ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಲಸಿಕೆ ಸರಬರಾಜನ್ನು ನಿಲ್ಲಿಸಿದ ಒಡಿಶಾ ಸರ್ಕಾರ | Naanu gauri

ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಸರಬರಾಜು ಮಾಡುವುದನ್ನು ನಿಲ್ಲಿಸಲು ಒಡಿಶಾ ಸರ್ಕಾರ ನಿರ್ಧರಿಸಿದೆ. ಇದನ್ನು ತಕ್ಷಣದಿಂದ ಜಾರಿಗೆ ತರಲು ಜಿಲ್ಲಾಧಿಕಾರಿ, ಪುರಸಭೆ ಆಯುಕ್ತರು ಮತ್ತು ಸಿಡಿಎಂಒಗಳಿಗೆ ನಿರ್ದೇಶನ ನೀಡಲಾಗಿದೆ. ಒಕ್ಕೂಟ ಸರ್ಕಾರವು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ನೀಡಲು ರಾಜ್ಯಗಳಿಗೆ ಅಗತ್ಯವಾದ ಲಸಿಕೆ ಪ್ರಮಾಣವನ್ನು ಪೂರೈಸುತ್ತದೆ ಎಂದು ಪರಿಷ್ಕೃತ ಮಾರ್ಗಸೂಚಿಗಳು ಹೇಳಿದೆ.

ಒಕ್ಕೂಟ ಸರ್ಕಾರವು ಲಸಿಕೆ ಉತ್ಪಾದಿಸುವವರಿಂದ ಒಟ್ಟು ಉತ್ಪಾದನೆಯ 75% ಲಸಿಕೆಗಳನ್ನು ಪಡೆದುಕೊಳ್ಳುತ್ತದೆ. ಈ ಮೂಲಕ ರಾಜ್ಯಗಳಿಗೆ ತನ್ನ ‘ಉಚಿತ ವ್ಯಾಕ್ಸಿನೇಷನ್‌’ ಅಭಿಯಾನಗಳ ಅಡಿಯಲ್ಲಿ ಸರಬರಾಜು ಮಾಡುತ್ತದೆ. ಉಳಿದ 25% ಲಸಿಕೆಯನ್ನುಯ ಖಾಸಗಿ ಆಸ್ಪತ್ರೆಗಳು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಬಾರಬಂಕಿ ಮಸೀದಿ ಧ್ವಂಸದ ಸಾಕ್ಷ್ಯಚಿತ್ರ: ದಿ ವೈರ್‌ ಮೇಲೆ ಪ್ರಕರಣ ದಾಖಲಿಸಿದ ಯುಪಿ ಪೊಲೀಸ್‌

ಇದನ್ನೂ ಓದಿ: ‘ಆರೆಸ್ಸೆಸ್ ಅಥವಾ ಸಂವಿಧಾನ’ – ಚಿರಾಗ್‌ ಪಾಸ್ವಾನ್‌ಗೆ ಆಯ್ಕೆ ಮುಂದಿಟ್ಟ ತೇಜಸ್ವಿ ಯಾದವ್‌‌!

“ಪ್ರಸ್ತುತ ಸನ್ನಿವೇಶದಲ್ಲಿ, ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಸರಬರಾಜನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಆಸಕ್ತ ಆಸ್ಪತ್ರೆಗಳು ಉತ್ಪಾದಕರಿಂದ ನೇರವಾಗಿ ಲಸಿಕೆಗಳನ್ನು ಪಡೆಯಬಹುದು ಮತ್ತು ಆರೋಗ್ಯ ಸಚಿವಾಲಯ ನಿಗದಿಪಡಿಸಿದ ಬೆಲೆಗೆ ಅನುಗುಣವಾಗಿ ಲಸಿಕೆ ನೀಡಬಹುದು” ಎಂದು ಆರೋಗ್ಯ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

ಆರೋಗ್ಯ ಸಚಿವಾಲಯ ನಿಗದಿಪಡಿಸಿದ ಬೆಲೆಗೆ ಅನುಗುಣವಾಗಿ ವ್ಯಾಕ್ಸಿನೇಷನ್ ಅನ್ನು ಕೈಗೊಳ್ಳಿ” ಎಂದು ಆರೋಗ್ಯ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

ಈ ಮಧ್ಯೆ, ಒಡಿಶಾ ಸರ್ಕಾರವು ಗುರುವಾರದಂದು 2.82 ಲಕ್ಷ ಡೋಸ್ ಕೊರೊನಾ ಲಸಿಕೆಗಳನ್ನು ನೀಡಿದೆ. ಈ ಮೂಲಕ ರಾಜ್ಯದಲ್ಲಿ 1.09 ಕೋಟಿ ಜನರು ಲಸಿಕೆ ತೆಗೆದುಕೊಂಡಂತಾಗಿದೆ.

ಇದನ್ನೂ ಓದಿ: ಕೊರೊನಾ 2ನೇ ಅಲೆಗೆ 28 ವೈದ್ಯರು ಬಲಿ, ಇನ್ನು ಸಿಗದ ಪರಿಹಾರ

LEAVE A REPLY

Please enter your comment!
Please enter your name here