ಕೇಂದ್ರ, ಅಸ್ಸಾಂ ಸರ್ಕಾರ ಮತ್ತು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಂ (ಉಲ್ಫಾ) ನಡುವಿನ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಇಂದು (ಶುಕ್ರವಾರ) ದೆಹಲಿಯಲ್ಲಿ ಸಹಿ ಹಾಕಲಾಗಿದೆ. ಈ ಮೂಲಕ ದಶಕಗಳ ಸಂಘರ್ಷ ಕೊನೆಗೊಳಿಸುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.
Delhi: United Liberation Front of Assam (ULFA)'s pro-talks faction signed a tripartite Memorandum of Settlement pact with the Centre and the Assam government in the presence of Union Home Minister Amit Shah, Assam CM Himanta Biswa Sarma. pic.twitter.com/ITBV6qBjPQ
— ANI (@ANI) December 29, 2023
ಶಾಂತಿ ಒಪ್ಪಂದದ ಮೂಲಕ ಹಿಂಸೆಯಿಂದ ದೂರ ಸರಿಯಲು ಅರಬಿಂದಾ ರಾಜ್‌ಖೋವಾ ನೇತೃತ್ವದ ಉಲ್ಫಾ ಒಪ್ಪಿಕೊಂಡಿದೆ. ಆದರೆ, ಇದೇ ಸಂಘಟನೆಯ ಪರೇಶ್ ಬರುವಾ ನೇತೃತ್ವದ ಕಟ್ಟರ್ ಬಣ ಶಾಂತಿ ಒಪ್ಪಂದಕ್ಕೆ ಒಪ್ಪಿಲ್ಲ ಎಂದು ತಿಳಿದು ಬಂದಿದೆ.
ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಂ ಅನ್ನು 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ 1990ರಲ್ಲಿ ಭಾರತದಲ್ಲಿ ನಿಷೇಧಿಸಲಾಗಿತ್ತು. ಈ ಸಂಘಟನೆ 1979 ರಿಂದ ಸಶಸ್ತ್ರ ಹೋರಾಟದ ಮೂಲಕ ಸ್ಥಳೀಯ ಅಸ್ಸಾಮಿ ಜನರಿಗೆ ಅಸ್ಸಾಂ ಸಾರ್ವಭೌಮ ರಾಷ್ಟ್ರವನ್ನು ರಚಿಸಲು ಒತ್ತಾಯಿಸುತ್ತಿತ್ತು.
ಶಾಂತಿ ಒಪ್ಪಂದವು ಅಕ್ರಮ ವಲಸೆ, ಸ್ಥಳೀಯ ಸಮುದಾಯಗಳಿಗೆ ಭೂಮಿಯ ಹಕ್ಕುಗಳು ಮತ್ತು ಅಸ್ಸಾಂನ ಅಭಿವೃದ್ಧಿಗೆ ಹಣಕಾಸಿನ ಪ್ಯಾಕೇಜ್‌ನಂತಹ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಶಾಂತಿ ಸಂಧಾನದ ಪರವಾಗಿದ್ದ ಉಲ್ಫಾ ಸಂಘಟನೆಯ ಹಲವಾರು ನಾಯಕರು ಉಪಸ್ಥಿತರಿದ್ದರು.
ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಂಬಂಧ 2011ರಿಂದ ಕೇಂದ್ರ ಮತ್ತು ಅಸ್ಸಾಂ ಸರ್ಕಾರಗಳು ಉಲ್ಫಾ ನಾಯಕರ ಜೊತೆ ಮಾತುಕತೆ ನಡೆಸುತ್ತಿತ್ತು. ಈ ಮಾತುಕತೆಯ ಫಲವಾಗಿ ಇಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಸರ್ಕಾರ ಉಲ್ಫಾಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ” ಎಂದು ತಿಳಿಸಿದ್ದಾರೆ.
ULFA the oldest insurgent group of Assam agreed to abjure the path of violence. Speaking on the signing of a memorandum of settlement with ULFA.
https://t.co/6H1DIHmmHy— Amit Shah (@AmitShah) December 29, 2023
ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಮಾತನಾಡಿ, ಉಲ್ಫಾದ ಶಾಂತಿ ಚರ್ಚೆ ವಿರೋಧಿ ಬಣವನ್ನು ಮುನ್ನಡೆಸುತ್ತಿರುವ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ, ಸಂಘಟನೆಯ ಉಳಿದ ಎಲ್ಲಾ ಸಂಸ್ಥಾಪಕ ಸದಸ್ಯರು ಇಂದು ಶಾಂತಿ ಒಪ್ಪಂದದ ವೇಳೆ ಹಾಜರಿದ್ದರು. 1993ರಲ್ಲಿ ಆಗಿನ ಪ್ರಧಾನಿ ಪಿವಿ ನರಸಿಂಹರಾವ್ ಶಾಂತಿ ಒಪ್ಪಂದದ ಚರ್ಚೆಗೆ ಮುನ್ನುಡಿ ಬರೆದಿದ್ದರು. ಇಂದು ಬಂದಿದ್ದ ಜನರು ಅಂದೂ ಕೂಡ ದೆಹಲಿಗೆ ಬಂದಿದ್ದರು. ಅಂದು ಆರಂಭಿಕ ಚರ್ಚೆ ನಡೆದಿತ್ತು. ಆದರೆ, ತಾರ್ಕಿಕ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೂ ಇಂದು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಉಲ್ಫಾವನ್ನು ವಿಸರ್ಜಿಸಲಾಗುವುದು ಎಂದು ಅದರ ನಾಯಕರು ನಮಗೆ ಭರವಸೆ ನೀಡಿದ್ದಾರೆ. ಅವರು ಈಗ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಆ ಶಿಬಿರಗಳನ್ನು ತೊರೆದು, ತಮ್ಮ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಲಿದ್ದಾರೆ. ಒಟ್ಟು 726 ಉಲ್ಫಾ ಕಾರ್ಯಕರ್ತರು ಮುಖ್ಯವಾಹಿನಿಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
#WATCH | On United Liberation Front of Assam (ULFA) signing a tripartite Memorandum of Settlement with the Centre and the Assam government, Assam CM Himanta Biswa Sarma says, "Except for one individual who is now leading the anti-talk faction of ULFA. All the founding members of… pic.twitter.com/k88m2MK6h7
— ANI (@ANI) December 29, 2023
ಇದನ್ನೂ ಓದಿ : ಗುಜ್ಜರ್-ಬಕರ್ವಾಲ್- ಸೇನೆ ಸಂಬಂಧವೇನು? ಪೂಂಛ್ ಘಟನೆಗೆ ಸರಕಾರ ತ್ವರಿತವಾಗಿ ಸ್ಪಂದಿಸಿದ್ದೇಕೆ?


