Homeಮುಖಪುಟಹೆಲ್ಮೆಟ್ ಹಾಕದಿದ್ದುದ್ದಕ್ಕೆ ಯುವಕನಿಗೆ ಕೊಡಗು ಪೊಲೀಸರಿಂದ ಯರ್ರಾಬಿರ್ರಿ ಥಳಿತ? ವಿಡಿಯೋ ವೈರಲ್.. ಇದು ನಿಜವೆ?

ಹೆಲ್ಮೆಟ್ ಹಾಕದಿದ್ದುದ್ದಕ್ಕೆ ಯುವಕನಿಗೆ ಕೊಡಗು ಪೊಲೀಸರಿಂದ ಯರ್ರಾಬಿರ್ರಿ ಥಳಿತ? ವಿಡಿಯೋ ವೈರಲ್.. ಇದು ನಿಜವೆ?

- Advertisement -
- Advertisement -

ನೀವು ಹೆಲ್ಮೆಟ್ ಹಾಕದಿದ್ದರೆ, ಕೊಲ್ಲುವ ಹಕ್ಕನ್ನು ಈ ಪೊಲೀಸರಿಗೆ ಯಾರು ನೀಡಿದರು? ಎಂಬ ಹೆಸರಿನಲ್ಲಿ ಯುವಕನೊಬ್ಬನಿಗೆ ಇಬ್ಬರು ಪೊಲೀಸರು ಲಾಠಿಯಿಂದ ಹೊಡೆಯುವ 58 ಸೆಕೆಂಡ್ ಗಳ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದೆ.

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದಲ್ಲದೇ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಹುಡುಗನಿಗೆ ಪೊಲೀಸರು ಮನಸೋ ಇಚ್ಛೆ ತಳಿಸಿದ್ದಾರೆ ಎಂದು ತಿಳಿದು ಸಾವಿರಾರು ಜನ ಈ ಪೋಸ್ಟ್ ಅನ್ನು ಷೇರ್ ಮಾಡಿದ್ದಾರೆ.

ಮೊದಲಿಗೆ ಇದು ಜಯ್ ಭಾರತ್ ಎನ್ನುವ ಪೇಜ್ ನಲ್ಲಿ ಷೇರ್ ಆಗಿದ್ದು 70ಸಾವಿರಕ್ಕೂ ಹೆಚ್ಚು ಜನ ಇದನ್ನು ನೋಡಿದ್ದಲ್ಲದೇ 3 ಸಾವಿರ ಜನ ಇದನ್ನು ಷೇರ್ ಮಾಡಿದ್ದಾರೆ. ಬೇರೆ ಬೇರೆ ಪೇಜ್ ಗಳಲ್ಲಿಯೂ ಈ ವಿಡಿಯೋ ಷೇರ್ ಆಗಿದೆ.

ಆದರೆ ಪ್ರಖ್ಯಾತ ಫ್ಯಾಕ್ಟ್ ಚೆಕ್ ತಾಣ ಆಲ್ಟ್ ನ್ಯೂಸ್ ಇದನ್ನು ಈ ಫೋಟೊವನ್ನು ಗೂಗಲ್ ರಿವರ್ಸ್ ಸರ್ಚ್ ನಲ್ಲಿ ಹುಡುಕಿದಾಗ ಈ ಸುದ್ದಿ ಸುಳ್ಳು ಎಂದು ಗೊತ್ತಾಗಿದೆ. ಇದು ಹೆಲ್ಮೆಟ್ ಪ್ರಕರಣವಲ್ಲ ಬದಲಿಗೆ ಕೊಡಗಿನಲ್ಲಿ ಎರಡು ತಿಂಗಳ ಹಿಂದೆ ಹುಡುಗಿಯೊಬ್ಬಳನ್ನು ಚುಡಾಯಿಸಿದ ಕಾರಣಕ್ಕಾಗಿ ಪೊಲೀಸರು ಯುವಕನಿಗೆ ಥಳಿಸಿದ ವಿಡಿಯೋ ಆಗಿದೆ ಎಂದು ತಿಳಿದುಬಂದಿದೆ.

ಕೇರಳದ ಯುವಕರು ಪ್ರತಿನಿತ್ಯ ವಿರಾಜಪೇಟೆ ಸುತ್ತಾ ಕಾಲೇಜಿಗೆ ಬರುತ್ತಿದ್ದ ಹೆಣ್ಣು ಮಕ್ಕಳನ್ನು ರೇಗಿಸುತ್ತಿದ್ದರು. ಒಂದು ದಿನ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಆಗ ಪೊಲೀಸರು ಹೊಡೆದಿರುವ ವಿಡಯೋ ಈಗ ಮತ್ತೊಮ್ಮೆ ಹೆಲ್ಮೆಟ್ ಹೆಸರಿನಲ್ಲಿ ವೈರಲ್ ಆಗಿದೆ ಅಷ್ಟೇ..

ಕೃಪೆ: ಆಲ್ಟ್ ನ್ಯೂಸ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...