ಬಡವರಿಗೆ ಕಡಿಮೆ ಬೆಲೆಗೆ ಆಹಾರ ನೀಡುವ ಉದ್ದೇಶದಿಂದ ಹಿಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ‘ಇಂದಿರಾ ರಸೋಯಿ ಯೋಜನೆ’ಯನ್ನು, ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಶನಿವಾರ ‘ಶ್ರೀ ಅನ್ನಪೂರ್ಣ ರಸೋಯಿ ಯೋಜನೆ’ ಎಂದು ಮರುನಾಮಕರಣ ಮಾಡಿದೆ.
ಹಿಂದಿನ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಡಿಮೆ ದರದಲ್ಲಿ ಜನರಿಗೆ ಊಟ ನೀಡುವ ಯೋಜನೆಯನ್ನು ಪ್ರಾರಂಭಿಸಿತು. ರಾಜ್ಯದ ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಆದೇಶದಂತೆ, ‘ಶ್ರೀ ಅನ್ನಪೂರ್ಣ ರಸೋಯಿ ಯೋಜನೆ’ಯಲ್ಲಿ ಪ್ರತಿ ಪ್ಲೇಟ್ ತೂಕವನ್ನು 600 ಗ್ರಾಂಗೆ ಹೆಚ್ಚಿಸಲಾಗಿದೆ.
ಪ್ರತಿ ಪ್ಲೇಟ್‌ಗೆ ಪಾವತಿಸಬೇಕಾದ ಸರ್ಕಾರದ ಅನುದಾನವನ್ನು ₹17 ರಿಂದ ₹22 ಕ್ಕೆ ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಫಲಾನುಭವಿಯ ಕೊಡುಗೆ ಪ್ರತಿ ಪ್ಲೇಟ್‌ಗೆ ₹8 ಆಗಿರುತ್ತದೆ ಎಂದು ಅದು ಹೇಳಿದೆ.
ಇಂದಿರಾ ರಸೋಯಿ ಯೋಜನೆ, ಇದರಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಕೇವಲ ₹8ಕ್ಕೆ ಪೌಷ್ಟಿಕ ಆಹಾರ ಸಿಗುತ್ತದೆ, ಇದನ್ನು ಆಗಸ್ಟ್ 2020 ರಲ್ಲಿ ‘ಯಾರೂ ಹಸಿವಿನಿಂದ ಮಲಗಬಾರದು’ ಎಂಬ ಅಡಿಬರಹದೊಂದಿಗೆ ಪ್ರಾರಂಭಿಸಲಾಯಿತು.
ಇದನ್ನೂ ಓದಿ; ಸಾವಿತ್ರಿಬಾಯಿ ಫುಲೆ ಬ್ಯಾನರ್ ಹರಿದ ಕಿಡಿಗೇಡಿಗಳು; ಐವರ ವಿರುದ್ಧ ಪ್ರಕರಣ ದಾಖಲು


