ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರನ್ನು ಹೈದರಾಬಾದ್‌ನ ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ (ಡಿ.7) ರಾತ್ರಿ ಎರ್ರವಲ್ಲಿಯಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಕೆಸಿಆರ್ ಕುಸಿದು ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
Former Telangana CM and BRS chief KCR injured and admitted to Yashoda Hospitals. He fell down in his farmhouse in Erravalli last night. More details awaited: Sources
(file photo) pic.twitter.com/tmQun8MMAs
— ANI (@ANI) December 8, 2023
ವೈದ್ಯರ ತಂಡ ಕೆಸಿಆರ್ ಅವರನ್ನು ತಪಾಸಣೆಗೆ ಒಳಪಡಿಸಿದೆ. ಅವರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.
“ಬಿಆರ್‌ಎಸ್ ಮುಖ್ಯಸ್ಥ ಕೆಸಿಆರ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ತಜ್ಞರ ಆರೈಕೆಯಲ್ಲಿದ್ದಾರೆ. ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ. ನಿಮ್ಮೆಲ್ಲರ ಬೆಂಬಲ ಮತ್ತು ಹಾರೈಕೆಗೆ ಕೃತಜ್ಞತೆಗಳು” ಎಂದು ಕೆಸಿಆರ್ ಪುತ್ರಿ, ಎಂಎಲ್‌ಸಿ ಕವಿತಾ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
BRS supremo KCR Garu sustained a minor injury and is currently under expert care in the hospital. With the support and well-wishes pouring in, Dad will be absolutely fine soon.
Grateful for all the love 🙏🏼— Kavitha Kalvakuntla (@RaoKavitha) December 8, 2023
ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಬಿಆರ್‌ಎಸ್ ಪಕ್ಷ ಸೋಲನುಭವಿಸಿದೆ. ತೆಲಂಗಾಣ ಪ್ರತ್ಯೇಖ ರಾಜ್ಯ ಸ್ಥಾಪನೆಯಾದ ಬಳಿಕ ಕಳೆದ 10 ವರ್ಷಗಳಿಂದ ಕೆಸಿಆರ್ ತೆಲಂಗಾಣದ ಸಿಎಂ ಆಗಿದ್ದರು.
ಇದನ್ನೂ ಓದಿ : ತೆಲಂಗಾಣ: ಮೊದಲ ದಿನವೇ 6 ಗ್ಯಾರಂಟಿಗಳಿಗೆ ಅಂಕಿತ ಹಾಕಿದ ರೇವಂತ್ ರೆಡ್ಡಿ, ವಿಶೇಷ ಚೇತನ ಮಹಿಳೆಗೆ ಉದ್ಯೋಗ


