ಕಳೆದ ಅಕ್ಟೋಬರ್ ತಿಂಗಳಲ್ಲಿ ಇಂಡಿಯಾ ಒಕ್ಕೂಟದ ಹಲವು ಪಕ್ಷಗಳ ನಾಯಕರ ಅ್ಯಪಲ್ ಐಫೋನ್ಗೆ ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್ ಸಾಧ್ಯತೆಯ ಬಗ್ಗೆ ಎಚ್ಚರಿಕೆಯ ಸಂದೇಶವೊಂದು ಬಂದ ಬಗ್ಗೆ ವರದಿಯಾಗಿತ್ತು. ಕೆಲ ನಾಯಕರು ತಮಗೆ ಬಂದ ಎಚ್ಚರಿಕೆ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಪ್ರಕರಣಕ್ಕೆ ಈಗ ಮಹತ್ವದ ತಿರುವೊಂದು ಸಿಕ್ಕಿದೆ.
ಕೇಂದ್ರ ಸರ್ಕಾರದ ಅಧಿಕಾರಿಗಳು ಅ್ಯಪಲ್ ಪ್ರತಿನಿಧಿಗಳನ್ನು ಕರೆಸಿಕೊಂಡು, ಈ ಹಿಂದೆ ಪ್ರತಿಪಕ್ಷ ನಾಯಕರಿಗೆ ಕಳುಹಿಸಿದ್ದ ಎಚ್ಚರಿಕೆಯ ಸಂದೇಶದ ಕುರಿತು ಸಾರ್ವಜನಿಕರಿಗೆ ಬೇರೆ ಏನಾದರೂ ಉತ್ತರ(ಸಾರ್ವಜನಿಕರ ದಾರಿ ತಪ್ಪಿಸುವ) ನೀಡುವಂತೆ ಒತ್ತಾಯಿಸಿದ್ದಾರೆ ಎಂದು ವಾಶಿಂಗ್ಟನ್ ಪೋಸ್ಟ್ ವರದಿ ಉಲ್ಲೇಖಿಸಿ ಸ್ವತಂತ್ರ ಸುದ್ದಿ ಮಾಧ್ಯಮ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
Pegasus installed on Indian journalist’s phone while he was probing #Adani issue.
TNM has learnt that journalist Anand Mangnale got an alert from ZecOps, an app that alerts when there is a security threat using advanced digital forensics.#Pegasus https://t.co/Sy9HPYOjdE
— TheNewsMinute (@thenewsminute) December 28, 2023
ತಮ್ಮ ಮೊಬೈಲ್ಗೆ ಸರ್ಕಾರಿ ಪ್ರಯೋಜಿತ ಹ್ಯಾಕಿಂಗ್ ಸಾಧ್ಯತೆಯ ಕುರಿತು ಸಂದೇಶ ಬಂದಿದ್ದ ಬಗ್ಗೆ ಪ್ರತಿಪಕ್ಷ ನಾಯಕರು ಅ್ಯಪಲ್ ಕಂಪನಿಯನ್ನು ಪ್ರಶ್ನಿಸಿದ್ದರು. ಆಗ, ಅದು ಸರ್ಕಾರದ ಮೂಲಗಳು ನಿಮ್ಮ ಮೇಲೆ ಕಣ್ಗಾವಲಿಡಲು ಫೋನ್ ಹ್ಯಾಕ್ ಮಾಡುವ ಪ್ರಯತ್ನ ನಡೆಸಿದೆ ಎಂದು ಹೇಳಿತ್ತು. ಈ ಹೇಳಿಕೆಯನ್ನು ಬದಲಾಯಿಸಿ, ಸಾರ್ವಜನಿಕರಿಗೆ ಬೇರೆ ಏನಾದರೂ ದಾರಿ ತಪ್ಪಿಸುವ ವಿಶ್ಲೇಷಣೆ ನೀಡುವಂತೆ ಸರ್ಕಾರದ ಅಧಿಕಾರಿಗಳು ಕಂಪನಿಯ ಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ ಎಂದು ವರದಿ ಹೇಳಿದೆ.
ಅಕ್ಟೋಬರ್ 31, 2023ರಂದು ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಕೆಲ ನಾಯಕರು ಮತ್ತು ಸ್ವತಂತ್ರ ಪತ್ರಕರ್ತರಿಗೆ ಅ್ಯಪಲ್ ಎಚ್ಚರಿಕೆಯ ಸಂದೇಶ ಕಳುಹಿಸಿತ್ತು. “ನಿಮ್ಮ ಅ್ಯಪಲ್ ಐಡಿಗೆ ಹೊಂದಿಸಿರುವ ಐಫೋನ್ ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್ಗೆ ಗುರಿಯಾಗಿದೆ ಎಂದು ಅ್ಯಪಲ್ ಸಂದೇಶ ಎಚ್ಚರಿಸಿತ್ತು. ಜನ ಪ್ರತಿನಿಧಿಗಳು ಸ್ಕ್ರೀನ್ ಶಾಟ್ ಹಂಚಿಕೊಂಡಾಗ, ” ನಾವು ಹ್ಯಾಕಿಂಗ್ ಪ್ರಯತ್ನ ಮಾಡಿದ್ದಾರೆ ಎಂದು ಯಾರನ್ನೂ ಪ್ರತ್ಯೇಕವಾಗಿ ಉಲ್ಲೇಖಿಸುತ್ತಿಲ್ಲ. ಆದರೆ, ಈ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಸರ್ಕಾರಿ ಏಜೆನ್ಸಿಗಳಿಗೆ ಮಾತ್ರ ಲಭ್ಯವಿದೆ” ಎಂದು ಅ್ಯಪಲ್ ಹೇಳಿತ್ತು.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಬಿಆರ್ಎಸ್ ನಾಯಕರಾದ ಕೆಟಿ ರಾಮರಾವ್ ಮತ್ತು ಕವಿತಾ ಕವ್ಲಕುಂಟಲ, ಕಾಂಗ್ರೆಸ್ನ ಡೇಟಾ ಅನಾಲಿಟಿಕ್ಸ್ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ, ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಮಾಡುವ ಯೋಜನೆಯ (OCCRP)ಪತ್ರಕರ್ತ ಆನಂದ್ ಮಂಗ್ನಾಲೆ, ದಿ ವೈರ್ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರ ಮೊಬೈಲ್ ಫೋನ್ಗಳು ಎಚ್ಚರಿಕೆಯ ಸಂದೇಶಗಳನ್ನು ಸ್ವೀಕರಿಸಿತ್ತು.
ಆಮ್ನೆಸ್ಟಿ ಇಂಟರ್ನ್ಯಾಶನಲ್ನ ಸೆಕ್ಯುರಿಟಿ ಲ್ಯಾಬ್ನ ಫೋರೆನ್ಸಿಕ್ ತನಿಖೆಗಳು-2023 ರಲ್ಲಿ ಪತ್ರಕರ್ತರಾದ ಸಿದ್ಧಾರ್ಥ್ ಮತ್ತು ಆನಂದ್ ಅವರ ಫೋನ್ಗಳಲ್ಲಿ ಪೆಗಾಸಸ್ ಸ್ಥಾಪಿಸಲಾಗಿತ್ತು ಎಂದು ದೃಢಪಡಿಸಿದೆ ಎಂದು ನ್ಯೂಸ್ ಮಿನಿಟ್ ವರದಿ ಹೇಳಿದೆ.
ಆನಂದ್ ಮತ್ತು ರವಿ ಅವರು ಅದಾನಿ ಗ್ರೂಪ್ ಒಳಗೊಂಡಿರುವ ಕಡಲಾಚೆಯ ಅಕ್ರಮ ಹಣ ವರ್ಗಾವಣೆ ಅವ್ಯವಹಾರವನ್ನು ತಾಜಾ ಪುರಾವೆಗಳೊಂದಿಗೆ ಬಯಲಿಗೆಳೆದ ವರದಿಗಾಗಿ ಕೆಲಸ ಮಾಡಿದ್ದರು. ಆಗಸ್ಟ್ 22 ರಂದು ಇಬ್ಬರು ಪತ್ರಕರ್ತರು ತಮ್ಮ ಸಂಶೋಧನಾ ವರದಿಗೆ ಪೂರಕ ಪ್ರತಿಕ್ರಿಯೆ ಕೋರಿ ಅದಾನಿ ಕಂಪನಿಗೆ ಪತ್ರ ಬರೆದಿದ್ದರು. ಇದಾಗಿ 24 ಗಂಟೆಯಲ್ಲಿ ಪತ್ರಕರ್ತ ಆನಂದ್ ಅವರ ಫೋನ್ಗೆ ಪೆಗಾಸಸ್ ದಾಳಿಯಾಗಿದೆ ಎಂದು ಆಮ್ನೆಸ್ಟಿ ತನಿಖೆಯಿಂದ ತಿಳಿದು ಬಂದಿರುವುದಾಗಿ ವರದಿ ತಿಳಿಸಿದೆ.
ಈ ಹಿಂದೆ ಇಸ್ರೇಲ್ ಮೂಲದ ಸಂಸ್ಥೆ ಎನ್ಎಸ್ಒ ತಮ್ಮ ಕಣ್ಗಾವಲು ಸಾಫ್ಟ್ವೇರ್ ಪೆಗಾಸಸ್ ಅನ್ನು
ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುವುದಾಗಿ ಸುಪ್ರೀಂ ಕೋರ್ಟ್ಗೆ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ZecOps ಎಂಬ ಅಪ್ಲಿಕೇಶನ್ನಿಂದ ಆನಂದ್ ಅವರ ಮೊಬೈಲ್ಗೆ ಎಚ್ಚರಿಕೆ ಸಂದೇಶ ಬಂದಿತ್ತು. ಇದು ಭದ್ರತಾ ಬೆದರಿಕೆ ಇರುವಾಗ ಮತ್ತು ಸುಧಾರಿತ ಡಿಜಿಟಲ್ ಫೋರೆನ್ಸಿಕ್ಸ್ ಅನ್ನು ಬಳಸುವಾಗ ಎಚ್ಚರಿಕೆ ನೀಡುವ ಅಪ್ಲಿಕೇಶನ್ ಆಗಿದೆ. ಆಗಸ್ಟ್ 23 ರಂದು ಎಚ್ಚರಿಕೆ ಸಂದೇಶ ಬರಲು ಪ್ರಾರಂಭಿಸಿದ್ದವು. ನಂತರ ಆನಂದ್ ಅವರು ತಮ್ಮ ಫೋನ್ ಅನ್ನು OCCRP ಮತ್ತು ಆಮ್ನೆಸ್ಟಿಗೆ ಫೊರೆನ್ಸಿಕ್ ವಿಶ್ಲೇಷಣೆಗೆ ಕೊಟ್ಟಿದ್ದರು. ಎಚ್ಚರಿಕೆ ಸಂದೇಶ ಬಂದಾಗ ಅವರ ಫೋನ್ ಸಂಪೂರ್ಣವಾಗಿ ಶೂನ್ಯ ಕ್ಲಿಕ್ಗೆ (ಜಾಮ್ ಆಗೋದು) ಒಳಗಾಗಿತ್ತು ಎಂದ ದಿ ನ್ಯೂಸ್ ಮಿನಿಟ್ ಹೇಳಿದೆ.
ಇದನ್ನೂ ಓದಿ : ‘ಸರ್ನಾ ಪ್ರತ್ಯೇಕ ಧರ್ಮ’ ಮಾನ್ಯತೆಗೆ ಒತ್ತಾಯಿಸಿ ಡಿ.30ರಂದು ಭಾರತ್ ಬಂದ್ಗೆ ಕರೆ


