HomeUncategorizedಗಂಗೆಯ ದಡದಿಂದ ಮತ್ತೆ ಎದ್ದು ಬಂದ ಮೃತದೇಹಗಳು: ಶವಗಳ ರಕ್ಷಣೆಗೆ ಅಧಿಕಾರಿಗಳ ಪರದಾಟ

ಗಂಗೆಯ ದಡದಿಂದ ಮತ್ತೆ ಎದ್ದು ಬಂದ ಮೃತದೇಹಗಳು: ಶವಗಳ ರಕ್ಷಣೆಗೆ ಅಧಿಕಾರಿಗಳ ಪರದಾಟ

- Advertisement -
- Advertisement -

ಕಳೆದ ತಿಂಗಳು ಉತ್ತರ ಪ್ರದೇಶದ ಗಂಗಾತಟದಲ್ಲಿ ಕೋವಿಡ್ ಸೋಂಕಿತರ ಮೃತದೇಹಗಳನ್ನು ಹೂಳುತ್ತಿರುವ ದೃಶ್ಯಗಳು ದೇಶವನ್ನೇ ಬೆಚ್ಚಿ ಬೀಳಿಸಿದ್ದವು. ನೂರಾರು ಮೃತದೇಹಗಳು ಗಂಗಾ ನದಿಯಲ್ಲಿ ತೇಲಿ ಬರುತ್ತಿರುವ ದೃಶ್ಯಗಳು ದೇಶಾದ್ಯಂತ ಆಕ್ರೋಶವನ್ನು ಹುಟ್ಟು ಹಾಕಿತ್ತು. ಮೇ 14 ರಂದು ಹಿಂದಿ ಭಾಷೆಯ ಪ್ರಸಿದ್ಧ ಪತ್ರಿಕೆ ದೈನಿಕ್ ಭಾಸ್ಕರ್ ಈ ಕುರಿತು ಸುವಿಸ್ತಾರವಾದ ತನಿಖಾ ವರದಿಯೊಂದನ್ನು ಪ್ರಕಟಿಸಿ ಉತ್ತರ ಪ್ರದೇಶ ಸರ್ಕಾರ ಕೊರೋನಾ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ಬಹಿರಂಗಗೊಳಿಸಿತ್ತು. ಈಗ ಉತ್ತರ ಪ್ರದೇಶದಲ್ಲಿ ಮತ್ತೆ ಅಂತಹದ್ದೇ ಘಟನಗೆಳು ವರದಿಯಾಗುತ್ತಿವೆ.

ಮುಂಗಾರು ಮಳೆಯ ಕಾರಣದಿಂದ ಗಂಗಾ ನದಿಯಲ್ಲಿ ನೀರಿನ ಮಟ್ಟ ದಿನೇ ದಿನೇ ಏರುತ್ತಿದ್ದು ಮತ್ತಷ್ಟು ಶವಗಳು ತೇಲಿ ಬರತೊಡಗಿವೆ. ನದಿ ತಟದ ಮರಳಿನಲ್ಲಿ ಹೂತಿದ್ದ ಮೃತದೇಹಗಳೆಲ್ಲ ಒಂದೊಂದಾಗಿ ಮೇಲೆದ್ದು ಬರತೊಡಗಿದ್ದು ಕಳೆದ 15 ದಿನಗಳಲ್ಲಿ 70 ಶವಗಳು ತೇಲಿಬಂದಿವೆ ಎಂದು ಅನೇಕ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಕಳೆದ 24 ಗಂಟೆಯಲ್ಲಿ 40 ಶವಗಳನ್ನು ನದಿ ದಡದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ನಾವು ನದಿ ದಡಕ್ಕೆ ತೇಲಿ ಬರುತ್ತಿರುವ ಮೃತದೇಹಗಳನ್ನು ಗುರುತಿಸಿ ಗೌರವಯುತವಾದ ಅಂತ್ಯಕ್ರಿಯೆಯನ್ನು ಮಾಡುತ್ತಿದ್ದೇವೆ. ಎಲ್ಲಾ ಮೃತದೇಹಗಳು ಕೋವಿಡ್‌ಗೆ ಸಂಬಂಧಿಸಿದವಲ್ಲ. ಅನೇಕ ಸಮುದಾಯಗಳು ಬಹಳ ಹಿಂದಿನಿಂದಲೂ ನದಿ ತಟದಲ್ಲಿ ಮೃತದೇಹಗಳ ಅಂತ್ಯಕ್ರಿಯೆ ಮಾಡುತ್ತಿವೆ ಎಂದು ಪ್ರಯಾಗ್‌ ರಾಜ್ ನಗರ ಪಾಲಿಕೆಯ ಝೋನಲ್ ಕಮಿಷನರ್ ನೀರಜ್‌ ಕುಮಾರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಧಿಕಾರಿಗಳು ನದಿಯಲ್ಲಿ ತೇಲುತ್ತಿರುವ ಮೃತದೇಹಗಳನ್ನು ರಕ್ಷಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಕ್ಸಿಜನ್ ಪೈಪ್‌ಗಳನ್ನು ಅಳವಡಿಸಿಕೊಂಡ ಸ್ಥಿತಿಯಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ.


ಇದನ್ನೂ ಓದಿ : ಕಾನೂನು ಉಲ್ಲಂಘನೆ: ಸಚಿವ ರವಿಶಂಕರ್‌ ಪ್ರಸಾದ್ ಟ್ವಿಟರ್‌ ಅಕೌಂಟ್‌ಗೆ ಒಂದು ಗಂಟೆ ನಿರ್ಬಂಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...