Homeಕರ್ನಾಟಕರೈಡ್ ರದ್ದುಗೊಳಿಸಿದ ಮಹಿಳೆಯ ಮೇಲೆ ಹಲ್ಲೆ; ಆಟೋ ಚಾಲಕನನ್ನು ಬಂಧಿಸಿದ ಪೊಲೀಸರು

ರೈಡ್ ರದ್ದುಗೊಳಿಸಿದ ಮಹಿಳೆಯ ಮೇಲೆ ಹಲ್ಲೆ; ಆಟೋ ಚಾಲಕನನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ರೈಡ್ ರದ್ದುಗೊಳಿಸಿದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆಟೋ ರಿಕ್ಷಾ ಚಾಲಕನನ್ನು ಭಾನುವಾರ ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ವೈಟ್‌ಫೀಲ್ಡ್‌ನ ತೂಬರಹಳ್ಳಿಯಿಂದ ಆಟೊ ಬುಕ್ ಮಾಡಿದ್ದ ಮಹಿಳೆ, ಚಾಲಕ ಬಂದ ಮೇಲೆ ಅದನ್ನು ರದ್ದುಗೊಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ಚಾಲಕ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಸಮೀಪದ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆದಿರುವ ದೃಶ್ಯ ಸೆರೆಯಾಗಿದೆ.

ರೈಡ್ ರದ್ದುಗೊಳಿಸಿದ ಮಹಿಳೆ ಜೊತೆಗೆ ವಾಗ್ವಾದ ನಡೆಸಿರುವ ಚಾಲಕ, ಆಕೆಯನ್ನು ಆಟೋ ರಿಕ್ಷಾಕ್ಕೆ ಎಳೆಯಲು ಪ್ರಯತ್ನಿಸಿದ್ದಾನೆ. ನಂತರ, ಮಹಿಳೆ ವಾಹನದಿಂದ ಹೊರಬಂದಿದ್ದು, ಚಾಲಕ ಅವರನ್ನು ರಸ್ತೆಗೆ ತಳ್ಳಿದ್ದಾನೆ. ದಾರಿಹೋಕರು ಕೂಡ ಘಟನೆಗೆ ಸಾಕ್ಷಿಯಾಗಿದ್ದಾರೆ.

ಮಹಿಳೆ ತನ್ನ ಲಗೇಜ್‌ನೊಂದಿಗೆ ಕಿರಿದಾದ ಓಣಿಯಲ್ಲಿ ಆಟೋಗಾಗಿ ಕಾಯುತ್ತಿರುವಾಗ ಸ್ಥಳಕ್ಕೆ ಆಟೋ ಬಂದಿದೆ. ಸ್ವಲ್ಪ ಹೊತ್ತಿನ ಮಾತುಕತೆ ನಂತರ ಮಹಿಳೆ ತನ್ನ ರೈಡ್ ಅನ್ನು ರದ್ದುಗೊಳಿಸಿದ್ದಾರೆ. ನಂತರ, ಯೂ-ಟರ್ನ್ ತೆಗೆದುಕೊಂಡ ಆಟೋ ಚಾಲಕ, ಮಹಿಳೆ ಜತೆಗೆ ವಾಗ್ವಾದ ನಡೆಸಿ, ಅವರನ್ನು ಆಟೋದ ಒಳಗೆ ಎಳೆದುಕೊಳ್ಳಲು ಯತ್ನಿಸಿದ್ದಾನೆ. ಜನರು ಸ್ಥಳಕ್ಕೆ ಬರುತ್ತಿದ್ದಂತೆಯೇ ಆಟೋ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಸಂತ್ರಸ್ತೆ ತನ್ನ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ತಮ್ಮ ಪೋಸ್ಟ್ ಮೂಲಕ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರು ಕ್ರಮ ಕೈಗೊಂಡಿದ್ದು, ಆಟೋ ರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ.

‘ರ‍್ಯಾಪಿಡೋ ಸವಾರಿಗಳು ಸುರಕ್ಷಿತವೇ? ಇದು ನ್ಯಾಯವೇ? ಸಂತ್ರಸ್ತೆ ನನ್ನ ಸ್ನೇಹಿತೆಯಾಗಿದ್ದು, ಈ ಘಟನೆಯಿಂದ ನಾಉ ನಾವು ಅಸಹಾಯಕರಾಗಿದ್ದೇವೆ. ಅವಳು ಬೆಂಗಳೂರಿನಿಂದ ಹೊರಡಬೇಕಿತ್ತು, ಆಕೆಯ ರೈಲಿನ ಸಮಯದ ಕಾರಣದಿಂದ ದೂರು ದಾಖಲಿಸಲು ಸಾಧ್ಯವಾಗಲಿಲ್ಲ’ ಎಂದು ಆಕೆಯ ಸ್ನೇಹಿತ ರಾಜೇಶ್ ಪ್ರಧಾನ್ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ; ಭಾರತ್ ಜೋಡೊ ಯಾತ್ರೆ ಮೇಲೆ ಬಿಜೆಪಿಗರಿಂದ ದಾಳಿ: ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷನಿಗೆ ಗಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...