”ಪ್ರಧಾನಿ ಮೋದಿಯವರು ಅತ್ಯುತ್ತಮ ನಟ” ಎಂದು ವ್ಯಂಗ್ಯವಾಡಿರುವ ನಟ ಪ್ರಕಾಶ್ ರಾಜ್ ಅವರ ಸಂದರ್ಶನದ ತುಣುಕೊಂದು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರ-ವಿರೋಧ ವ್ಯಕ್ತವಾಗಿದೆ.
ಪ್ರಕಾಶ್ ರಾಜ್ ಅವರು ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಿರುತ್ತಾರೆ. ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ವಿರುದ್ಧ ಮತ್ತೆ ಟೀಕಾಸ್ತ ಪ್ರಯೋಗಿಸಿದ್ದಾರೆ.
ಇತ್ತೀಚೆಗೆ ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿಯವರನ್ನು ಟೀಕಿಸಿ ಸಂಚಲನ ಮೂಡಿಸಿದ್ದಾರೆ. ಕಾರ್ಯಕ್ರಮದ ನಿರೂಪಕಿ ”ನೀವು ಮತ್ತು ನಟ ಕಮಲ್ ಹಾಸನ್ ಅತ್ಯುತ್ತಮ ನಟರು, ಆದರೆ ರಾಜಕೀಯದಲ್ಲಿ ಸೋಲುತ್ತಿರುವಿರಿ. ಹಾಗಾದರೆ ರಾಜಕೀಯದಲ್ಲಿ ನಿಮಗಿಂತ ಉತ್ತಮ ನಟರು ಇದ್ದಾರೆಯೇ?” ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರಾಜ್ ತಕ್ಷಣವೇ ಮೋದಿ ಹೆಸರನ್ನು ಹೇಳಿದ್ದಾರೆ.
”ಮೋದಿ ಇದ್ದಾರೆ. ಅವರೇ ಅತ್ಯುತ್ತಮವಾಗಿ ಉತ್ತಮ ಪ್ರದರ್ಶನ ನೀಡುವವರು, ವಸ್ತ್ರವಿನ್ಯಾಸ ವಿಭಾಗ, ಹೇರ್ ಸ್ಟೈಲ್ ವಿಭಾಗ, ಎಲ್ಲವೂ ಅವರ ಬಳಿ ಇದೆ” ಎಂದು ಪ್ರಕಾಶ್ ರಾಜ್ ಕುಟುಕಿದ್ದಾರೆ.
Mic drop moment ft. @prakashraaj sirpic.twitter.com/fRff3RkIze
— 👑Che_ಕೃಷ್ಣ🇮🇳💛❤️ (@ChekrishnaCk) November 15, 2023
ಪ್ರಕಾಶ್ ರಾಜ್ ಅವರು ನೀಡಿರುವ ಈ ಉತ್ತರದ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಮೂಡಿಸುತ್ತಿದೆ. ಹಲವಾರು ನೆಟ್ಟಿಗರು ಪ್ರಕಾಶ್ ರಾಜ್ ಸಮಯಪ್ರಜ್ಞೆ ಹಾಗೂ ದಿಟ್ಟ ನುಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಾದರೂ, ಮೋದಿ ಅಭಿಮಾನಿಗಳು ಪ್ರಕಾಶ್ ರಾಜ್ ವಿರುದ್ಧ ಮುಗಿಬಿದ್ದಿದ್ದಾರೆ.
ಇದನ್ನೂ ಓದಿ: ಕಲಬುರಗಿ: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ದಲಿತ ವ್ಯಕ್ತಿ ಸಾವು



Yes! Modi is good actor!! Under the able guidence & directions of ŔSS, SCRIPT BY BHRAHMIN SANTHS!!!