Homeಮುಖಪುಟಜೀವಾವಧಿ ಶಿಕ್ಷೆ ಪ್ರಶ್ನಿಸಿ ಸಂಜೀವ್ ಭಟ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಗುಜರಾತ್‌ ಹೈಕೋರ್ಟ್‌

ಜೀವಾವಧಿ ಶಿಕ್ಷೆ ಪ್ರಶ್ನಿಸಿ ಸಂಜೀವ್ ಭಟ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಗುಜರಾತ್‌ ಹೈಕೋರ್ಟ್‌

- Advertisement -
- Advertisement -

1990ರ ಕಸ್ಟಡಿ ಚಿತ್ರಹಿಂಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮ್‌ನಗರ ನ್ಯಾಯಾಲಯವು ದೋಷಿ ಎಂದು ಪರಿಗಣಿಸಿರುವುದನ್ನು ಮತ್ತು ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್ ಭಟ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ಎ.ಜೆ. ಶಾಸ್ತ್ರಿ ಹಾಗೂ ಸಂದೀಪ್ ಭಟ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್ ಭಟ್ ಅವರು ಸಲ್ಲಿಸಿದ ಮೇಲ್ಮನವಿ ಅರ್ಜಿ ಬಗ್ಗೆ ವಿಚಾರಣೆ ನಡೆಸಿದ್ದು, ಐಪಿಸಿ ಸೆಕ್ಷನ್ 302ರಡಿಯಲ್ಲಿ ಆರೋಪಿಗಳನ್ನು ದೋಷಿ ಎಂದು ಪರಿಗಣಿಸುವಾಗ ವಿಚಾರಣಾ ನ್ಯಾಯಾಲಯ ದಾಖಲಿಸಿದ ಕಾರಣಗಳನ್ನು ನಾವು ಪರಿಶೀಲನೆ ನಡೆಸಿದ್ದೇವೆ. ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿದ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಜಾಮ್‌ನಗರ ನ್ಯಾಯಾಲಯವು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಗಮನಿಸಿದ್ದೇವೆ. ತೀರ್ಪಿನಲ್ಲಿ ಮಧ್ಯಪ್ರವೇಶಕ್ಕೆ ನಾವು ಯಾವುದೇ ಕಾರಣ ಕಂಡುಕೊಂಡಿಲ್ಲ ಎಂದು ಹೇಳಿದೆ.

ಪ್ರಕರಣದ ವಿವರ:

1990 ಅಕ್ಟೋಬರ್ 30ರಂದು ಬಿಜೆಪಿ ಹಾಗೂ ವಿಹೆಚ್‌ಪಿ ಭಾರತ್ ಬಂದ್‌ಗೆ ಕರೆ ನೀಡಿದ ಬಳಿಕ ಜಾಮ್ನಗರ್ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ಸಂಜಯ್ ಭಟ್ ಅವರು ನೂರಕ್ಕಿಂತ ಅಧಿಕ ಜನರನ್ನು ವಶಕ್ಕೆ ತೆಗೆದುಕೊಂಡಿದ್ದರು. ಬಂಧಿತರಲ್ಲಿ ಓರ್ವ ಪ್ರಭುದಾಸ್ ವೈಷ್ಣಾನಿ ಬಿಡುಗಡೆಯ ಬಳಿಕ ಮೂತ್ರ ಪಿಂಡದ ವೈಫಲ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ವೈಷ್ಣಾನಿ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಮೃತಪಟ್ಟಿರುವುದಾಗಿ ಆರೋಪಿಸಲಾಗಿತ್ತು. ಆ ಸಮಯದಲ್ಲಿ ಸಂಜಯ್‌ ಭಟ್ ಅವರು ಜಾಮ್‌ನಗರದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದರು. ಒಂಬತ್ತು ದಿನಗಳ ಕಾಲ ಬಂಧನದಲ್ಲಿದ್ದ ವೈಷ್ಣಾನಿ, ಜಾಮೀನಿನ ಮೇಲೆ ಬಿಡುಗಡೆಯಾದ 10 ದಿನಗಳ ನಂತರ ಮೃತಪಟ್ಟಿದ್ದ. ಪ್ರಭುದಾಸ್ ವೈಷ್ಣಾನಿ ಸಾವಿಗೆ ಮೂತ್ರಪಿಂಡ ವೈಫಲ್ಯ ಕಾರಣ ಎಂದು ವೈದ್ಯಕೀಯ ದಾಖಲೆ ತಿಳಿಸಿತ್ತು. ಆತನಿಗೆ ಕುಡಿಯಲು ನೀರು ಕೂಡ ನೀಡದೆ ಪೊಲೀಸರು ತಡೆದಿದ್ದರು ಎಂದು ವೈಷ್ಣಾನಿ ಕುಟುಂಬ ಆರೋಪಿಸಿತ್ತು.

ಕಸ್ಟಡಿ ಚಿತ್ರಹಿಂಸೆ ಆರೋಪದ ಮೇಲೆ ಭಟ್ ಮತ್ತು ಇತರ ಕೆಲವು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಜೂನ್ 2019ರಲ್ಲಿ ಜಾಮ್‌ನಗರ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಪ್ರಕರಣದಲ್ಲಿ ಭಟ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಪ್ರವೀಣ್‌ಸಿಂಹ ಝಲಾ ಅವರಿಗೆ ಸೆಕ್ಷನ್ 302, 323 ಮತ್ತು 506 (11) ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಇದಲ್ಲದೆ ಪೊಲೀಸ್ ಪೇದೆಗಳಾದ ಪ್ರವಿನ್‌ಸಿನ್ಹ್ ಜಡೇಜಾ, ಅನೋಪ್‌ಸಿನ್ಹ್ ಜೇತ್ವಾ ಮತ್ತು ಕೇಸುಭ ಡೊಲುಭಾ ಜಡೇಜಾ ಮತ್ತು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳಾದ ಶೈಲೇಶ್ ಪಾಂಡ್ಯ ಮತ್ತು ದೀಪಕ್‌ ಕುಮಾರ್ ಭಗವಾನದಾಸ್ ಶಾ ಕೂಡ ಕಸ್ಟಡಿ ಚಿತ್ರಹಿಂಸೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸೆಕ್ಷನ್ 323 ಮತ್ತು 506ರಡಿಯಲ್ಲಿ ಅವರಿಗೆ  ಶಿಕ್ಷೆ ವಿಧಿಸಿದೆ. ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ, ಪ್ರವೀಣ್‌ಸಿಂಹ ಝಲಾ, ಸಂಜಯ್‌ ಭಟ್, ಭಗವಾನದಾಸ್ ‍ಶಾ ಮತ್ತು ಪಾಂಡ್ಯ ಅವರು 2019ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಇದನ್ನು ಓದಿ: ‘ಶಾಸ್ತ್ರ’ಗಳಿಗೆ ವಿರುದ್ಧವಾಗಿ ‘ರಾಮಮಂದಿರ’ದ ಪ್ರಾಣ ಪ್ರತಿಷ್ಠಾನ: ಹಿಂದೂ ಮಠಾಧೀಶರ ಆರೋಪ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...