ಜೋರ್ಡಾನ್‌ನಲ್ಲಿ ಕೆಲಸ ನೀಡಿರುವ ಅಸೀಲ್ ಯೂನಿವರ್ಸಲ್ ಗಾರ್ಮೆಂಟ್ಸ್‌ನಿಂದ ಅಕ್ರಮವಾಗಿ ಇರಿಸಲ್ಪಟ್ಟಿದ್ದಾರೆ ಎನ್ನಲಾದ ಕಾರ್ಮಿಕರು ನ್ಯಾಯಾಲಯದ ಹೊರಗೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ ಜೋರ್ಡನ್ ಪೊಲೀಸರು ಅಮಾನವೀಯವಾಗಿ ಥಳಿದ್ದಾರೆ ಎಂದು ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.
ಜ 8ರಂದು ಅವರಿಗೆ ಬರಬೇಕಾದ ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಹಾಗೂ ಆಯಾ ದೇಶಗಳಿಗೆ ವಾಪಸ್ ಕಳುಹಿಸುವಂತೆ ಒತ್ತಾಯಿಸುತ್ತಿದ್ದರು. ಪೊಲೀಸರು ಮಾತುಕತೆ ನಡೆಸದೆ ಗುಂಪನ್ನು ಚದುರಿಸಲು ಪ್ರಯತ್ನಿಸಿದಾಗ, ಪರಿಸ್ಥಿತಿ ಉಲ್ಬಣಗೊಂಡಿದೆ. ಅವರು ಅಂತಿಮವಾಗಿ ಪ್ರತಿಭಟನಾಕಾರರ ಮೇಲೆ ಚಾರ್ಜ್ ಮಾಡಿದ್ದಾರೆ. ಈ ಘಟನೆಯಲ್ಲಿ ಏಳು ಭಾರತೀಯರು ಸೇರಿದಂತೆ, ಇತರ ದೇಶಗಳ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅಸೀಲ್ ಯೂನಿವರ್ಸಲ್ ಗಾರ್ಮೆಂಟ್ಸ್ ತಿಂಗಳಿನಿಂದ ಹಲವಾರು ಕಾರ್ಮಿಕರಿಗೆ ವೇತನ ನೀಡದೆ, ಕಾರ್ಮಿಕರನ್ನು ಕೆಲಸದ ಪರವಾನಗಿ ಮತ್ತು ವೀಸಾ ಕಸಿದುಕೊಂಡಿದೆ. ಭಾರತೀಯ ಪ್ರಜೆಗಳು ನವೆಂಬರ್‌ನಲ್ಲಿ ಜೋರ್ಡಾನ್‌ನ ಕಾರ್ಮಿಕ ನ್ಯಾಯಾಲಯದಲ್ಲಿ ಅಸೀಲ್ ವಿರುದ್ಧ ಪ್ರಕರಣವನ್ನು ದಾಖಲಿಸಿ ಗೆದ್ದಿದ್ದರು. ಎಲ್ಲ ಬಾಕಿಗಳನ್ನು ಪಾವತಿಸಲು ಮತ್ತು ಕಾರ್ಮಿಕರನ್ನು ಅವರ ದೇಶಗಳಿಗೆ ಕಳುಹಿಸುವಂತೆ ನ್ಯಾಯಾಲಯವು ಕಂಪನಿಗೆ ಆದೇಶಿಸಿದೆ. ಆದರೆ, ಕಂಪನಿ ಆದೇಶವನ್ನು ಪಾಲಿಸಿಲ್ಲ ಎನ್ನಲಾಗಿದೆ. ಕಾರ್ಮಿಕರಿಗೆ ನೀಡಿರುವ ವಸತಿ ಹಾಸ್ಟೆಲ್‌ಗಳಲ್ಲಿ ಆಹಾರ ಮತ್ತು ನೀರನ್ನು ನಿರಾಕರಿಸಲಾಗಿದೆ ಎಂದು ವರದಿಯಾಗಿದ್ದು, ರೊಚ್ಚಿಗೆದ್ದ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.
ಜನವರಿ 8ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಜೋರ್ಡಾನ್ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಚಾರ್ಜ್ ಮಾಡಿ, ಹಲವಾರು ಜನರು ಗಾಯಗೊಂಡರು. ಗಾಯಗೊಂಡವರಲ್ಲಿ ಏಳು ಮಂದಿ ಭಾರತೀಯರು. ರಾಜೂಕುಮಾರ್, ವಿಲ್ಸನ್, ಅಮೀರ್, ಮೊಹಮ್ಮದ್ ಸಮೀಮ್, ಸಂಜಯ್, ಮುನ್ನಾ ಮತ್ತು ಸಂತೋಷ್ ಎಂದು ತಮಿಳುನಾಡಿನ ಅರಿಯಲೂರು ಮೂಲದ ಪವೇಂದನ್ ರಾಜವೇಲ್ ಅವರು ಟಿಎನ್ಎಮ್‌ಗೆ ಹೇಳಿದ್ದಾರೆ.
Indian workers illegally retained in Jordan by their employer-Aseel Universal-were attacked by police while holding peaceful protests. "They repeatedly hit me in my head," one of the Indians said. Indians didn't even have money for treatment @IndiainJordan
Full story coming soon pic.twitter.com/UzCIl71dTj— Nidharshana Raju (@NidharshanaR) January 11, 2024
‘ನಾವು ಶಾಂತಿಯುತವಾಗಿ ಪ್ರತಿಭಟಿಸುತ್ತೇವೆ ಎಂದು ನಾವು ಪೊಲೀಸರೊಂದಿಗೆ ವಾದಿಸುತ್ತಿದ್ದೆವು. ಕೂಡಲೇ ಅವರು ನಮ್ಮ ಮೇಲೆ ಚಾರ್ಜ್ ಮಾಡಿ, ಅಶ್ರುವಾಯು ಹಾರಿಸಿದರು. ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಅನೇಕ ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಳಿದವರು ಪ್ರಾಣ ರಕ್ಷಣೆಗಾಗಿ ಓಡಿದೆವು. ನಂತರ ನಾವು ಸಾಧ್ಯವಾದಷ್ಟು ಗಾಯಾಳುಗಳನ್ನು ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಿದೆವು’ ಎಂದು ಘಟನೆ ಬಗ್ಗೆ ವಿವರಿಸಿದ್ದಾರೆ.
ಗಾಯಗೊಂಡ ಭಾರತೀಯರಲ್ಲಿ ಒಬ್ಬರಾದ ಬಿಹಾರ ಮೂಲದ ಮುನ್ನಾ ಮಾತನಾಡಿ, ‘ಪೊಲೀಸರು ಪದೇ ಪದೇ ತನ್ನ ತಲೆಗೆ ಹೊಡೆದಿದ್ದಾರೆ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಪೊಲೀಸರು ಬಂದು ಮೊದಲು ನಮ್ಮ ಪ್ಯಾಂಟ್ ಪಾಕೆಟ್‌ಗಳನ್ನು ಪರಿಶೀಲಿಸಿದರು. ನಂತರ ಬಂದು ನಮ್ಮನ್ನು ಎಳೆದುಕೊಂಡು ಹೋಗಿ ಥಳಿಸಿದ್ದಾರೆ. ಅವರು ನೇರವಾಗಿ 30 ನಿಮಿಷಗಳ ಕಾಲ ನನ್ನನ್ನು ಹೊಡೆದರು. ಅವರು ಪದೇಪದೇ ನನ್ನ ತಲೆಗೆ ಹೊಡೆದರು ಮತ್ತು ನಾವು ಮತ್ತೆ ಪ್ರತಿಭಟನೆ ಮಾಡುವ ಧೈರ್ಯ ಮಾಡಬಾರದು ಎಂದು ಹೇಳುತ್ತಲೇ ಇದ್ದರು’ ಎಂದು ಅವರು ಹೇಳಿದರು.
ಹಲವಾರು ತಿಂಗಳಿನಿಂದ ಕಾರ್ಮಿಕರಿಗೆ ಸಂಬಳ ಸಿಗದ ಕಾರಣ ಅವರಲ್ಲಿ ಹಲವರಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ‘ಇತರ ಕಾರ್ಖಾನೆಗಳಲ್ಲಿ ಮತ್ತು ಹತ್ತಿರದ ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕೆಲವು ಭಾರತೀಯರು ಬಂದು ನಮಗೆ ಸಹಾಯ ಮಾಡಿದರು. ಅವರು ನಮಗೆ ಆಹಾರವನ್ನು ಕೊಟ್ಟು, ಆಸ್ಪತ್ರೆ ಬಿಲ್ಲುಗಳನ್ನು ಪಾವತಿಸಲು ನಮಗೆ ಸಹಾಯ ಮಾಡಿದರು. ನಾವು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿ ಸಹಾಯ ಮಾಡುವಂತೆ ಕೇಳಿಕೊಂಡೆವು. ಅವರು ಸಹಾಯ ಮಾಡುವುದಾಗಿ ಹೇಳಿದರು. ಆದರೆ, ನಾಲ್ಕು ದಿನಗಳು ಕಳೆದಿವೆ; ಅವರು ನಮ್ಮ ರಕ್ಷಣೆಗೆ ಬಂದಿಲ್ಲ’ ಎಂದು ಪಾವೇಂದನ್ ಎನ್ನುವವರು ಅಸಮಾಧಾನ ಹೊರಹಾಕಿದ್ದಾರೆ.
120 ಭಾರತೀಯ ಕಾರ್ಮಿಕರಲ್ಲಿ, ನಾಲ್ವರು ತಮಿಳುನಾಡಿಗೆ ಸೇರಿದವರಾಗಿದ್ದು, ಹೆಚ್ಚಿನವರು ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದವರು.
ಇದನ್ನೂ ಓದಿ; ತಮಿಳುನಾಡು: ದಲಿತ ಯುವಕನನ್ನು ಮದುವೆಯಾದ ಯುವತಿ; ಪೋಷಕರಿಂದ ಮಾರ್ಯಾದೆಗೇಡು ಹತ್ಯೆ!


