Homeಮುಖಪುಟಪಿಂಚಣಿ ಅರ್ಹತಾ ವಯಸ್ಸು 50ಕ್ಕೆ ಇಳಿಕೆ, ಶೇ.75% ಉದ್ಯೋಗ ಸ್ಥಳೀಯರಿಗೆ ಮೀಸಲು: ಹೇಮಂತ್ ಸುರೇನ್

ಪಿಂಚಣಿ ಅರ್ಹತಾ ವಯಸ್ಸು 50ಕ್ಕೆ ಇಳಿಕೆ, ಶೇ.75% ಉದ್ಯೋಗ ಸ್ಥಳೀಯರಿಗೆ ಮೀಸಲು: ಹೇಮಂತ್ ಸುರೇನ್

- Advertisement -
- Advertisement -

ತಮ್ಮ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದಂದು ಎರಡು ಪ್ರಮುಖ ಘೋಷಣೆಗಳನ್ನು ಮಾಡಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ‘ವೃದ್ಧಾಪ್ಯ ಪಿಂಚಣಿಗೆ ಅರ್ಹತಾ ವಯಸ್ಸನ್ನು 60ರಿಂದ 50ಕ್ಕೆ ಇಳಿಸಲಾಗುವುದು ಮತ್ತು ರಾಜ್ಯದಲ್ಲಿ ಸ್ಥಾಪನೆಯಾಗುವ ಕಂಪನಿಗಳಲ್ಲಿ ಶೇ.75ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಲಾಗುವುದು’ ಎಂದು ಹೇಳಿದ್ದಾರೆ.

ರಾಜ್ಯದ ಆದಿವಾಸಿಗಳು ಮತ್ತು ದಲಿತರು 50 ವರ್ಷಗಳನ್ನು ತಲುಪಿದ ನಂತರ ಪಿಂಚಣಿ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ರಾಜ್ಯದಲ್ಲಿ ಜೆಎಂಎಂ ನೇತೃತ್ವದ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಾಂಚಿಯ ಮೊರಾಬಾಡಿ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸೋರೆನ್ ಈ ಘೋಷಣೆ ಮಾಡಿದರು.

ಆದಿವಾಸಿಗಳು ಮತ್ತು ದಲಿತರಿಗೆ 50 ವರ್ಷ ವಯಸ್ಸಾದ ಮೇಲೆ ಪಿಂಚಣಿ ಸೌಲಭ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಅವರಲ್ಲಿ ಮರಣ ಪ್ರಮಾಣವು ಅಧಿಕವಾಗಿದೆ ಮತ್ತು 60 ವರ್ಷಗಳ ನಂತರ ಅವರಿಗೆ ಉದ್ಯೋಗಗಳು ಸಿಗುವುದಿಲ್ಲ ಎಂದು ಅವರು ಹೇಳಿದರು.

2000ರಲ್ಲಿ ಜಾರ್ಖಂಡ್ ರಚನೆಯಾದ ನಂತರದ 20 ವರ್ಷಗಳಲ್ಲಿ ಕೇವಲ 16 ಲಕ್ಷ ಜನರು ಮಾತ್ರ ಪಿಂಚಣಿ ಪ್ರಯೋಜನಗಳನ್ನು ಪಡೆದಿದ್ದಾರೆ. ಆದರೆ, ಅವರ ಸರ್ಕಾರವು 36 ಲಕ್ಷ ಜನರಿಗೆ ಪಿಂಚಣಿ ನೀಡಿದ್ದು, ಎಲ್ಲರೂ ಹೆಚ್ಚಾಗಿ 60 ವರ್ಷಕ್ಕಿಂತ ಮೇಲ್ಪಟ್ಟವರು. ನಮ್ಮ ಸರ್ಕಾರದ ನಾಲ್ಕು ವರ್ಷಗಳಲ್ಲಿ 60 ವರ್ಷ ಮೇಲ್ಪಟ್ಟ 36 ಲಕ್ಷ ಜನರಿಗೆ, 18 ವರ್ಷ ಮೇಲ್ಪಟ್ಟ ವಿಧವೆಯರಿಗೆ ಮತ್ತು ದೈಹಿಕ ವಿಕಲಚೇತನರಿಗೆ ಪಿಂಚಣಿ ಸೌಲಭ್ಯಗಳನ್ನು ನೀಡಿದ್ದೇವೆ ಎಂದರು.

ತಮ್ಮ ಸರ್ಕಾರವು ಜನರ ಕಲ್ಯಾಣಕ್ಕಾಗಿ ಅವಿರತವಾಗಿ ಕೆಲಸ ಮಾಡುತ್ತಿದೆ ಮತ್ತು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ತಲುಪಿಸುವ ತಮ್ಮ ಸರ್ಕಾರದ ‘ಆಪ್‌ಕಿ ಯೋಜನೆ, ಆಪ್‌ಕಿ ಸರ್ಕಾರ್, ಆಪ್‌ಕಿ ದ್ವಾರ’ ಸೇರಿದಂತೆ ಹೆಚ್ಚಿನ ಸಂಖ್ಯೆಯ ಯೋಜನೆಗಳನ್ನು ಮೊದಲ ಬಾರಿಗೆ ಜಾರಿಗೆ ತರಲಾಗುತ್ತಿದೆ ಎಂದು ಸೋರೆನ್ ಪ್ರತಿಪಾದಿಸಿದರು.

ಜಾರ್ಖಂಡ್ ದೇಶದ ಅತ್ಯಂತ ಬಡ ರಾಜ್ಯವಾಗಿದ್ದು, ಕೋವಿಡ್-19 ನಂತರದ ಸಂಕಷ್ಟಗಳು ಮತ್ತು ಬರಗಾಲದೊಂದಿಗೆ ಹೋರಾಡುತ್ತಿದೆ. ಅದರ ಹೊರತಾಗಿಯೂ ರಾಜ್ಯ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸೋರೆನ್ ಹೇಳಿದ್ದಾರೆ. ಜಾರ್ಖಂಡ್‌ನಂತಹ ಬಡ ರಾಜ್ಯಗಳು ಇತರ ರಾಜ್ಯಗಳಿಗೆ ಕೋವಿಡ್ ಸಂದರ್ಭದಲ್ಲಿ ಆಮ್ಲಜನಕವನ್ನು ಪೂರೈಸುತ್ತವೆ. ಸಾಂಕ್ರಾಮಿಕ ಸಮಯದಲ್ಲಿ ಬಡ ಕಾರ್ಮಿಕರನ್ನು ಉಳಿಸುವಾಗಲೇ ನಮ್ಮ ಇಬ್ಬರು ಮಂತ್ರಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಹಿಂದಿನ ಬಿಜೆಪಿ ಆಡಳಿತದ ಬಗ್ಗೆ ವ್ಯಂಗ್ಯವಾಡಿದ ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥರು, ‘ಡಬಲ್ ಇಂಜಿನ್ ಸರ್ಕಾರವು ಎಲ್ಲವನ್ನೂ ನಾಶಪಡಿಸಿದೆ. ಅದರ ಅಧಿಕಾರಾವಧಿಯಲ್ಲಿ ರೈತರು ಸಾವನ್ನಪ್ಪಿದ್ದಾರೆ’ ಎಂದು ಹೇಳಿದರು.

ತಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದ ಅವರು, ಜಾರ್ಖಂಡ್ ಅನ್ನು ದೆಹಲಿ ಅಥವಾ ರಾಜ್ಯದ ಕೇಂದ್ರ ಕಚೇರಿಯಿಂದ ಅಲ್ಲ, ಇಲ್ಲಿನ ಹಳ್ಳಿಗಳಿಂದ ಆಡಳಿತ ನಡೆಸಲಾಗುವುದು ಎಂದರು.

ಇದನ್ನೂ ಓದಿ; ರಾಜ್ಯಸಭೆ ಎಎಪಿ ನಾಯಕರಾಗಿ ಚಡ್ಡಾ ನೇಮಕಕ್ಕೆ ಒಪ್ಪದ ಜಗದೀಪ್ ಧನ್ಖರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...