Homeಮುಖಪುಟಹಿಟ್ ಆ್ಯಂಡ್ ರನ್‌ಗೆ 10 ವರ್ಷ ಜೈಲು: ಹೊಸ ಕ್ರಿಮಿನಲ್ ಕಾನೂನಿನ ವಿರುದ್ದ ಬೀದಿಗಿಳಿದ ವಾಹನ...

ಹಿಟ್ ಆ್ಯಂಡ್ ರನ್‌ಗೆ 10 ವರ್ಷ ಜೈಲು: ಹೊಸ ಕ್ರಿಮಿನಲ್ ಕಾನೂನಿನ ವಿರುದ್ದ ಬೀದಿಗಿಳಿದ ವಾಹನ ಚಾಲಕರು

- Advertisement -
- Advertisement -

ಇತ್ತೀಚೆಗೆ ಸಂಸತ್‌ನಲ್ಲಿ ಅಂಗೀಕಾರಗೊಂಡ ಹೊಸ ಕ್ರಿಮಿನಲ್ ಕಾನೂನು ಭಾರತೀಯ ನ್ಯಾಯ (ಎರಡನೆಯ) ಸಂಹಿತೆಯ ನಿಯಮವೊಂದರ ವಿರುದ್ಧ ದೇಶದ ವಿವಿದೆಡೆ ವಾಹನ ಚಾಲಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಹೊಸ ಕ್ರಿಮಿನಲ್ ಕಾನೂನಿನಲ್ಲಿ ಹಿಟ್ ಅಂಡ್ ರನ್‌ ಪ್ರಕರಣಗಳ ಜೈಲು ಶಿಕ್ಷೆಯ ಅವಧಿಯನ್ನು ಹೆಚ್ಚಿಸಲಾಗಿದೆ. ಅಪಘಾತದ ಬಳಿಕ ಚಾಲಕರು ಪರಾರಿಯಾಗಲು ಯತ್ನಿಸಿದೆ ಅಥವಾ ಮಾರಣಾಂತಿಕ ಅಪಘಾತವನ್ನು ಪೊಲೀಸರಿಗೆ ವರದಿ ಮಾಡದಿದ್ದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಈ ಹಿಂದೆ, ಹಿಟ್ ರನ್ ಪ್ರಕರಣಕ್ಕೆ ಐಪಿಸಿಯ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಎರಡು ವರ್ಷಗಳವರೆಗೆ ಮಾತ್ರ ಜೈಲು ಶಿಕ್ಷೆ ವಿಧಿಸಬಹುದಾಗಿತ್ತು.

ಇದನ್ನು ವಿರೋಧಿಸಿ ಹರಿಯಾಣದ ಜಿಂದ್‌ನಲ್ಲಿ ಇಂದು ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರು ಮುಷ್ಕರ ನಡೆಸಿದ್ದು, ಆಟೋ ಚಾಲಕರು ಕೂಡ ಹೊಸ ಕಾನೂನಿನ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಹೊಸ ಕಾನೂನು ಚಾಲಕರನ್ನು ಅವರ ಕರ್ತವ್ಯದಿಂದ ನಿರುತ್ಸಾಹಗೊಳಿಸುತ್ತದೆ ಹೊಸಬರು ವಾಹನ ಚಾಲನಾ ವೃತ್ತಿಗೆ ಬರದಂತೆ ತಡೆಯುತ್ತದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರೂ ಉದ್ದೇಶಪೂರ್ವಕವಾಗಿ ಅಪಘಾತವೆಸಗುವುದಿಲ್ಲ. ಹೊಸ ಕಾನೂನಿನ ಪ್ರಕಾರ ಅಪಘಾತ ನಡೆದಾಗ ಘಟನಾ ಸ್ಥಳದಿಂದ ಪಲಾಯಣ ಮಾಡದಿದ್ದರೆ ಆಕ್ರೋಶಿತ ಜನರು ಚಾಲಕರ ಮೇಲೆ ದಾಳಿ ಮಾಡುವ ಸಾಧ್ಯತೆಯಿರುತ್ತದೆ. ತಮ್ಮ ರಕ್ಷಣೆಗೋಸ್ಕರ ಪಲಾಯಣ ಮಾಡುವ ಚಾಲಕರನ್ನು ಹೊಸ ಕಾನೂನು ತಡೆಯುತ್ತದೆ ಎಂದು ಚಾಲಕರು ಹೇಳಿದ್ದಾರೆ.

ಒಂದು ವೇಳೆ ರಸ್ತೆಯಲ್ಲಿ ಸಂಪೂರ್ಣವಾಗಿ ಮಂಜು ಮುಸುಕಿದ ವಾತಾವರಣವಿದ್ದು ರಸ್ತೆ ಕಾಣದೆ ಅಪಘಾತ ಸಂಭವಿಸಿದರೆ, ಇದನ್ನೂ ಹಿಟ್‌ ರಂಡ್ ಎಂದು ಪರಿಗಣಿಸಬಹುದು. ಈ ಮೂಲಕ ಚಾಲಕರು 10 ವರ್ಷಗಳ ಕಾಲ ಜೈಲಲ್ಲಿ ಕೂರಬೇಕಾಗುತ್ತದೆ ಎಂದು ಚಾಲಕರು ಹೇಳಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಲ್ಲೂ ಹೊಸ ಕಾನೂನಿನ ವಿರುದ್ಧ ಬಸ್ ಮತ್ತು ಟ್ರಕ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ-2 ತಡೆದು ಪ್ರತಿಭಟಿಸಲಾಗಿದೆ. ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿಯೂ ಟ್ರಕ್ ಮತ್ತು ಟ್ಯಾಂಕರ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.

ಅಪಘಾತ ಸಂಭವಿಸಿದ ಬಳಿಕ ಚಾಲಕರು ಪಲಾಯನ ಮಾಡಿದರೆ ಅದನ್ನು ಹಿಟ್ ಅಂಡ್ ರನ್ ಎಂದು ಪರಿಗಣಿಸಲಾಗುತ್ತದೆ. ಚಾಲಕರ ಪ್ರಕಾರ, ಅವರು ಉದ್ದೇಶಪೂರ್ವಕವಾಗಿ ಅಪಘಾತವೆಸಗುವುದಿಲ್ಲ ಮತ್ತು ಅಪಘಾತದ ಬಳಿಕ ತಮ್ಮ ರಕ್ಷಣೆಗೋಸ್ಕರ ಪಲಾಯಣ ಮಾಡುತ್ತಾರೆ. ಇದಕ್ಕೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವುದನ್ನು ಚಾಲಕರು ವಿರೋಧಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾಗೊಂಡ ಮೂರು ಕ್ರಿಮಿನಲ್ ಕಾನೂಗಳಾದ ಭಾರತೀಯ ನ್ಯಾಯ (ಎರಡನೆಯ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ (ಎರಡನೆಯ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದ್ದಾರೆ.

ಈ ಮೂರು ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ- 1860, ಕ್ರಿಮಿನಲ್ ಪ್ರೊಸೀಜರ್ ಆಕ್ಟ್- 1898, ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್-1872 ಅನ್ನು ಬದಲಾಯಿಸುತ್ತದೆ. ಭಾರತೀಯ ನ್ಯಾಯ ಸಂಹಿತೆ ಜಾರಿಯಾದರೆ, ಭಾರತೀಯ ದಂಡ ಸಂಹಿತೆ (IPC)ರದ್ದಾಗಲಿದೆ.

ಇದನ್ನೂ ಓದಿ : ಬಿಜೆಪಿ ಸರಕಾರ ಉದ್ಯೋಗ ಗ್ಯಾರೆಂಟಿ ನೀಡಿ ‘ದೇಶಭಕ್ತಿ’ಯನ್ನು ಪ್ರದರ್ಶಿಸಲಿ: ಮಾಯಾವತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...