Homeಮುಖಪುಟಬೆಂಗಳೂರು ವಿಮಾನ ನಿಲ್ದಾಣದ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ: ತಿಂಗಳಲ್ಲಿ ಎರಡನೇ ಪ್ರಕರಣ

ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ: ತಿಂಗಳಲ್ಲಿ ಎರಡನೇ ಪ್ರಕರಣ

- Advertisement -
- Advertisement -

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಟರ್ಮಿನಲ್ 1ರ ಕ್ಯಾಬ್ ಕಂಪನಿಯೊಂದರಲ್ಲಿ ಬುಕಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಮಹಿಳೆ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಆಕೆಯ ಸಹೋದರ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಕಳೆದ ಬುಧವಾರ ದೂರು ನೀಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ತುಮಕೂರು ಮೂಲದ ನೇತ್ರಾ ನಾಪತ್ತೆಯಾದ ಮಹಿಳೆ. ಈಕೆ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ವಿಐಟಿ ಕ್ಯಾಬ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ವಿಮಾನ ನಿಲ್ದಾಣದ ಸಮೀಪದ ಹುಣಸಮಾರನಹಳ್ಳಿಯ ‘ಯಮುನಾ’ ಪಿಜಿಯಲ್ಲಿ ವಾಸವಿದ್ದರು.

ಪ್ರತಿದಿನ ಮನೆಗೆ ಕರೆ ಮಾಡಿ ಮಾತನಾಡುತ್ತಿದ್ದ ನೇತ್ರಾ, ಡಿಸೆಂಬರ್ 29,2023ರಂದು ಮಧ್ಯಾಹ್ನ ಕೊನೆಯದಾಗಿ ಕರೆ ಮಾಡಿದ್ದರು. ಆ ದಿನ ರಾತ್ರಿ ಪಾಳಿ ಕೆಲಸ (ನೈಟ್ ಡ್ಯೂಟಿ) ಇರುವುದಾಗಿ ತಿಳಿಸಿದ್ದರು. ಮರುದಿನ (ಡಿಸೆಂಬರ್ 30,2023) ಆಕೆ ಕರೆ ಮಾಡಿರಲಿಲ್ಲ. ಮನೆಯವರು ಕರೆ ಮಾಡಿದಾಗ ನೇತ್ರಾಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಚಾರ್ಜ್ ಮುಗಿದಿರಬಹುದು ಎಂದು ಮನೆಯವರು ಅಂದುಕೊಂಡಿದ್ದರು. ಡಿಸೆಂಬರ್ 31ರಂದು ಕೂಡ ಮನೆಯವರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಎಂದು ಹೇಳುತ್ತಿತ್ತು. ಇದರಿಂದ ಮನೆಯವರು ಆತಂಕಗೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಎರಡ್ಮೂರು ದಿನಗಳಿಂದ ನೇತ್ರಾಳ ಮೊಬೈಲ್ ಸ್ವಿಚ್ ಆಫ್ ಆದ ಕಾರಣ, ಆಕೆಯ ಸಹೋದರ ಮಹೇಶ್ ಕುಮಾರ್ ಜನವರಿ 2ರಂದು ನೇತ್ರಾ ಕೆಲಸ ಮಾಡುತ್ತಿದ್ದ ವಿಐಟಿ ಕ್ಯಾಬ್ ಕಂಪನಿಗೆ ಭೇಟಿ ನೀಡಿದ್ದರು. ಕಂಪನಿಯವರನ್ನು ವಿಚಾರಿಸಿದಾಗ, ರಾತ್ರಿ ಪಾಳಿ ಕೆಲಸ ಮುಗಿಸಿ ಡಿಸೆಂಬರ್ 30ರಂದು ಬೆಳಿಗ್ಗೆ 6 ಗಂಟೆಗೆ ನೇತ್ರಾ ಕಚೇರಿಯಿಂದ ತೆರಳಿದ್ದು, ಇದುವರೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ನೇತ್ರಾಳ ಸ್ನೇಹಿತರು, ಸಹೋದ್ಯೋಗಿಗಳನ್ನು ವಿಚಾರಿಸಿದರೂ, ಆಕೆ ಎಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಇದರಿಂದ ಭಯಭೀತರಾದ ಸಹೋದರ ಮಹೇಶ್ ಕುಮಾರ್ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ನೇತ್ರಾಳ ಕುರಿತು ಇದುವರೆಗೆ ಪೊಲೀಸ್ ಮೂಲಗಳಿಂದ ಯಾವುದೇ ಮಾಹಿತಿ ದೊರೆತಿಲ್ಲ.

ತಿಂಗಳಲ್ಲಿ ಎರಡನೇ ಪ್ರಕರಣ:

ಒಂದು ತಿಂಗಳೊಳಗೆ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಎರಡನೇ ಪ್ರಕರಣ ಇದಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ನಾಲ್ಕನೇ ನಾಪತ್ತೆ ಎಫ್‌ಐಆರ್ ದಾಖಲಾಗಿದೆ. ಡಿಸೆಂಬರ್ 3, 2023 ರಂದು, ಇಂಡಿಗೋ ವಿಮಾನಯಾನ ಸಂಸ್ಥೆಯ ಕಾರ್ಗೋ ವಿಭಾಗದಲ್ಲಿ ಉದ್ಯೋಗಿಯಾಗಿದ್ದ 22 ವರ್ಷದ ಯುವತಿ ನಾಪತ್ತೆಯಾಗಿದ್ದರು. ಈ ಸಂಬಂಧ ಆಕೆಯ ತಾಯಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಡಿಸೆಂಬರ್ 4,2023 ರಂದು ವಿಮಾನ ನಿಲ್ದಾಣದಿಂದ ಬಿಹಾರಕ್ಕೆ ಹೊರಟಿದ್ದ ವ್ಯಕ್ತಿ ತನ್ನ ಊರು ತಲುಪಿಲ್ಲ. ಅವರು ವಿಮಾನ ನಿಲ್ದಾಣದೊಳಗೆ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 17, 2023 ರಂದು, ಉದ್ಯೋಗ ನಿಮಿತ್ತ ದೆಹಲಿಯಿಂದ ವಿಮಾನದಲ್ಲಿ ಆಗಮಿಸಿದ್ದ ಕೇಶ ವಿನ್ಯಾಸಕಿ ಟರ್ಮಿನಲ್ 1ರಿಂದ ಕಣ್ಮರೆಯಾಗಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಮಲ ಹೊರುವ ಪದ್ಧತಿ ಇನ್ನೂ ಜೀವಂತ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಇಡಿ; ಎಎಪಿ ಆರೋಪಿ

0
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಿದೆ; ಅವರ ಆಮ್ ಆದ್ಮಿ ಪಕ್ಷವನ್ನು...