ದೆಯ ತಿದ್ದುಪಡಿ ಕುರಿತ ತಮ್ಮ ಆಕ್ಷೇಪವನ್ನು ಉಲ್ಲೇಖಿಸಿದ ವಿಡಿಯೋವನ್ನು ಕೂಡ ಜೈರಾಮ್‌ ರಮೇಶ್‌ ಅವರು ಹಂಚಿಕೊಂಡಿದ್ದಾರೆ. ಆರ್‌ಟಿಐ ಕಾಯ್ದೆ 2005ರ ಅ.12ರಂದು ಕಾರ್ಯ ರೂಪಕ್ಕೆ ಬಂದಿತ್ತು.

ಇದನ್ನು ಓದಿ: ತೀರ್ಪಿನ ಶೀರ್ಷಿಕೆಯಲ್ಲಿ ಆರೋಪಿಯ ಜಾತಿ ನಮೂದಿಗೆ ಆಕ್ಷೇಪಿಸಿದ ಸುಪ್ರೀಂಕೋರ್ಟ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...