ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷದ ಪರಿಣಾಮ ವ್ಯಕ್ತಿಯೊಬ್ಬರು ಮುಸ್ಲಿಂ ಬಾಲಕನನ್ನು 26 ಬಾರಿ ತಿವಿದು ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
6 ವರ್ಷದ ಬಾಲಕನಿಗೆ 26 ಬಾರಿ ಇರಿತಕ್ಕೊಳಗಾದ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ, ಆತನ ತಾಯಿ (32) ಮೇಲೂ ಕೂಡ ಹಲ್ಲೆ ನಡೆಸಲಾಗಿದೆ, ಬದುಕುಳಿಯುವ ನಿರೀಕ್ಷೆಯಿದೆ ಎಂದು ವಿಲ್ ಕೌಂಟಿ ಶೆರಿಫ್ ಕಚೇರಿಯ ಹೇಳಿಕೆ ತಿಳಿಸಿದೆ.
71 ವರ್ಷದ ಇಲಿನಾಯ್ಸ್ ನಗರದ ವ್ಯಕ್ತಿಯ ಮೇಲೆ ಭಾನುವಾರ ದ್ವೇಷದ ಅಪರಾಧದ ಆರೋಪ ಹೊರಿಸಲಾಯಿತು. ಇಸ್ಲಾಮಿಕ್ ನಂಬಿಕೆ ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಬಾಲಕನ ಮನೆಯಲ್ಲೇ ಈ ದಾಳಿ ನಡೆದಿದ್ದು, ಎದೆ, ತಲೆ ಸೇರಿದಂತೆ ಹಲವು ಕಡೆ ಚಾಕುವಿನಿಂದ ಇರಿಯಲಾಗಿತ್ತು. ಶವ ಪರೀಕ್ಷೆಯ ಸಮಯದಲ್ಲಿ ಬಾಲಕನ ಹೊಟ್ಟೆಯಿಂದ 7 ಇಂಚಿನ ಬ್ಲೇಡ್ ಮಾದರಿಯ ಚಾಕುವನ್ನು ಹೊರ ತೆಗೆಯಲಾಗಿದೆ.
ಪೊಲೀಸರು ಆಗಮಿಸಿದಾಗ ಮಹಿಳೆಯ ಹಣೆಗೆ ಗಂಭೀರವಾಗಿ ಗಾಯವಾಗಿತ್ತು, ಪ್ರಕರಣ ದಾಖಲಿಸುವ ಮೊದಲು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇಸ್ರೇಲ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಬೆಂಬಲ ಸೂಚಿಸಿದ್ದಾರೆ. ಗಾಜಾದ ಪರಿಸ್ಥಿತಿ ತೀರಾ ಹದಗೆಟ್ಟಿದೆ, ಹಮಾಸ್ನ ಇಸ್ರೇಲ್ ಮೇಲಿನ ದಾಳಿಯ ಪ್ರತಿಯಾಗಿ ಇಸ್ರೇಲ್ ಗಾಜಾ ಮೇಲೆ ದಾಳಿ ನಡೆಸುತ್ತಿದೆ. ಗಾಜಾದಲ್ಲಿರುವ ಜನರಿಗೆ ದಕ್ಷಿಣ ಭಾಗಕ್ಕೆ ತೆರಳುವಂತೆ 3 ಗಂಟೆಗಳ ಗಡುವು ನೀಡಿತ್ತು. ಗಡುವು ಮುಕ್ತಾಯವಾಗುತ್ತಿದ್ದಂತೆ 1 ಮಿಲಿಯನ್ ಮಂದಿ ಗಾಜಾದಿಂದ ಪಲಾಯನ ಮಾಡಿದ್ದಾರೆ.
ತಾವು ವಾಯು, ಸಮುದ್ರ, ಭೂಮಿ ಮೂಲಕ ದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಕೆಯನ್ನು ನೀಡಿತ್ತು. ಈ ಕಾರಿಡಾರ್ನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿತ್ತು.
ಗಾಜಾ ನಗರ ಹಾಗೂ ಉತ್ತರ ಗಾಜಾದ ಜನರಿಗೆ ದಕ್ಷಿಣ ಭಾಗಕ್ಕೆ ತೆರಳಲು ಮುಂಚೆಯೇ ಎಚ್ಚರಿಕೆ ನೀಡಲಾಗಿದೆ ಎಂದು ಸೇನೆ ಹೇಳಿದೆ. ಗಾಜಾದಲ್ಲಿ 2.3 ಮಿಲಿಯನ್ ನಾಗರಿಕರು ಆಹಾರ, ನೀರು, ಭದ್ರತೆ ವಿಚಾರದಲ್ಲಿ ಹೋರಾಟವನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಪ್ಯಾಲೆಸ್ತೀನ್ ಜನರ ಬೆಂಬಲಕ್ಕೆ ಪ್ರಧಾನಿ ಮೋದಿ ನಿಲ್ಲಬೇಕು: ಒವೈಸಿ ಆಗ್ರಹ


