Homeಮುಖಪುಟಪ್ಯಾಲೆಸ್ತೀನ್‌ ಜನರ ಬೆಂಬಲಕ್ಕೆ ಪ್ರಧಾನಿ ಮೋದಿ ನಿಲ್ಲಬೇಕು: ಒವೈಸಿ ಆಗ್ರಹ

ಪ್ಯಾಲೆಸ್ತೀನ್‌ ಜನರ ಬೆಂಬಲಕ್ಕೆ ಪ್ರಧಾನಿ ಮೋದಿ ನಿಲ್ಲಬೇಕು: ಒವೈಸಿ ಆಗ್ರಹ

- Advertisement -
- Advertisement -

”ಪ್ಯಾಲೆಸ್ತೀನ್‌ ವಿಷಯ ಕೇವಲ ಮುಸಲ್ಮಾನರಿಗೆ ಸಂಬಂಧಿಸಿದ್ದಲ್ಲ, ಇದು ಮಾನವೀಯತೆಯ ವಿಷಯ ಹಾಗೂ ನ್ಯಾಯವನ್ನು ಬಯಸುವ ಎಲ್ಲರಿಗೂ ಇದು ಸಂಬಂಧಿಸಿದ್ದಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಪ್ಯಾಲೆಸ್ತೀನ್‌ ಜನರ ಬೆಂಬಲಕ್ಕೆ ನಿಲ್ಲಬೇಕು” ಎಂದು ಇಸ್ರೇಲ್-ಹಮಾಸ್ ಉಗ್ರರ ಸಂಘರ್ಷದ ಬಗ್ಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಮಾತನಾಡಿದ್ದಾರೆ.

ಈ ಬಗ್ಗೆ ಹೈದರಾಬಾದ್ ಸಂಸದ ಒವೈಸಿ ಮಾತನಾಡಿದ್ದು, ”ಕಳೆದ ಆರು ದಿನಗಳಲ್ಲಿ ಇಸ್ರೇಲ್ ಸರ್ಕಾರವು ಗಾಜಾ ಮೇಲೆ 6,000 ಬಾಂಬ್​ಗಳ ಮೂಲಕ ಬಾಂಬ್ ದಾಳಿ ನಡೆಸಿದೆ ಮತ್ತು ಇದರಿಂದಾಗಿ ಮಕ್ಕಳು, ಮಹಿಳೆಯರು ಸೇರಿದಂತೆ 1,500 ಕ್ಕೂ ಹೆಚ್ಚು ಪ್ಯಾಲೆಸ್ತೀನ್‌ ಜನ ಸಾವನ್ನಪ್ಪಿದ್ದಾರೆ ಹಾಗೂ ಸಾವಿರಾರು ಜನರು ಗಾಯಗೊಂಡಿದ್ದಾರೆ” ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಹೇಳಿದರು.
”ಗಾಜಾದಲ್ಲಿ ನಡೆಯುತ್ತಿರುವುದು ಜನಾಂಗೀಯ ಹತ್ಯಾಕಾಂಡವಾಗಿದೆ. ಇಸ್ರೇಲ್ ಮಾಡುತ್ತಿರುವ ಯುದ್ಧಾಪರಾಧಗಳನ್ನು ಭಾರತ ಸರ್ಕಾರ ಮತ್ತು ಇಡೀ ದೇಶ ಖಂಡಿಸಬೇಕು ಎಂದು ಅವರು ಒತ್ತಾಯಿಸಿದರು.
”ನಾನು ಪ್ಯಾಲೆಸ್ತೀನ್‌ ಪರವಾಗಿದ್ದೇನೆ. 21 ಲಕ್ಷ ಜನಸಂಖ್ಯೆ ಹೊಂದಿರುವ ಗಾಜಾದ 10 ಲಕ್ಷ ಬಡವರು ನಿರಾಶ್ರಿತರಾಗಿದ್ದಾರೆ. ಗಾಜಾದ ಎಲ್ಲರನ್ನೂ ಮುಗಿಸಬೇಕೆಂದು ಇಸ್ರೇಲ್ ಸರ್ಕಾರ ಬಯಸಿದೆ ಮತ್ತು ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ಜಗತ್ತು ಇಂದು ಮೌನವಾಗಿದೆ” ಎಂದು ಆರೋಪಿಸಿದರು.
”ಕಳೆದ 70 ವರ್ಷಗಳಿಂದ ಇಸ್ರೇಲ್ ಆಕ್ರಮಣಕಾರಿ ಪ್ರದೇಶವಾಗಿದೆ ಮತ್ತು ಪ್ಯಾಲೆಸ್ತೀನ್‌ ಆಕ್ರಮಿತ ಪ್ರದೇಶವಾಗಿದೆ. ಯಾರೇ ಹಿಂಸಾಚಾರ ನಡೆಸಿದರೂ ಅದನ್ನು ನಾವು ಖಂಡಿಸುತ್ತೇವೆ. ಇದು ಪ್ಯಾಲೆಸ್ತೀನ್‌ ಜನರ ಜನಾಂಗೀಯ ಶುದ್ಧೀಕರಣವಾಗಿದೆ. ಗಾಜಾ ಜನರ ಮೇಲೆ ಕ್ರೌರ್ಯ ನಡೆಯುತ್ತಿದೆ. ಅಮೆರಿಕ, ಬ್ರಿಟನ್, ಯುರೋಪ್ ಇಂದು ಮೂಕ ಪ್ರೇಕ್ಷಕರಾಗಿವೆ” ಎಂದು ಒವೈಸಿ ಹೇಳಿದರು.

”ಗಾಜಾದಲ್ಲಿ ಪ್ಯಾಲೆಸ್ತೀನ್‌ ಜನರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಲ್ಲಿಸಿ ಮೋದಿ ಜಿ, ಪ್ಯಾಲೆಸ್ತೀನ್‌ ಜನರೊಂದಿಗೆ ಒಗ್ಗಟ್ಟನ್ನು ತೋರಿಸಿ ಎಂದು ನಾವು ನಮ್ಮ ಪ್ರಧಾನಿಗೆ ಹೇಳಲು ಬಯಸುತ್ತೇವೆ… 21 ಲಕ್ಷ ಜನರಲ್ಲಿ 10 ಲಕ್ಷ ಜನ ನಿರಾಶ್ರಿತರಾಗಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಬ್ಬ ದೆವ್ವ, ಆತ ಯುದ್ಧ ಅಪರಾಧಿ” ಎಂದರು.

ಪ್ಯಾಲೆಸ್ತೀನ್‌ ಹೆಸರನ್ನು ತೆಗೆದುಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ನಮ್ಮ ದೇಶದ ಬಾಬಾ ಮುಖ್ಯಮಂತ್ರಿಯೊಬ್ಬರು ಹೇಳಿದ್ದಾರೆ. ಕೇಳಿ ಮುಖ್ಯಮಂತ್ರಿಗಳೇ, ನಾನು ನಮ್ಮ ತ್ರಿವರ್ಣ ಧ್ವಜದ ಜೊತೆಗೆ ಪ್ಯಾಲೆಸ್ತೀನ್‌ ಧ್ವಜ ಧರಿಸಿದ್ದೇನೆ. ನಾನು ಪ್ಯಾಲೆಸ್ತೀನ್‌ನೊಂದಿಗೆ ನಿಲ್ಲುತ್ತೇನೆ. ಪ್ಯಾಲೆಸ್ತೀನ್‌ ಸಮಸ್ಯೆ ಕೇವಲ ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಇದು ಮಾನವೀಯ ವಿಷಯ” ಎಂದು ಒವೈಸಿ ಹೇಳಿದರು.

ಇದನ್ನೂ ಓದಿ: ಇಸ್ರೇಲ್ ತನ್ನ ಆತ್ಮರಕ್ಷಣೆಯ ವ್ಯಾಪ್ತಿ ಮೀರಿ ವರ್ತಿಸುತ್ತಿದೆ: ಚೀನಾ ವಿದೇಶಾಂಗ ಸಚಿವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾತಿ, ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡಬೇಡಿ: ಬಿಜೆಪಿ, ಕಾಂಗ್ರೆಸ್‌ಗೆ ಚು.ಆಯೋಗ ಸೂಚನೆ

0
ಜಾತಿ, ಸಮುದಾಯ ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಬೇಡಿ, ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಚು.ಆಯೋಗ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಖಡಕ್‌ ಸೂಚನೆಯನ್ನು ನೀಡಿದೆ. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು...