Homeಮುಖಪುಟರಾಜಸ್ಥಾನ: ಗೆದ್ದ ಮರುದಿನವೇ ಮಾಂಸದಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ ಬಿಜೆಪಿ ಶಾಸಕ

ರಾಜಸ್ಥಾನ: ಗೆದ್ದ ಮರುದಿನವೇ ಮಾಂಸದಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ ಬಿಜೆಪಿ ಶಾಸಕ

- Advertisement -
- Advertisement -

ರಾಜಸ್ಥಾನದಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಆಯ್ಕೆಯಾದ ಮರು ದಿನವೇ ಶಾಸಕ ಬಲ್ಮುಕುಂದ್ ಆಚಾರ್ಯ  ಕ್ಷೇತ್ರದಾದ್ಯಂತ ಮಾಂಸಾಹಾರ ಮಾರಾಟ ಮಾಡುವ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದು, ಈ ಕುರಿತು ವಿಡಿಯೋ ವೈರಲ್‌ ಆಗಿದೆ.

ಜೈಪುರದ ಹಥೋಜ್ ಧಾಮ್‌ನ ಧರ್ಮಗುರು, ಸ್ವಯಂಘೋಷಿತ ದೇವಮಾನವ ಬಲ್ಮುಕುಂದ್ ಆಚಾರ್ಯ ಹವಾ ಮಹಲ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆಚಾರ್ಯ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಸೋಮವಾರ ಮಾಂಸಾಹಾರ ಮಾರಾಟ ಮಾಡುವ ಅಂಗಡಿಗಳ ಬಳಿ ತೆರಳಿ ಮುಚ್ಚುವಂತೆ ಆದೇಶಿಸಿದ್ದಾರೆ. ಅವರು ರೋಗಗಳನ್ನು ಹರಡುತ್ತಿದ್ದಾರೆ ಎಂದು ಆಚಾರ್ಯ ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ಮಾಂಸ ಮಾಡುವವರು ಹೆಚ್ಚಾಗಿ ಮುಸ್ಲಿಮ್ ಸಮುದಾಯಕ್ಕೆ ಸೇರಿದವರು ಎಂದು ಟೆಲಿಗ್ರಾಫ್ ವರದಿ ಮಾಡಿದೆ.

ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದ್ದು, ಮಂಗಳವಾರ ಆಚಾರ್ಯ ತನ್ನ ದುರ್ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ. ಹೊಗೆ ಮತ್ತು ದುರ್ವಾಸನೆಯು ಬರುತ್ತಿತ್ತು. ನಾನು ಕೇವಲ ಅಧಿಕಾರಿಗಳಿಗೆ ವಿನಂತಿಸಿದೆ. ನಾನು ಜೋರಾಗಿ ಮಾತನಾಡಿದ್ದೇನೆ ಎಂದು ಅವರು ಹೇಳುತ್ತಾರೆ. ನನಗೆ ಗಂಟಲು ನೋವು ಇದೆ. ಅದಕ್ಕಾಗಿಯೇ ನಾನು ಆ ರೀತಿ ಮಾತನಾಡಿದೆ ಎಂದು ಆಚಾರ್ಯ ಸಮಜಾಯಿಸಿ ನೀಡಿದ್ದಾರೆ.

ಯಾರಿಗಾದರೂ ತಮ್ಮ ನಡೆಯು ಕೆಟ್ಟದಾಗಿ ತೋರಿದರೆ, ನಾನು ಕ್ಷಮೆಯಾಚಿಸುತ್ತೇನೆ. ಇದು ಯಾವುದೆ ನಿರ್ದಿಷ್ಟ ವರ್ಗದ ವಿರುದ್ಧ ಅಲ್ಲ. ನಾನು ಗೌರವಾನ್ವಿತ ಪ್ರಧಾನಿ ಮೋದಿಜಿಯವರ ದೂರದೃಷ್ಟಿಯ ಪ್ರಕಾರ ಕೆಲಸ ಮಾಡುತ್ತಿದ್ದೇನೆ. ಎಲ್ಲರ ಬೆಂಬಲ, ವಿಶ್ವಾಸ ಮತ್ತು ಎಲ್ಲರ ಸಾಮೂಹಿಕ ಅಭಿವೃದ್ಧಿಯನ್ನು ನಾವು ಬಯಸುತ್ತೇವೆ ಎಂದು ಆಚಾರ್ಯ ಹೇಳಿದ್ದಾರೆ.

ಆಚಾರ್ಯ ಮತ್ತು ಅವರ ಬೆಂಬಲಿಗರು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಿದ ನಂತರ ಕೋಳಿ ಮಾರಾಟಗಾರರು ಸೋಮವಾರ ತಮ್ಮ ಅಂಗಡಿಗಳನ್ನು ಮುಚ್ಚುತ್ತಿರುವುದು ವೈರಲ್‌ ವಿಡಿಯೋದಲ್ಲಿ ಕಂಡು ಬಂದಿದೆ. ಶಾಸಕ ಆಚಾರ್ಯ ಅಧಿಕಾರಿಯೋರ್ವರ ಜೊತೆ ಪ್ರಶ್ನಿಸುತ್ತಾ, ನಾನ್ ವೆಜ್‌ನ್ನು ರಸ್ತೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಬಹುದೇ? ಹೌದು ಅಥವಾ ಇಲ್ಲ ಎಂದು ಉತ್ತರಿಸಿ. ನೀವು ಇದನ್ನು ಬೆಂಬಲಿಸುತ್ತೀರಾ? ಕೂಡಲೇ ರಸ್ತೆ ಬದಿಯ ಎಲ್ಲ ಮಾಂಸಾಹಾರಿ ಅಂಗಡಿಗಳನ್ನು ಮುಚ್ಚಬೇಕು. ಸಂಜೆ ಒಳಗಡೆ ವರದಿಯನ್ನು ನೀವು ನೀಡಬೇಕು. ಅಧಿಕಾರಿ ಯಾರಾದರೂ ನಾನು ಹೆದರುವುದಿಲ್ಲ ಎಂದು ಹೇಳುವುದು ಮತ್ತು  ಬೆಂಬಲಿಗರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ಈ ಕುರಿತು ಹೇಳಿಕೆಯನ್ನು ನೀಡಿದ್ದು, ಬೀದಿ ಮಾರಾಟಗಾರರ ಕಾಯಿದೆಯಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪಟ್ಟಣ ಮಾರಾಟ ಸಮಿತಿ ರಚಿಸಿ ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ ಒದಗಿಸುವ ನಿಯಮವಿದೆ. ಇದುವರೆಗೂ ಪಟ್ಟಣ ಮಾರಾಟ ಸಮಿತಿಯು ಮಾರಾಟಗಾರರಿಗೆ ರಕ್ಷಣೆ ನೀಡಿಲ್ಲ. ಮಾರಾಟಗಾರರಿಗೆ ಪರವಾನಗಿ ನೀಡಲಾಗಿಲ್ಲ ಮತ್ತು ಮಾರಾಟ ವಲಯಗಳನ್ನು ಗುರುತಿಸಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೊಸದಾಗಿ ಚುನಾಯಿತ ಶಾಸಕರೊಬ್ಬರು ಕಾನೂನನ್ನು ಕೈಗೆತ್ತಿಕೊಂಡು ಮಾಂಸದ ಅಂಗಡಿಗಳನ್ನು ಮುಚ್ಚಿಸುತ್ತಿರುವುದು ಮತ್ತು ಮಾಂಸಾಹಾರಿ ಬೀದಿ ಬದಿ ವ್ಯಾಪಾರಿಗಳಿಗೆ ಬೆದರಿಕೆ ಹಾಕುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದೆ.

ಇದನ್ನು ಓದಿ: ಹುತಾತ್ಮ ಕ್ಯಾ.ಪ್ರಾಂಜಲ್ ಕುರಿತ ಸಿಎಂ ಹೇಳಿಕೆ ತಿರುಚಿದ ತೇಜಸ್ವಿ ಸೂರ್ಯ: ಕ್ಷಮೆಯಾಚಿಸುವಂತೆ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read