Homeಮುಖಪುಟ'ಶಾಸ್ತ್ರ'ಗಳಿಗೆ ವಿರುದ್ಧವಾಗಿ 'ರಾಮಮಂದಿರ'ದ ಪ್ರಾಣ ಪ್ರತಿಷ್ಠಾನ: ಹಿಂದೂ ಮಠಾಧೀಶರ ಆರೋಪ

‘ಶಾಸ್ತ್ರ’ಗಳಿಗೆ ವಿರುದ್ಧವಾಗಿ ‘ರಾಮಮಂದಿರ’ದ ಪ್ರಾಣ ಪ್ರತಿಷ್ಠಾನ: ಹಿಂದೂ ಮಠಾಧೀಶರ ಆರೋಪ

- Advertisement -
- Advertisement -

ರಾಮ ಮಂದಿರ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಹಾಗಾಗಿ ಪ್ರಾಣ ಪ್ರತಿಷ್ಠಾನ ‘ಶಾಸ್ತ್ರ’ಗಳಿಗೆ ವಿರುದ್ಧವಾದುದು ಎಂದು ಜ್ಯೋತಿರ್ ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಹೇಳಿದ್ದು, ರಾಮಮಂದಿರ ಉದ್ಘಾಟಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ವಿಗ್ರಹ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಪುರಿಯ ಗೋವರ್ಧನ ಮಠದ ಮಠಾಧೀಶರು ವಿರೋಧ ವ್ಯಕ್ತಪಡಿಸಿದ ಕೆಲವು ದಿನಗಳ ನಂತರ, ಉತ್ತರಾಖಂಡದ ಜ್ಯೋತಿರ್ ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ದೇಶದ ಪ್ರಮುಖ ನಾಲ್ವರು ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಜ್ಯೋತಿರ್ ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ, ಈ ಸಮಾರಂಭವನ್ನು “ಶಾಸ್ತ್ರಗಳ ವಿರುದ್ಧ”  ಅಥವಾ ಪವಿತ್ರ ಹಿಂದೂ ಧರ್ಮಗ್ರಂಥಗಳಿಗೆ ವಿರುದ್ಧವಾಗಿ ನಡೆಸಲಾಗುತ್ತಿದೆ. ವಿಶೇಷವಾಗಿ ದೇವಾಲಯದ ನಿರ್ಮಾಣವು ಅಪೂರ್ಣವಾಗಿರುವ ವೇಳೆ ಪ್ರತಿಷ್ಠಾಪನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಶಂಕರಾಚಾರ್ಯರು 4 ಮಠಗಳ ಪೈಕಿ ಒಂದು ಮಠದ ಮಠಾಧೀಶರಾಗಿದ್ದು, 8ನೆಯ ಶತಮಾನದಲ್ಲಿ ಹಿಂದೂ ಮಹರ್ಷಿ ಆದಿ ಶಂಕರ ಸ್ಥಾಪಿಸಿದ ಹಿಂದೂ ಅದ್ವೈತ ವೇದಾಂತ ಪರಂಪರೆಯ ಭಾಗವಾಗಿದ್ದಾರೆ. ಜ್ಯೋತಿರ್ಮಠ (ಜೋಶಿಮಠ),ಗೋವರ್ಧನ ಮಠ, ಶೃಂಗೇರಿ ಶಾರದಾ ಪೀಠ (ಕರ್ನಾಟಕ) ಹಾಗೂ ದ್ವಾರಕಾ ಶಾರದಾ ಪೀಠ (ಗುಜರಾತ್) ಎಂಬ ಮಠಗಳಿವೆ. ಆದಿ ಶಂಕರ ಮತ್ತು ಅವರ ಚಿಂತನೆಯ ಶೈವ ಪಂಥದಿಂದ ಪ್ರಭಾವಿತವಾಗಿದೆ. ಇದರಲ್ಲಿ ಶಿವನ ಆರಾಧನೆ, ಶಕ್ತಿಯ ಆರಾಧನೆ ಮಾಡುತ್ತಾರೆ.

ಜ್ಯೋತಿರ್ ಮಠದ 46ನೇ ಶಂಕರಾಚಾರ್ಯರಾದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ತಮ್ಮ ವೀಡಿಯೊದಲ್ಲಿ, ನಾಲ್ಕು ಶಂಕರಾಚಾರ್ಯರ ನಿರ್ಧಾರವನ್ನು “ಮೋದಿ ವಿರೋಧಿ” ಎಂದು ಅರ್ಥೈಸಬಾರದು ಆದರೆ ಅವರು “ಶಾಸ್ತ್ರ ವಿರೋಧಿ” ಆಗಲು ಬಯಸದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ನಾವು ಹೋಗದಿರಲು ಕಾರಣವೇನು? ಯಾವುದೇ ದ್ವೇಷದಿಂದಲ್ಲ, ಆದರೆ ಶಾಸ್ತ್ರ-ವಿಧಿಯನ್ನು ಅನುಸರಿಸುವುದು  ಶಂಕರಾಚಾರ್ಯರ ಕರ್ತವ್ಯವಾಗಿದೆ. ಇಲ್ಲಿ ಶಾಸ್ತ್ರ-ವಿಧಿಯನ್ನು ಕಡೆಗಣಿಸಲಾಗುತ್ತಿದೆ. ದೇವಾಲಯವು ಇನ್ನೂ ಅಪೂರ್ಣವಾಗಿರುವಾಗ ಪ್ರಾಣ ಪ್ರತಿಷ್ಠಾಪಣೆ ಮಾಡಬಾರದು. ನಾವು ಇದನ್ನು ಹೇಳಿದರೆ, ನಮ್ಮನ್ನು ‘ಮೋದಿ ವಿರೋಧಿ’ ಎಂದು ಕರೆಯಲಾಗುತ್ತದೆ. ಇಲ್ಲಿ ಮೋದಿ ವಿರೋಧಿ ಎಂದರೇನು? ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಪ್ರಶ್ನಿಸಿದ್ದಾರೆ.

ಪುರಿಯ ಗೋವರ್ಧನ ಮಠದ ಮುಖ್ಯಸ್ಥ ನಿಶ್ಚಲಾನಂದ ಸರಸ್ವತಿ ಅವರು ತಮ್ಮ ಸ್ಥಾನದ ಘನತೆಯ ಬಗ್ಗೆ ಅರಿವು ಇರುವ ಕಾರಣ ಸಮಾರಂಭದಿಂದ ಹೊರಗುಳಿಯುವುದಾಗಿ ಘೋಷಿಸಿದ ಕೆಲವು ದಿನಗಳ ನಂತರ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.

ನಾನು ಅಲ್ಲಿ ಏನು ಮಾಡುತ್ತೇನೆ? ಮೋದಿ ರಾಮಮಂದಿರವನ್ನು ಉದ್ಘಾಟಿಸಿ, ವಿಗ್ರಹವನ್ನು ಸ್ಪರ್ಶಿಸಿದಾಗ ನಾನು ನಿಂತುಕೊಂಡು ಚಪ್ಪಾಳೆ ತಟ್ಟಲೆ? ನನಗೆ ಯಾವುದೇ ಸ್ಥಾನಮಾನ ಬೇಕಿಲ್ಲ. ನನಗೆ ಈಗಲೇ ದೊಡ್ಡ ಸ್ಥಾನವಿದೆ. ನನಗೆ ಯಾವುದೇ ಲಾಭ ಬೇಕಿಲ್ಲ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರು ಏನು ಮಾಡಬೇಕು? ಎಂದು ಅವರು ಪ್ರಶ‍್ನಿಸುತ್ತಿರುವ  ವಿಡಿಯೊವನ್ನು ನಾಗಾಲ್ಯಾಂಡ್ ಕಾಂಗ್ರೆಸ್ ಪೋಸ್ಟ್ ಮಾಡಿತ್ತು.

ವಿಡಿಯೋದಲ್ಲಿ ಅವರು, ಮೋದಿ ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಅಯೋಧ್ಯೆಯ ಬಗ್ಗೆ “ಯಾವುದೇ ದ್ವೇಷವಿಲ್ಲ”. ಇದು ಅಹಂಕಾರವಲ್ಲ. ಆದರೆ ನನ್ನ ಸ್ಥಾನದ ಘನತೆಯ ಬಗ್ಗೆ ನನಗೆ ಅರಿವಿದೆ, ಅದಕ್ಕಾಗಿಯೇ ನಾನು ಹೋಗುತ್ತಿಲ್ಲ. ನಾನು ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಬಹುದು ಎಂದು ಹೇಳುವ ಆಹ್ವಾನವನ್ನು ನಾನು ಸ್ವೀಕರಿಸಿದ್ದೇನೆ. ನಾನು ಒಬ್ಬ ವ್ಯಕ್ತಿಯನ್ನು ಏಕೆ ಕರೆದುಕೊಂಡು ಹೋಗಬೇಕು? ಎಂದು ಕೇಳಿದ್ದರು.

ವಿಶ‍್ವ ಹಿಂದೂ ಪರಿಷತ್‌ನ ಉಪಾಧ್ಯಕ್ಷ ಹಾಗೂ ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆಗಾಗಿ ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮಮಂದಿರ ವೈಷ್ಣವ ಪಂಥದ ರಮಾನಂದ ಸಂಪ್ರದಾಯಸ್ಥರಿಗೆ ಸೇರಿದೆ, ಸನ್ಯಾಸಿಗಳಿಗಾಗಲಿ, ಶೈವರಿಗಾಗಲಿ ಅಥವಾ ಶಾಕ್ತ ಪಂಥದವರಿಗಾಗಲಿ ಅಲ್ಲ ಎಂದು ‘ಅಮರ್ ಉಜಾಲ’ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ  ಹೇಳಿಕೆ ನೀಡಿದ್ದರು.

ಅಪೂರ್ಣ ದೇವಾಲಯ

ಅವಿಮುಕ್ತೇಶ್ವರಾನಂದ ಸರಸ್ವತಿಯವರ ಪ್ರಕಾರ, ಪ್ರತಿಷ್ಠಾಪಣೆ ತುರ್ತಾಗಿ ಮಾಡುವ ಅವಶ್ಯಕತೆ ಇರಲಿಲ್ಲ. ಮಂದಿರ “ಸಂಪೂರ್ಣವಾಗಿ” ಪೂರ್ಣಗೊಳ್ಳುವವರೆಗೆ ಸರ್ಕಾರವು ಕಾಯಬಹುದಿತ್ತು. ಶಾಸ್ತ್ರಗಳ ವಿಷಯಕ್ಕೆ ಬಂದಾಗ ಇದು ದೊಡ್ಡ ತಪ್ಪಾಗಿದೆ. ನಾವು ಧರ್ಮ ಶಾಸ್ತ್ರಗಳ ಪ್ರಕಾರ ಕಾರ್ಯನಿರ್ವಹಿಸಲು ಬಯಸುತ್ತೇವೆ ಮತ್ತು ಜನರು ಅದೇ ರೀತಿ ಮಾಡಬೇಕೆಂದು ಬಯಸುತ್ತೇವೆ. ಏಕೆಂದರೆ ಪುಣ್ಯ-ಪಾಪ್ (ಒಳ್ಳೆಯ ಕಾರ್ಯಗಳು ಮತ್ತು ದುಷ್ಕೃತ್ಯಗಳು) ನಮಗೆ ಹೇಗೆ ತಿಳಿದಿದೆ? ರಾಮನಿದ್ದ ಎಂದು ನಮಗೆ ಯಾರು ಹೇಳಿದರು? ನಮ್ಮ ಧರ್ಮ ಶಾಸ್ತ್ರಗಳಲ್ಲವೆ ಎಂದು ಹೇಳಿದ್ದಾರೆ.

ಈಗ ಈ ಸ್ಥಳವು ರಮಾನಂದ ಸಂಪ್ರದಾಯಸ್ಥರಿಗೆ ಮೀಸಲಾಗಿರುವುದರಿಂದ ಶಂಕರಾಚಾರ್ಯರ ಅಗತ್ಯವಿಲ್ಲ ಎಂದು ಚಂಪತ್ ರಾಯ್ ಹೇಳುತ್ತಿದ್ದಾರೆ. ಈಗ ಪ್ರಶ‍್ನೆ ಏನೆಂದರೆ ರಾಮಮಂದಿರವು ರಮಾನಂದ ಪಂಥಕ್ಕೆ ಸೇರಿದ್ದಾದರೆ ಚಂಪತ್ ರಾಯ್ ಏಕೆ ಅಲ್ಲಿದ್ದಾರೆ? ನೃಪೇಂದ್ರ ಮಿಶ‍್ರಾ  ಏಕೆ ಅಲ್ಲಿದ್ದಾರೆ? ರಾಜಾ ಸಾಹೇಬ್ ಏಕೆ ಅಲ್ಲಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ. ಇವರೆಲ್ಲ ಪ್ರಾಣ ಪ್ರತಿಷ್ಠಾಪನೆ ನೆರವೇರುವುದಕ್ಕೂ ಮುನ್ನವೇ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿ ಅವನ್ನು ರಮಾನಂದ ಸಂಪ್ರದಾಯಸ್ಥರಿಗೆ ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ.

ಅವರು ದೇಣಿಗೆ ತೆಗೆದುಕೊಳ್ಳುವಾಗ ದೇವಾಲಯವು ರಮಾನಂದ ಸಂಪ್ರದಾಯಕ್ಕೆ ಸೇರಿದ್ದು ಎಂದು ಏಕೆ ಘೋಷಿಸಲಿಲ್ಲ? ಆ ಸಮಯದಲ್ಲಿ ನೀವು ದೇಶಾದ್ಯಂತ ಇರುವ ಸನಾತನ ಧರ್ಮಿಗಳಿಂದ ದೇಣಿಗೆ ತೆಗೆದುಕೊಂಡಿದ್ದೀರಿ. ನೀವು ನಮ್ಮಿಂದಲೂ ದೇಣಿಗೆ ತೆಗೆದುಕೊಂಡಿದ್ದೀರಿ. ದೇವಾಲಯವು ಶಂಕರಾಚಾರ್ಯರಿಗೆ ಸೇರದಿರುವಾಗ, ನೀವು ನಮ್ಮಿಂದ ದೇಣಿಗೆಯನ್ನು ಏಕೆ ಸ್ವೀಕರಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಬೆಂಗಳೂರು: ಸಿಇಒ ಪುತ್ರನ ಕೊಲೆ ಪೂರ್ವ ಯೋಜಿತ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Here self respect is NIL in front of Rashtra Gaurav. No is complete in any respect. So we need not come to your mutt to see you. What’s your contribution in building Hindu Rashtra.
    Its shame on ones role who objects this Program.
    Jai Shree Ram

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...