Homeಕರೋನಾ ತಲ್ಲಣಕೊರೊನಾ 2ನೇ ಅಲೆಗೆ 28 ವೈದ್ಯರು ಬಲಿ, ಇನ್ನು ಸಿಗದ ಪರಿಹಾರ

ಕೊರೊನಾ 2ನೇ ಅಲೆಗೆ 28 ವೈದ್ಯರು ಬಲಿ, ಇನ್ನು ಸಿಗದ ಪರಿಹಾರ

- Advertisement -
- Advertisement -

ಕೊರೊನಾ ಎರಡನೇ ಅಲೆಯಲ್ಲಿ ಕರ್ನಾಟಕದಾದ್ಯಂತ 28 ವೈದ್ಯರು ಕೊರೊನಾ ಸೋಂಕಿನಿಂದ ಬಲಿಯಾಗಿದ್ದಾರೆ. ಆದರೆ ಆರೋಗ್ಯ ಕಾರ್ಯಕರ್ತರಿಗಾಗಿ ಸರ್ಕಾರವು ನಿಗದಿಪಡಿಸಿದ ವಿಮಾ ಪರಿಹಾರ ಇಲ್ಲಿವರೆಗೂ ಒಂದು ಕುಟುಂಬಕ್ಕೂ ದೊರೆತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ ಹಲವು ಬಾರಿ ಮನವಿಯನ್ನು ಸಲ್ಲಿಸಿದೆ ಎನ್ನಲಾಗಿದೆ.

ಮೃತಪಟ್ಟ 28 ವೈದ್ಯರೆಲ್ಲರೂ ಕನಿಷ್ಠ ಒಂದು ಕೊರೊನಾ ಲಸಿಕೆ ಡೋಸ್ ಪಡೆದಿದ್ದರೆ, ಅವರಲ್ಲಿ ಹೆಚ್ಚಿನವರು  ಎರಡನೇ ಡೋಸ್ ಕೂಡ ಪಡೆದಿದ್ದರು ಎನ್ನಲಾಗಿದೆ. ಮೃತರಲ್ಲಿ ನಾಲ್ಕು ಮಂದಿ  ವೈದ್ಯರು ಬೆಂಗಳೂರಿನವರಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಡಾ.ಮನು ವಿ (27) ಜೂನ್ 16 ರಂದು ನಿಧನರಾಗಿದ್ದಾರೆ. ಬುರುದುಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ಕೋವಿಡ್ ರೋಗಿಗಳ ತಪಾಸಣೆ ನಡೆಸಿ, ಚಿಕಿತ್ಸೆ ನೀಡುತ್ತಿದ್ದರು. ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಜನರ ಸೇವೆಗೆ ಮುಂದಾಗಿದ್ದ ಮನು ಅವರ ಅಗಲಿಕೆ ಕುಟುಂಬಕ್ಕೆ ತುಂಬಲಾರದ ನಷ್ಟ ಎಂಬ ಸ್ನೇಹಿತರು ತಿಳಿಸಿದ್ದಾರೆ.

ಇದನ್ನೂ ಓದಿ: ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೈದ್ಯಕೀಯ ಆಮ್ಲಜನಕ ಬಳಸಿಕೊಂಡ ದೆಹಲಿ: ಸುಪ್ರೀಂ ಕೋರ್ಟ್ ಸಮಿತಿ

ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಡಾ.ಮೊಹಮ್ಮದ್ ಖಲೀಲುಲ್ಲಾ ಶಕೀಲ್, ಜೂನ್ 7 ರಂದು ನಿಧನರಾಗಿದ್ದಾರೆ. ಕೊರೊನಾ ಸೋಂಕಿತರುವ ಹಲವಾರು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದ ಅವರು, ಸೋಂಕಿಗೆ ತುತ್ತಾಗಿ ಅಸುನೀಗಿದ್ದಾರೆ. ಇಲ್ಲಿಯವರೆಗೂ ಸರ್ಕಾರದಿಂದ ಇವರ ಕುಟುಂಬಕ್ಕೆ ಯಯಾವುದೇ ಸಹಾಯವಾಗಿಲ್ಲ ಎಂದು ಡಾ.ಶಕೀಲ್ ಅವರ ಪುತ್ರ ಡಾ.ಮೊಹಮ್ಮದ್ ಅಕ್ವಿಬ್ ಶಕೀಲ್ ಹೇಳಿದ್ದಾರೆ.

ಇವರುಗಳ ಜೊತೆಗೆ, ಚಾಮರಾಜನಗರದ ಕೊಳ್ಳೇಗಾಲದಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಜಿಎನ್ ಗಣೇಶ್ ಕುಮಾರ್ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕ ಸಾಂಕ್ರಾಮಿಕ ಸೋಂಕಿತರಾಗಿ ಸಾವನ್ನಪ್ಪಿದ್ದಾರೆ.

“ಭಾರತದಲ್ಲಿ ಎರಡನೇ ಅಲೆಯಲ್ಲಿ ಒಟ್ಟು 750 ವೈದ್ಯರು ಸಾವನ್ನಪ್ಪಿದ್ದಾರೆ. ಅವರೆಲ್ಲರ ವಿವರಗಳನ್ನು ನಾವು ಸರ್ಕಾರಕ್ಕೆ ಸಲ್ಲಿಸಿದ್ದೇವೆ ” ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಡಾ. ಜೆಎ ಜೈಲಾಲ್ ತಿಳಿಸಿದ್ದಾರೆ.

’ಮಾರ್ಗಸೂಚಿಗಳ ಪ್ರಕಾರ, ಕೋವಿಡ್ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿರುವ ಆರೋಗ್ಯ ಕಾರ್ಯಕರ್ತರಿಗೆ ಪರಿಹಾರ ಸಿಗಲಿದೆ .ಈ  ಪ್ರಯೋಜನವು ಸರ್ಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರನ್ನು ಒಳಗೊಳ್ಳುತ್ತದೆ, ಆದರೆ ಖಾಸಗಿ ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡುವವರಿಗಲ್ಲ. ನಾವು ಸ್ವೀಕರಿಸಿದ ಎಲ್ಲಾ ಪ್ರಸ್ತಾಪಗಳನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ’ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದ ನಿರ್ದೇಶಕ ಡಾ. ಓಂ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.


ಇದನ್ನೂ ಓದಿ: ಅಬಕಾರಿ ಸಚಿವ ಗೋಪಾಲಯ್ಯ ವಿರುದ್ಧ ಎಸಿಬಿಯಲ್ಲಿ ದೂರು ದಾಖಲು: ವಲಸೆ ಸಚಿವರಿಗೆ ನಡುಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...