Homeಮುಖಪುಟ206ನೇ ಕೋರೆಗಾಂವ್ ವಿಜಯೋತ್ಸವ; ದೇಶದಾದ್ಯಂತ ಮಹರ್ ಸೈನಿಕರಿಗೆ ಗೌರವ ಅರ್ಪಣೆ

206ನೇ ಕೋರೆಗಾಂವ್ ವಿಜಯೋತ್ಸವ; ದೇಶದಾದ್ಯಂತ ಮಹರ್ ಸೈನಿಕರಿಗೆ ಗೌರವ ಅರ್ಪಣೆ

- Advertisement -
- Advertisement -

ದೇಶದ ದಲಿತ ಸಮುದಾಯಕ್ಕೆ ಮಹತ್ವದ ದಿನವಾದ ‘ಭೀಮಾ ಕೋರೆಗಾಂವ್ ಕದನದ 206ನೇ ವಿಜಯೋತ್ಸವ’ದ ಪ್ರಯುಕ್ತ, ಪೇಶ್ವೆ ಸೈನ್ಯದ ವಿರುದ್ಧ ಹೋರಾಡಿ ಮಡಿದ 500 ಜನ ಮಹರ್ ಸೈನಿಕರಿಗೆ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ನಮನ ಸಲ್ಲಿಸಲಾಯಿತು.

ಮಹರ್ ಸೈನ್ಯ ಮತ್ತು ಮರಾಠಾ ಒಕ್ಕೂಟದ ಪೇಶ್ವೆ ಬಣಗಳ ನಡುವೆ ಡಿಸೆಂಬರ್ 31, 1817ರಂದು ಆರಂಭವಾದ ಯುದ್ಧ 1818 ಜನವರಿ 1, 1818 ರಂದು ಮುಗಿದಿತ್ತು. ಅಂದಿನ ಭೀಮಾ ನದಿ ತೀರದಲ್ಲಿ ನಡೆದ ಯುದ್ಧದಲ್ಲಿ 28 ಸಾವಿರ ಪೇಶ್ವೆ ಸೈನ್ಯದ ವಿರುದ್ಧ ಹೋರಾಡಿ ಜಯಗಳಿಸಿದ ಮಹರ್ ಸೈನಿಕರ ನೆನಪಿಗೆ ಪ್ರತಿ ವರ್ಷ ವಿಜಯೋತ್ಸವ ಆಚರಿಸಲಾಗುತ್ತದೆ. ಮಹಾರಾಷ್ಟ್ರದ ಪೆರ್ನೆ ಗ್ರಾಮದಲ್ಲಿರುವ ‘ವಿಜಯ್ ಸ್ತಂಭ’ದ ಮುಂಭಾಗ ಪ್ರತಿ ವರ್ಷ ಡಿಸೆಂಬರ್ 31ರ ರಾತ್ರಿ ಲಕ್ಷಗಟ್ಟಲೆ ಜನ ಸೇರುತ್ತಾರೆ.

ಕೋರೆಗಾಂವ್‌ಗೆ ಹರಿದುಬಂದ ಜನಸಾಗರ:

ಭೀಮಾ ಕೋರೆಗಾಂವ್ ಸ್ಮಾರಕಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಲಕ್ಷಾಂತರ ಜನ ಅಂಬೇಡ್ಕರ್ ಅನುಯಾಯಿಗಳು ಆಗಮಿಸಿ, ಡಿಸೆಂಬರ್ 31ರ ಮಧ್ಯರಾತ್ರಿ 12 ಗಂಟೆಗೆ ವಿಜಯೋತ್ಸವ ಆಚರಿಸಿದರು. ವಂಚಿತ್ ಬಹುಜನ ಅಘಾಡಿ ನಾಯಕ ಪ್ರಕಾಶ್ ಅಂಬೇಡ್ಕರ್, ಶಿರೂರು (ಪುಣೆ ಜಿಲ್ಲೆಯ) ಎನ್‌ಸಿಪಿ ಸಂಸದ ಅಮೋಲ್ ಕೋಲ್ಹೆ ಸಹ ವಿಜಯ ಸ್ತಂಭಕ್ಕೆ ಇಂದು ನಮನ ಸಲ್ಲಿಸಿದರು.

ಪುಣೆ-ಅಹ್ಮದ್‌ನಗರ ರಸ್ತೆಯ ಪೆರ್ನೆ ಗ್ರಾಮದ ಬಳಿ ಇರುವ ಸ್ಮಾರಕದ ಸುತ್ತಲೂ ಇರುವ ವಿಸ್ತಾರವಾದ ಜಾಗದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸ್ಮಾರಕಕ್ಕೆ 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಪುಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಕೋರೆಗಾಂವ್ ಭೀಮಾ ಕದನದ ವಾರ್ಷಿಕೋತ್ಸವದಂದು ಶ್ರದ್ಧಾಂಜಲಿ ಸಲ್ಲಿಸಲು ಬರುವ ಜನರಿಗೆ ಪೊಲೀಸ್ ಅಥವಾ ಸ್ಥಳೀಯ ಆಡಳಿತ ಉತ್ತಮ ವ್ಯವಸ್ಥೆ ಕಲ್ಪಿಸಿವೆ.

ಸ್ಮಾರಕಕ್ಕೆ ಭೇಟಿ ನೀಡಿದ್ದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಾತನಾಡಿ, ‘ಜನವರಿ 1, 2018 ರಂದು ಕೋರೆಗಾಂವ್ ಭೀಮಾ ಕದನದ 200ನೇ ವಾರ್ಷಿಕೋತ್ಸವದಂದು, ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಇದರಲ್ಲಿ ಒಬ್ಬರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು. ಆದ್ದರಿಂದ, ಆಡಳಿತದೊಂದಿಗೆ ಸಹಕರಿಸುವಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ’ ಎಂದು ಪವಾರ್ ಹೇಳಿದರು.

ಎಲ್ಗರ್ ಪರಿಷತ್ ಆಯೋಜಿಸಿದ್ದ ಭೀಮಾ ಕೋರೆಗಾಂವ್ ಸಂಗ್ರಾಮದ 200ನೇ ವಿಜಯೋತ್ಸವ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಪುಣೆ ಹಾಗೂ ಮುಂಬೈನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಮಹಾರಾಷ್ಟ್ರಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿತ್ತು. ದಲಿತಪರ ಸಂಘಟನೆಗಳು ಆಗ ಮಹಾರಾಷ್ಟ್ರ ಬಂಗ್‌ದೂ ಕರೆ ನೀಡಿದ್ದವು. ಇಡೀ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ, ಎಲ್ಗರ್ ಪರಿಷತ್‌ನ ಹಲವರು ಇನ್ನೂ ಜೈಲಿನ್ಲಲಿದ್ದಾರೆ.

ಏನಿದು ಕೋರೆಗಾಂವ್ ಯುದ್ಧ; ದಲಿತರ ಪಾಲಿಗೆ ಅತ್ಯಂತ ಮಹತ್ವದಾಗಿದ್ದು ಏಕೆ?

ಕೋರೇಗಾಂವ್ ಯುದ್ಧ ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆಯಾಗಿದ್ದು, 28 ಸಾವಿರ ಸೈನಿಕರನ್ನು ಕೇವಲ ಐನೂರು ಜನ, ದಲಿತ ಸಮುದಾಯಕ್ಕೆ ಸೇರಿದ ಸೈನಿಕರು ಸೇರಿಕೊಂಡು ಸೋಲಿಸಿದ ಮಹತ್ವದ ಕದನವಾಗಿದೆ. ಪೇಶ್ವೆಗಳ ಆಡಳಿತದಲ್ಲಿ ಜಾರಿಯಲ್ಲಿದ್ದ ಅಮಾನುಷ ಜಾತಿ ಪದ್ಧತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳಿಗಾಗಿ ಹಂಬಲಿಸಿದ್ದ ಮಹರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟದ ಕಥನವಾಗಿದೆ. ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ನಡೆಸಿ ಗೆಲುವು ಸಾಧಿಸಿದ್ದು, ಅದು ಭೀಮಾ ತೀರದಲ್ಲಿ ನಡೆದಿದ್ದರಿಂದ ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್’ ಎಂದು ಪ್ರಸಿದ್ಧವಾಗಿದೆ.

ಮಹರ್ ಸೈನಿಕರಿಗೆ ಮತ್ತು ಪೇಶ್ವೆಗಳ ನಡುವೆ ಭೀಮಾ ಕೋರೆಗಾಂವ್ ನಲ್ಲಿ ಡಿಸೆಂಬರ್ 31, 1817ರ ರಾತ್ರಿ ಯುದ್ಧ ಆರಂಭವಾಗಿ ಜನವರಿ 1, 1818ರ ಬೆಳಗಿನ ಜಾವ ಮುಗಿದಿತ್ತು. ಅಂದು ರಾತ್ರಿ ನಡೆದ ಐತಿಹಾಸಿಕ ಯುದ್ದದಲ್ಲಿ ಐನೂರು ಮಂದಿ ದಲಿತ ಸೈನಿಕರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ ಇಪ್ಪತ್ತೆಂಟು ಸಾವಿರ ಮಂದಿ ಇದ್ದ ಸೈನ್ಯದ ವಿರುದ್ಧ ನಿರಂತರ ಹನ್ನೆರಡು ಗಂಟೆ ಕಾದಾಡಿದ ಸ್ಮರಣೀಯ ಕದನವಾಗಿದೆ.

ಅಸ್ಪೃಶ್ಯರು ಎಂಬ ಕಾರಣಕ್ಕೆ ಪೇಶ್ವೆ ಭಾಜಿರಾಯ ದಲಿತ ಸಮುದಾಯದವರನ್ನು ತನ್ನ ಸೇನೆಗೆ ಸೇರಸಿಕೊಂಡಿರಲಿಲ್ಲ. ಆ ಸಿಟ್ಟಿಗೆ ಬ್ರಿಟಿಷ್ ಸೈನ್ಯ ಸೇರಿದ ಅವರು, ಪೇಶ್ವೆಗಳ ಇಪ್ಪತ್ತೆಂಟು ಸಾವಿರ ಸೈನ್ಯ ಬಲವನ್ನು ಸೋಲಿಸಿದರು. ಯುದ್ಧದಲ್ಲಿ ಇಪ್ಪತ್ತೆರಡು ಮಹರ್ ಸೈನಿಕರು ಹುತಾತ್ಮರಾಗಿದ್ದರು. ಕೋರೆಗಾಂವ್ ಸ್ಮಾರಕದಲ್ಲಿ ಹುತಾತ್ಮರಾದ ಚಿತ್ರಗಳು ದೇಶ ಸ್ವಾತಂತ್ರ್ಯ ಪಡೆಯುವವರೆಗೂ ಇತ್ತು ಎನ್ನಲಾಗಿದ್ದು, ಮಹರ್ ಸೈನಿಕರ ವೀರಗಾಥೆ ಹೇಳುವ ಸ್ಮಾರಕವನ್ನು ಬ್ರಿಟಿಷರೇ ನಿರ್ಮಿಸಿದ್ದರು.

ಬ್ರಾಹ್ಮಣ ಸೈನಿಕರೇ ಹೆಚ್ಚಿದ್ದ ಇಪ್ಪತ್ತೆಂಟು ಸಾವಿರ ಸಂಖ್ಯೆಯ ಪೇಶ್ವೆಗಳ ಸೈನ್ಯವನ್ನು ಕೇವಲ ಐನೂರು ಮಂದಿಯಿದ್ದ ಮಹರ್ ಸೈನಿಕರು ಇಡೀ ರಾತ್ರಿ ಕಾದಾಡಿ ನಡುಕ ಹುಟ್ಟಿಸಿದ್ದರು. ಶಿರೂರಿನಿಂದ ಇಪ್ಪತ್ತೇಳು ಮೈಲು ದೂರ ಭೀಮಾ ಕೋರೆಗಾಂವ್ ನವರೆಗೆ ನಡೆದುಕೊಂಡೇ ಬಂದ ಮಹರ್ ಸೈನಿಕರಿಗೆ ತಿನ್ನಲು ಆಹಾರ, ಕುಡಿಯಲು ನೀರು ಸಹ ಇರಲಿಲ್ಲ. ಆದರೂ ಹನ್ನೆರಡು ಗಂಟೆಗಳ ಕಾಲ ಆ ಸೈನಿಕರು ರಣಭೂಮಿಯಲ್ಲಿ ಪೇಶ್ವೆಗಳ ವಿರುದ್ಧ ಕಾದಾಡಿದರು. ಆ ಯುದ್ಧದಲ್ಲಿ ಪೇಶ್ವೆಗಳು ಸೋತಿದ್ದಲ್ಲದೆ, ಅಲ್ಲಿಯವರೆಗೆ ದಲಿತರ ಮೇಲೆ ಅವರು ಹೇರಿದ್ದ ಕೆಲವು ಅಸ್ಪೃಶ್ಯತೆ ಆಚರಣೆಗಳೂ ಅಂದಿಗೆ ಕೊನೆಗೊಂಡಿತು. ಆದ್ದರಿಂದ ಯುದ್ಧವು ದೇಶದ ದಲಿತರ ಪಾಲಿಗೆ ಮಹತ್ವದ್ದಾಗಿದೆ.

ಅತ್ಯಂತ ಕಡಿಮೆ ಸಂಖ್ಯೆಯ ಸೈನಿಕರೊಂದಿಗೆ ಪೇಶ್ವೆಗಳ ವಿರುದ್ಧ ಯುದ್ಧಕ್ಕೆ ಇಳಿದಾಗ ಬ್ರಿಟಿಷರಿಗೆ ಗೆಲ್ಲುವ ನಂಬಿಕೆಯೇ ಇರಲಿಲ್ಲ. ಆದರೆ, ಈ ಯುದ್ಧವೇ ಪೇಶ್ವೆಗಳ ಆಡಳಿತದ ಅಂತ್ಯಕ್ಕೆ ಕಾರಣವಾಗಿದ್ದೂ ಅಲ್ಲದೆ, ಅವರ ಆಡಳಿತದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆಯ ಬೇರುಗಳನ್ನು ಅಲುಗಾಡಿಸಿತು.

ಐನೂರು ಸೈನಿಕರ ನೇತೃತ್ವ ವಹಿಸಿದ್ದು ಸಿಧ್ನಾಕ ಮಹರ್ ಎಂಬಾತ. ‘ಬ್ರಿಟಿಷರು ವಿದೇಶಿಯರು; ಯುದ್ಧದಲ್ಲಿ ನಾವು ನಿಮಗೆ ನೆರವು ನೀಡುತ್ತೇವೆ’ ಎಂದು ಪೇಶ್ವೆ ಭಾಜಿರಾಯನ ಬಳಿ ಮನವಿ ಮಾಡುತ್ತಾರೆ. ಆದರೆ, ಆವರ ಮನವಿಯನ್ನು ನಿರಾಕರಿಸಿದ ಪೇಶ್ವೆಗಳು, ಆ ಸೈನಿಕರನ್ನು ಅವಹೇಳನ ಮಾಡಿ, ಹೀಯಾಳಿಸುತ್ತಾರೆ. ‘ನಿಮಗೆ ಯಾವುದೇ ಹಕ್ಕು ಸಿಗಲ್ಲ; ನೀವು ನಮ್ಮ ವಿರುದ್ಧ ಕಾದಾಡಿದರೂ ಅಷ್ಟೇ, ಬ್ರಿಟಿಷರ ವಿರುದ್ಧ ಹೋರಾಡಿದರೂ ಅಷ್ಟೇ’ ಎನ್ನುತ್ತಾರೆ.

ಆಗ ಪೇಶ್ವೆಗಳ ವಿರುದ್ಧ ಯುದ್ಧ ಮಾಡುವುದು ಮಹರ್ ಸೈನಿಕರ ಆತ್ಮಗೌರವ ಹಾಗೂ ಹಕ್ಕುಗಳ ಪ್ರಶ್ನೆಯಾಗುತ್ತದೆ. ಅಷ್ಟು ದೊಡ್ಡ ಸಂಖ್ಯೆಯ ಪೇಶ್ವೆ ಪಡೆ 500 ಜನ ಮಹರ್ ಸೈನಿಕರ ಎದುರು ಮಂಡಿಯೂರುತ್ತದೆ. ಬ್ರಿಟಿಷರಿಗೆ ಮಹತ್ವದ ವಿಜಯ ಲಭಿಸುತ್ತದೆ. ಅದೇ ಕಾರಣಕ್ಕೆ ಯುದ್ಧದಲ್ಲಿ ಹುತಾತ್ಮರಾದ ಹಾಗೂ ಬದುಕುಳಿದ ಮಹರ್ ಸೈನಿಕರಿಗೆ ಬ್ರಿಟಿಷರು ಗೌರವ ಸಲ್ಲಿಸಿ ಸನ್ಮಾನಿಸುತ್ತಾರೆ. ವಿಜಯೋತ್ಸವದ ನೆನಪಿಗೆ ಸ್ಮಾರಕ ನಿರ್ಮಿಸಿ, ತನ್ನ ಸೈನ್ಯದ ಒಂದು ಗುಂಪಿಗೆ ‘ಮಹರ್ ರೆಜಿಮೆಂಟ್’ ಎಂದು ಹೆಸರಿಡುತ್ತಾರೆ.

ಕೋರೆಗಾಂವ್ ಸ್ಮಾರಕದ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬೆಂಬಲಿಗರು.

ಆದರೆ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಘಟನೆಯನ್ನು ಬೆಳಕಿಗೆ ತರುವವರೆಗೂ, ಜಾತಿವಾದಿಗಳು ಈ ಇತಿಹಾಸವನ್ನು ಮುಚ್ಚಿಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಸೈನಿಕರ ಸಾಹಸ ಬಿಂಬಿಸುವ ಕೋರೆಗಾಂವ್ ಸ್ಥಂಭ (ವಿಜಯ ಸ್ಥಂಭ) ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಇತ್ತು. ಇಪ್ಪತ್ತೆರಡು ಮಹರ್ ಸೈನಿಕರ ತ್ಯಾಗದ ಬಗ್ಗೆ ಅದರಲ್ಲಿ ಪ್ರಸ್ತಾವ ಇತ್ತು. ಇಂದಿಗೂ ಆ ಸ್ಮಾರಕ ಅಸ್ಪೃಶ್ಯರ (ಮಹರ್) ವೀರ ಕಥೆಗೆ ಸಾಕ್ಷಿಯಂತೆ ಇದ್ದು, ಬಾಬಾ ಸಾಹೇಬರು ಬದುಕ್ಕಿದ್ದಷ್ಟೂ ಕಾಲ ಪ್ರತಿವರ್ಷ ಜನವರಿ ಒಂದರಂದು ಭೀಮಾ ಕೋರೆಗಾಂವ್ ಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದರು.

ಇದನ್ನೂ ಓದಿ; ಕೇರಳ ರಾಜ್ಯಪಾಲರ ಪ್ರತಿಕೃತಿ ದಹನ; ಎಸ್ಎಫ್ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...