Homeಕರ್ನಾಟಕನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ: ಪ್ರಿಯಾಂಕ ಗಾಂಧಿ

ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ: ಪ್ರಿಯಾಂಕ ಗಾಂಧಿ

- Advertisement -
- Advertisement -

‘ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ’ ಮತ್ತು ‘ನನ್ನ ಅಜ್ಜಿ ಆಡಳಿತದಲ್ಲಿ ದೇಶದ ಯುದ್ಧಕ್ಕಾಗಿ ತಮ್ಮ ಚಿನ್ನವನ್ನು ದಾನ ಮಾಡಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜಕ್ಕೆ ಮಹಿಳೆಯರ ಕೊಡುಗೆಯನ್ನು ಅರ್ಥಮಾಡಿಕೊಂಡರೆ ಅಂತಹ “ಅವಹೇಳನಕಾರಿ” ಹೇಳಿಕೆಗಳನ್ನು ಎಂದಿಗೂ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕ ಗಾಂಧಿ, ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳೆಯರ ಚಿನ್ನ, ಮಂಗಳಸೂತ್ರವನ್ನು ಕಿತ್ತುಕೊಳ್ಳುತ್ತದೆ ಎಂಬ ಪ್ರಧಾನಿಯ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ರೈತ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ 600 ರೈತ ಮಹಿಳೆಯರ ಮಂಗಳಸೂತ್ರಗಳ ಬಗ್ಗೆ ಮೋದಿ ಕಾಳಜಿ ತೋರುತ್ತಿಲ್ಲ. ಕೇವಲ ಮತಕ್ಕಾಗಿ ಮತ್ತು ಮಹಿಳೆಯರನ್ನು ಹೆದರಿಸಲು ಇಂತಹ ಹೇಳಿಕೆಯನ್ನು ನೀಡಲಾಗಿದೆ. ಪ್ರಧಾನಿ ನಾಚಿಕೆಪಡಬೇಕು, ಅವರಿಗೆ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಅವರ ಮಕ್ಕಳಿಗೆ ಉದ್ಯೋಗ, ವಿದ್ಯಾರ್ಥಿವೇತನ ಮತ್ತು ವ್ಯವಹಾರಗಳಲ್ಲಿ ಸಹಾಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಭಾರತದ ಅತ್ಯಂತ ಹೆಚ್ಚು ವಿದ್ಯಾವಂತ ನಗರಗಳಲ್ಲಿ ಒಂದಾದ ಬೆಂಗಳೂರು, ಚುನಾವಣಾ ಸಮಯದಲ್ಲಿ ಉತ್ತಮ ಸಂಭಾಷಣೆಗೆ ಅರ್ಹವಾಗಿದೆ. ಯಾರೂ ಮೂಲಸೌಕರ್ಯ ಅಥವಾ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ನಾವು ನಿಜವಾಗಿಯೂ ಹಿಂದೂ ಮುಸ್ಲಿಂ ವಿಷಯದ ಮೇಲೆ ಮತ್ತೊಂದು ಚುನಾವಣೆಯನ್ನು ಬಯಸುತ್ತೇವೆಯೇ? ಎಷ್ಟು ವರ್ಷಗಳ ಕಾಲ ಚುನಾವಣೆಯನ್ನು ಧರ್ಮದ ಆಧಾರದಲ್ಲಿ ನಡೆಸುತ್ತೀರಾ? ಈ ಚುನಾವಣೆಯನ್ನು ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳ ಆಧಾರದ ಮೇಲೆ ಎದುರಿಸಿ ನೋಡೋಣ. ನಿಮಗೆ ನೈತಿಕ ರಾಜಕೀಯ ಬೇಕಾ, ನಾಟಕೀಯ ರಾಜಕೀಯ ಬೇಕಾ, ಆಡಳಿತದ ರಾಜಕೀಯವೋ, ಸತ್ಯದ ರಾಜಕೀಯವೋ, ಪರೋಪಕಾರ ಬೇಕಾ, ಅಹಂಕಾರ ಬೇಕಾ ಎಂಬುದನ್ನು ನೀವೆ ನಿರ್ಧರಿಸಿ ಎಂದು ಪ್ರಿಯಾಂಕ ಗಾಂಧಿ ಕೇಳಿದ್ದಾರೆ.

ಮಣಿಪುರದಲ್ಲಿ ಒಂದು ಹೆಣ್ಣನ್ನು ಬೆತ್ತಲೆ ಮಾಡಿದಾಗ ಮೋದಿ ಎಲ್ಲಿದ್ದರು? ದೇಶದ ಬಗ್ಗೆ ಅವರಿಗೆ ಕಾಳಜಿ ಇಲ್ಲವೇ? ಮೋದಿಯವರಿಗೆ ನಾಚಿಕೆ ಆಗಬೇಕು ಎಂದು ಪ್ರಿಯಾಂಕಾ ಟೀಕಿಸಿದ್ದಾರೆ. ದೇಶದಲ್ಲಿ ಲಾಕ್‌ಡೌನ್‌ ಆದಾಗ ಬಡವರಿಗೆ ಉಟ ಇರಲಿಲ್ಲ. ಎಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡರು. ನಿರುದ್ಯೋಗ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಪ್ರಧಾನಿ ಮೋದಿಯವರ 10 ವರ್ಷಗಳ ಆಡಳಿತ ನೋಡಿದ್ದೀರಾ? ನಿಮ್ಮ ಜೀವನದಲ್ಲಿ ಬದಲಾವಣೆ ಆಗಿದೆಯಾ ಎಂದು ಪ್ರಶ್ನೆ ಮಾಡಬೇಕಿದೆ. ನಿಮ್ಮೆಲ್ಲರ ಮುಂದೆ ಸೂಪರ್ ಮ್ಯಾನ್ ರೀತಿ ಬಂದು ಅವರು ನಿಂತಿದ್ದರು ಎಂದು ವ್ಯಂಗ್ಯವಾಡಿದರು.

ಕೇಸರಿ ಪಕ್ಷವು ಕೆಲ ನಾಯಕರನ್ನು ಭ್ರಷ್ಟರೆಂದು ಕರೆದು ಅವರನ್ನು ನಂತರ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದೆ. ಅವರು ಮಾಂತ್ರಿಕವಾಗಿ ಪ್ರಾಮಾಣಿಕರಾದರು ಎಂಬುವುದು ಆಶ್ಚರ್ಯಕರವಾಗಿದೆ. ಭ್ರಷ್ಟಾಚಾರ ಆರೋಪಕ್ಕೂ ಬಿಜೆಪಿಗೂ ವಿಲಕ್ಷಣ ಸಂಬಂಧವಿದೆ. ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸಿರುವ ಮತ್ತು ಪ್ರತಿಪಕ್ಷಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಮೊದಲ ಚುನಾವಣೆ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ ಮೋದಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಆಲ್ ಐಸ್ ಆನ್ ರಫಾ’: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಂಡ ಪೋಸ್ಟ್‌ನ ಅರ್ಥವೇನು?

0
ಇಸ್ರೇಲ್‌ ರಫಾ ಮೇಲಿನ ಆಕ್ರಮಣದ ಮಧ್ಯೆ 'ಆಲ್ ಐಸ್ ಆನ್ ರಫಾ' ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸದ್ದು ಮಾಡಿದೆ. ಭಾರತೀಯ ಸೆಲೆಬ್ರಿಟಿಗಳು ಹೆಚ್ಚಾಗಿ ಈ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಟ ದುಲ್ಕರ್...